{"product_id":"videsha-prayana-kaitumba-kanchana","title":"Foreign travel is like having a handful of money (a good fortune).","description":"\u003cdiv\u003e\n\u003cp class=\"MsoNormal\"\u003e\u003cspan\u003e`\u003c\/span\u003e\u003cspan lang=\"KN\"\u003eವಿದೇಶ ಪ್ರಯಾಣ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಕೈತುಂಬಾ ಕಾಂಚಾಣ\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಎನ್ನುವ ಈ ಲೆಕ್ಕಾಚಾರ ಸರಿಯೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eನಿಜಕ್ಕೂ ನಮಗೆ ಅಷ್ಟೊಂದು ಹಣ ಸಿಗುತ್ತದೆಯೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eನಡುವೆ ಕಳೆದು ಹೋಗುವ ಕಾಲದಲ್ಲಿ ಬದುಕಿಗೆ ಸಾರ್ಥಕತೆ ಸಿಗಬಲ್ಲದೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಹಣದ ಹೊರತಾಗಿಯೂ ಝಣ-ಝಣವೆಂದು ಗಳಿಸುವುದೆಷ್ಟು\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಭರಪೂರ ಕಳೆದುಕೊಳ್ಳುವುದೆಷ್ಟು\u003c\/span\u003e\u003cspan\u003e?\u003cbr\u003e\u003cbr\u003e\u003c\/span\u003e\u003cspan\u003e***\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e \u003c\/span\u003e\u003cspan lang=\"KN\"\u003eಇಂಗ್ಲೆಂಡಿಗೆ ಬರಲು ಅತಿ ಬುದ್ಧಿವಂತಿಕೆಯೇನೂ ಬೇಕಿಲ್ಲ. ಪ್ರಯತ್ನ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅವಕಾಶ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eದುಡಿಯುವ ಛಾತಿ ಮತ್ತು ಬದ್ಧತೆಗಳದ್ದಿರೆ ಹೇರಳ ಅವಕಾಶಗಳಿವೆ.\u003c\/span\u003e\u003c\/p\u003e\n\u003cp class=\"MsoNormal\" align=\"center\"\u003e\u003cspan\u003e***\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e \u003c\/span\u003e\u003cspan lang=\"KN\"\u003eಸಾಂಸ್ಕೃತಿಕವಾಗಿ ಯು.ಕೆ. ಭಾರತಕ್ಕೆ ಹತ್ತಿರವಲ್ಲದದ್ದಿರೂ ಭಾರತವೇ ಅದರ ಹತ್ತಿರಕ್ಕೆ ಬಂದಿದೆ ಎಂದರೆ ತಪ್ಪಲ್ಲ. ಜಾಗತೀಕರಣದ ದಟ್ಟಪ್ರಭಾವದ ಕಾರಣ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಇಂದಿನ ತಲೆಮಾರಿನ ಭಾರತೀಯರು ಇಂಗ್ಲೆಂಡಿನ ಬದುಕಿಗೆ ಅತಿಸುಲಭವಾಗಿ ಒಗ್ಗಿಕೊಳ್ಳಬಲ್ಲರು. ಮಿಕ್ಕವರು ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.\u003c\/span\u003e\u003c\/p\u003e\n\u003cp class=\"MsoNormal\" align=\"center\"\u003e\u003cspan\u003e***\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e \u003c\/span\u003e\u003cspan lang=\"KN\"\u003eಭಾರತಕ್ಕೆ ಬರುವ ವಿದೇಶೀ ಮಹಿಳೆಯೊಬ್ಬಳನ್ನು ಯಾರೋ ಒಬ್ಬ ಭಾರತೀಯ ರೇಪ್ ಮಾಡಿದನೆಂದ ಮಾತ್ರಕ್ಕೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಭಾರತೀಯರೆಲ್ಲ ಹೇಗೆ ಅತ್ಯಾಚಾರಿಗಳಾಗುವುದಿಲ್ಲವೋ ಅಂತೆಯೇ ಪ್ರತಿ ದೇಶದಲ್ಲೂ ಬಹುತೇಕ ಒಳ್ಳೆಯ ಮತ್ತು ಕೆಲವು ಕೆಟ್ಟ ಜನರಿರುತ್ತಾರೆ. ಯು.ಕೆ.ಯೂ ಅದಕ್ಕೆ ಹೊರತಲ್ಲ.\u003c\/span\u003e\u003c\/p\u003e\n\u003cp class=\"MsoNormal\" align=\"center\"\u003e\u003cspan\u003e***\u003c\/span\u003e\u003c\/p\u003e\n\u003cp class=\"MsoNormal\"\u003e\u003cspan\u003e \u003c\/span\u003e\u003cspan lang=\"KN\"\u003eಕನ್ನಡಿಗರು ಎಂದ ಕೂಡಲೇ ಕನ್ನಡ ಸರಿಯಾಗಿ ಬರೆಯಲು ಬರದವರು ಇರುವ ಹಾಗೆಯೇ ಇಂಗ್ಲೀಷ್ ಚೆನ್ನಾಗಿ ಬರದ ಇಂಗ್ಲೀಷು ಜನರಿದ್ದಾರೆ. ಓದು-ಬರಹ ತಿಳಿದಿಲ್ಲದ ಜಿಪ್ಸಿ ಜನಾಂಗದವರೂ ಇದ್ದಾರೆ. ಬ್ರಿಟಿಷರಷ್ಟೇ ಶ್ರೇಷ್ಠ ಎನ್ನುವ ಆಲೋಚನೆಯ ಸಂಪ್ರದಾಯವಾದಿ ತೀವ್ರಗಾಮಿಗಳೂ ಇದ್ದಾರೆ. ವಲಸಿಗರ ಬಗ್ಗೆ ಇವರ ಮನಸ್ಸಿನಲ್ಲಿ ತಿರಸ್ಕಾರವಿದೆ. ಸಮಾಧಾನದ ವಿಚಾರವೆಂದರೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಹಿಷ್ಣುತೆ ಇರುವ ಜನರ ಸಂಖ್ಯೆ ಇಡೀ ಯೂರೋಪಿನಲ್ಲಿಯೇ ಅಧಿಕವಾಗಿರುವುದು ಯುನೈಟೆಡ್ ಕಿಂಗ್ಡಮ್ಮಿನಲ್ಲಿ.\u003c\/span\u003e\u003c\/p\u003e\n\u003cp class=\"MsoNormal\" align=\"center\"\u003e\u003cspan\u003e***\u003c\/span\u003e\u003c\/p\u003e\n\u003c\/div\u003e\n\u003cp\u003e\u003cspan class=\"gmail_signature_prefix\"\u003e--\u003c\/span\u003e\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51880338653467,"sku":null,"price":243.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/videsha-prayana-kaitumba-kanchanabeetle-book-shop-9187910.png?v=1773337926","url":"https:\/\/beetlebookshop.com\/kn\/products\/videsha-prayana-kaitumba-kanchana","provider":"Beetle Book Shop","version":"1.0","type":"link"}