{"product_id":"vismaya-vimarshe","title":"ವಿಸ್ಮಯ ವಿಮರ್ಶೆ","description":"\u003ch3 class=\"buy-product-style\" style=\"box-sizing: border-box; margin: 0px 0px 0.5rem; padding: 0px; font-weight: 500; line-height: 1.2; font-size: 20px; color: rgb(34, 37, 41); font-family: 'Open Sans', sans-serif; font-style: normal; font-variant-ligatures: normal; font-variant-caps: normal; letter-spacing: normal; orphans: 2; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(251, 251, 251); text-decoration-thickness: initial; text-decoration-style: initial; text-decoration-color: initial; text-align: left;\"\u003eವಿಸ್ಮಯ ವಿಮರ್ಶೆ (ಪೂರ್ಣಚಂದ್ರ ತೇಜಸ್ವಿ ಸಾಹಿತ್ಯದ ಅವಲೋಕನ)\u003cspan\u003e ಚಂದ್ರಕಾಂತ ವಡ್ಡು, Chandrakanta Vaddu\u003cbr\u003e\u003cbr\u003e\u003c\/span\u003e\n\u003c\/h3\u003e\n\u003cp\u003eಒಂದು ಕೃತಿಯನ್ನೋ, ಒಬ್ಬ ಕೃತಿಕಾರರನ್ನೋ ಆರಾಧಿಸುವವರು ಒಂದು ಕಡೆ ಇದ್ದರೆ ಇನ್ನೊಂದು ಕಡೆ ಆ ಕೃತಿಯಲ್ಲಿ ಇಲ್ಲವೇ ಕೃತಿಕಾರರ ರಚನೆಗಳಲ್ಲಿ `ಇರುವ' ಕೊರತೆಗಳನ್ನು ಎತ್ತಿ ತೋರಿಸುವವರು ಇರುತ್ತಾರೆ. ಪೂಚಂತೇ ಅವರ ಬರಹಗಳನ್ನು ಓದಿದವರು ಹೀಗೆ ಎರಡು ಎದುರುಬದುರಾದ ನೆಲೆಗಳಲ್ಲಿ ನಿಂತು ಮಾತಾಡುತ್ತಿರುವುದನ್ನು ಕಂಡಾಗ ಅದು ನನ್ನಂತಹ ವಯಸ್ಸಾದವರಲ್ಲಿ ಅಚ್ಚರಿಯನ್ನೇನೂ ಉಂಟುಮಾಡುವುದಿಲ್ಲ. ಈ ಅಭಿಪ್ರಾಯಗಳಿಗೆ ಕಾರಣಗಳು ಓದುಗರಲ್ಲಿ ಮತ್ತು ಸಮಕಾಲೀನ ಸಾಮಾಜಿಕ ಸಂದರ್ಭಗಳಲ್ಲಿ ಇರುತ್ತವೆಯೇ ಹೊರತು ಕೃತಿಗಳಲ್ಲೇ ಅಂತರ್ಗತವಾಗಿರುವುದಿಲ್ಲ.\u003c\/p\u003e\n\u003cp\u003eಪೂಚಂತೇ ಅವರ ಬರಹಗಳನ್ನು `ವಿಸ್ಮಯ'ದ ಸಾಕಾರ ರೂಪವೆಂದು ತಿಳಿಯುವವರು ತಾವೇ ಒಂದೋ ವಿಸ್ಮಯಗಳ ಬೆನ್ನು ಹತ್ತಿರುತ್ತಾರೆ, ಇಲ್ಲವೇ ವಿಸ್ಮಯಗಳಿಗೆ ಮರುಳಾಗಿರುತ್ತಾರೆ. ಇನ್ನೊಂದೆಡೆ ಪೂಚಂತೇ ಅವರು ಪಲಾಯನವಾದಿ ಬರಹಗಾರರು ಎಂದು ಹೇಳುವವರು ಯಾವುದೇ ಕೃತಿ ಇಲ್ಲವೇ ಕೃತಿಕಾರರನ್ನು ಕಟಕಟೆಯಲ್ಲಿ ಇರಿಸುವ ಇರಾದೆಯನ್ನು ಹೊಂದಿರುತ್ತಾರೆ; ಅದಕ್ಕೆ ಬೇಕಾದ ಸಾಹಿತ್ಯ ತತ್ವದ ಬೆಂಬಲವನ್ನು ಪಡೆದುಕೊಳ್ಳುತ್ತಿರುತ್ತಾರೆ. ಇದೊಂದು ಪ್ರಕ್ರಿಯೆ; ಇದು ಕೃತಿಗಳನ್ನು ಓದದೆಯೂ ಸಾಹಿತ್ಯ ಕುತೂಹಲಿಗಳಾಗಿರುವವರಿಗೆ ಅಗತ್ಯವಾದ ಸಾಮಗ್ರಿಯನ್ನು ಒದಗಿಸಬಲ್ಲುದು. ಇದನ್ನೇ ಸಾಹಿತ್ಯ ವಿಮರ್ಶೆ ಎಂದು ತಿಳಿಯುವ ತಪ್ಪನ್ನು ಮಾಡುವುದು ಮಾತ್ರ ಸರಿಯಾಗದು.\u003c\/p\u003e\n\u003cp\u003e* ಕೆ. ವಿ. ನಾರಾಯಣ\u003c\/p\u003e\n\u003ch3 class=\"buy-product-style\" style=\"box-sizing: border-box; margin: 0px 0px 0.5rem; padding: 0px; font-weight: 500; line-height: 1.2; font-size: 20px; color: rgb(34, 37, 41); font-family: 'Open Sans', sans-serif; font-style: normal; font-variant-ligatures: normal; font-variant-caps: normal; letter-spacing: normal; orphans: 2; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(251, 251, 251); text-decoration-thickness: initial; text-decoration-style: initial; text-decoration-color: initial; text-align: left;\"\u003e\u003cspan\u003e\u003cbr\u003e\u003c\/span\u003e\u003c\/h3\u003e","brand":"BEETLE BOOK SHOP","offers":[{"title":"Default Title","offer_id":49892785488155,"sku":"","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vismaya-vimarshe-5113688.jpg?v=1767530287","url":"https:\/\/beetlebookshop.com\/kn\/products\/vismaya-vimarshe","provider":"Beetle Book Shop","version":"1.0","type":"link"}