{"product_id":"vrudda-mattu-samudra-the-old-man-and-sea-novel-by-ernest-hemingway","title":"ವೃದ್ಧ ಮತ್ತು ಸಮುದ್ರ | ದಿ ಓಲ್ಡ್ ಮ್ಯಾನ್ ಅಂಡ್ ಸೀ (ಕಾದಂಬರಿ) - ಅರ್ನೆಸ್ಟ್ ಹೆಮಿಂಗ್ವೇ","description":"\u003cp\u003eವೃದ್ಧ ಮತ್ತು ಸಮುದ್ರ ಕೃತಿಯು ಪ್ರಸಿದ್ಧ ಇಂಗ್ಲಿಷ್ ಲೇಖಕ ಅರ್ನೆಸ್ಟ್ ಹೆಮಿಂಗ್ವೇಯ ಸಾಹಸಮಯ ಕಾದಂಬರಿ. ಇದು ಅಪರವಯಸ್ಕನೊಬ್ಬನ ಅದ್ಭುತ ಸಾಹಸಗಾಥೆ. ಸ್ಯಾಂಟಿಯಾಗೊ ಎಂಬ ವೃದ್ಧನೊಬ್ಬ ಸಾಗರದಲ್ಲಿ ಮೂರು ದಿನಗಳ ಕಾಲ ಬೃಹತ್ ಮೀನೊಂದರ ಜೊತೆ ಹೋರಾಡಿ ಗೆದ್ದು ಸೋತ ಕತೆ. 1953ರಲ್ಲಿ ಪುಲಿಟ್ಟರ್ ಪ್ರಶಸ್ತಿ ಮತ್ತು 1954ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡ ಕಾದಂಬರಿ. ಜೊತೆಗೆ ಅರ್ನೆಸ್ಟ್ ಹೆಮ್ಮಿಂಗೈಯ ಖ್ಯಾತಿಯನ್ನು ವಿಶ್ವವಿಖ್ಯಾತಿ ಮಾಡಿದ ಕಾದಂಬರಿ. ಈ ಕಾದಂಬರಿಯಲ್ಲಿ ಮೀನುಗಾರ ಮುದುಕನೊಬ್ಬ ತನ್ನ ಜೀವನಕ್ಕಾಗಿ ಸಮುದ್ರದೊಂದಿಗೆ ಮಾಡಿದ ಹೋರಾಟ, ತಾನು ಶಿಕಾರಿ ಮಾಡಿದ ಭಾರಿ ಮೀನಿನೊಂದಿಗಿನ ಹೋರಾಟ, ಆ ಶಿಕಾರಿ ಮೀನನ್ನು ತಿನ್ನಲು ಬಂದ ಶಾರ್ಕ್ ಮೀನುಗಳೊಂದಿಗಿನ ಹೋರಾಟ, ತನ್ನ ನಿದ್ದೆಯೊಂದಿಗಿನ, ಹಸಿವಿನೊಂದಿಗಿನ ಹೋರಾಟ, ಮರಗಟ್ಟಿ ಹೋಗುತ್ತಿದ್ದ ತನ್ನ ಅಂಗಾಂಗಗಳ ಅಶಕ್ತತೆಯೊಂದಿಗಿನ ಹೋರಾಟ, ಸಹನೆಯೊಂದಿಗೆ ನಡೆಸಿದ ಹೋರಾಟ, ಸಹನೆ ನಶಿಸಿ ಶರೀರ ಗಡ್ಡೆಕಟ್ಟಿ ಪ್ರಾಣ ಹೋಗುವಂತಾದರೂ ನಿಲ್ಲದ ಅವಿರತ ಹೋರಾಟ... ಹೀಗೆ ಅನೇಕ ಹೋರಾಟಗಳ ಸಾಹಸ ಕಥನ. ಆದರೆ ಈ ಎಲ್ಲ ಹೋರಾಟಗಳಲ್ಲಿ ಮುದುಕ ತನ್ನ ಆತ್ಮಶಕ್ತಿ ಮತ್ತು ಧೀಶಕ್ತಿಯಿಂದ ಗೆದ್ದು ಬೀಗಿದರೂ ಮೀನನ್ನು ದಕ್ಕಿಸಿಕೊಳ್ಳುವಲ್ಲಿ ಸೋತು ಹೋದ ಮೀನುಗಾರ ಮುದುಕನ ಕರುಣಾಜನಕ ಕತೆ, ಇದೊಂದು ವ್ಯಥಾಗಾಥೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":48576806224155,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vrudda-mattu-samudra-the-old-man-and-sea-novel-by-ernest-hemingway-4701535.jpg?v=1767534246","url":"https:\/\/beetlebookshop.com\/kn\/products\/vrudda-mattu-samudra-the-old-man-and-sea-novel-by-ernest-hemingway","provider":"Beetle Book Shop","version":"1.0","type":"link"}