{"product_id":"vaadi-samvaadi","title":"ವಾದಿ ಸಂವಾದಿ","description":"\u003cdiv\u003eಅನ್ನೋ ಬಯಕೆ ಯಾವಾಗಲೂ ಇರುತ್ತೆ. ನನ್ನ\u003c\/div\u003e\n\u003cdiv\u003eತಲೆಯಲ್ಲಿ ಬಂದು ಹೋಗುವ ಎಲ್ಲಾ\u003c\/div\u003e\n\u003cdiv\u003eಆಲೋಚನೆಗಳು ಕೈಯಲ್ಲಿ ಬರೋದಕ್ಕೆ ಸಾಧ್ಯ\u003c\/div\u003e\n\u003cdiv\u003eಆಗಬೇಕು. ನನ್ನ ಮನಸ್ಸಿನ ಕಲ್ಪನೆಗಳು ಬೆರಳಿಗೆ\u003c\/div\u003e\n\u003cdiv\u003eಬಂದು, ಬೆರಳುಗಳೇ ನನ್ನ ಕಲ್ಪನೆಗಳಾಗಿಬಿಡಬೇಕು.\u003c\/div\u003e\n\u003cdiv\u003eಆದರೆ ಆಶ್ಚರ್ಯ ಅಂದರೆ ನೀವು ಹೆಚ್ಚೆಚ್ಚು\u003c\/div\u003e\n\u003cdiv\u003eಸಾಧಿಸಿದಷ್ಟು ನಿಮ್ಮ ಕಲ್ಪನೆಗಳು ಹೆಚ್ಚೆಚ್ಚು\u003c\/div\u003e\n\u003cdiv\u003eಗರಿಗೆದರಿಕೊಂಡು ಬೆಳೆಯುತ್ತಾ ಹೋಗುತ್ತವೆ!\u003c\/div\u003e\n\u003cdiv\u003eಏಕೆಂದರೆ ನಮ್ಮ ಕಲ್ಪನೆಗಳು ಯಾವಾಗಲೂ\u003c\/div\u003e\n\u003cdiv\u003eನಮಗಿರುವ ನುಡಿಸುವ ಅಥವಾ ಹಾಡುವ\u003c\/div\u003e\n\u003cdiv\u003eಸಾಮರ್ಥ್ಯಕ್ಕೆ ಸೀಮಿತಗೊಂಡಿರುತ್ತವೆ.\u003c\/div\u003e\n\u003cdiv\u003eಇದಕ್ಕಾಗಿಯೇ ನಾವು ಅಭ್ಯಾಸ ಮಾಡುವುದು,\u003c\/div\u003e\n\u003cdiv\u003eಸಾಧನೆ ಮಾಡುವುದು. ನೀವು ಹೆಚ್ಚೆಚ್ಚು ಕಲಿತು,\u003c\/div\u003e\n\u003cdiv\u003eಸಾಧನೆ ಮಾಡಿದಂತೆಲ್ಲಾ ನಿಮ್ಮ ಬೆರಳುಗಳು\u003c\/div\u003e\n\u003cdiv\u003eಹೆಚ್ಚೆಚ್ಚು ಕೌಶಲವನ್ನು, ಸಾಮರ್ಥ್ಯವನ್ನು\u003c\/div\u003e\n\u003cdiv\u003eಪಡೆದುಕೊಳ್ಳುತ್ತದೆ. ಬೆರಳುಗಳ ಸಾಧ್ಯತೆಗಳೂ\u003c\/div\u003e\n\u003cdiv\u003eಹೆಚ್ಚುತ್ತಾ ಹೋಗುತ್ತವೆ. ನಮ್ಮ ಸಾಮರ್ಥ್ಯ\u003c\/div\u003e\n\u003cdiv\u003eಹೆಚ್ಚಾದಂತೆ, ನಮ್ಮ ಕಲ್ಪನೆಗಳು ಬೆಳೆಯುತ್ತವೆ.\u003c\/div\u003e\n\u003cdiv\u003eನೀವು ಔತ್ತಮ್ಯದ ಕಡೆಗೆ ಹೋದಷ್ಟೂ ನಿಮಗೆ\u003c\/div\u003e\n\u003cdiv\u003eಹೆಚ್ಚೆಚ್ಚು ಕಾಣಿಸಲು ಪ್ರಾರಂಭವಾಗುತ್ತದೆ. ನೀವು\u003c\/div\u003e\n\u003cdiv\u003eಹೆಚ್ಚು ಮೇಲೆ ಹೋದಷ್ಟೂ ನಿಮಗೆ ಹೆಚ್ಚು\u003c\/div\u003e\n\u003cdiv\u003eಕಾಣುತ್ತದೆ. ಒಂದು ಇನ್ನೊಂದನ್ನು ಹೆಚ್ಚಿಸುತ್ತಾ\u003c\/div\u003e\n\u003cdiv\u003eಹೋಗುತ್ತದೆ. ನೀವು ಮೇಲೆ ಹೋದಷ್ಟೂ ನಿಮಗೆ\u003c\/div\u003e\n\u003cdiv\u003eಇನ್ನಷ್ಟನ್ನು ಕಾಣುವ ತವಕ ಉಂಟಾಗುತ್ತದೆ.\u003c\/div\u003e\n\u003cdiv\u003eಇದಕ್ಕೆ ಕೊನೆಯೇ ಇಲ್ಲ. ಈ ಕ್ರಿಯೆಯೇ ತುಂಬು\u003c\/div\u003e\n\u003cdiv\u003eತೃಪ್ತಿಯನ್ನು, ಒಂದು ಪೂರ್ಣತೆಯ ಭಾವವನ್ನು\u003c\/div\u003e\n\u003cdiv\u003eತಂದುಕೊಡುವಂತಹುದು. ಹಾಗಾಗಿ ನಾವೆಲ್ಲಾ\u003c\/div\u003e\n\u003cdiv\u003eಹಾತೊರೆಯುವುದು ಈ ಚಿತ್ತಮ್ಯಕ್ಕಾಗಿಯೇ, ನಮ್ಮ\u003c\/div\u003e\n\u003cdiv\u003eಇಡೀ ಪಯಣವೇ ಈ ಚಿತ್ತಮ್ಯದೆಡೆಗೆ.\u003c\/div\u003e","brand":"BEETLE BOOK SHOP","offers":[{"title":"Default Title","offer_id":44889552945435,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/vaadi-samvaadi-8381344.jpg?v=1767537966","url":"https:\/\/beetlebookshop.com\/kn\/products\/vaadi-samvaadi","provider":"Beetle Book Shop","version":"1.0","type":"link"}