{"product_id":"untitled-12sept_11-56","title":"ಗವಾಕ್ಷಿ ( ಕಾದಂಬರಿ )","description":"\u003cp\u003eಒಂದು ಸಂಸಾರದಲ್ಲಿನ ಒಬ್ಬ ಪುಟ್ಟ ಬಾಲಕ ಇಲ್ಲಿ ಕಥೆ ಹೇಳುತ್ತಿದ್ದಾನೆ. ಅವನ ಮುಗ್ಧ ಮಾತುಗಳು ಆತ ಎಲ್ಲವನ್ನೂ ಗಮನಿಸುತ್ತಿರುವುದು ಗೊತ್ತಾಗುತ್ತದೆ. ಮನೆಯಲ್ಲಿನ ಒಂದು ಸಣ್ಣ ಸಪ್ಪಳದಿಂದ, ನಗುವಿನಿಂದ, ದೂರದ ಸದ್ದಿನಿಂದ ಈತ ಎಲ್ಲವನ್ನೂ ಅದೇನಿರಬಹುದೆಂದು ನಿಖರವಾಗಿ ಹೇಳುತ್ತಾನೆ. ಸಂಸಾರದಲ್ಲಿನ ಸಣ್ಣಪುಟ್ಟ ಬೇಸರಗಳನ್ನೂ ಧ್ವನಿಗಳಿಂದಲೇ ತಿಳಿಯಬಲ್ಲ. ಇಲ್ಲಿನ ಆಗುಹೋಗುಗಳು ವಿಶೇಷವಾದವುಗಳೇನಲ್ಲ; ಎಲ್ಲ ಸಂಸಾರಗಳಲ್ಲೂ ಇರುವಂಥವೇ. ಒಂದೇ ಸೂರಿನಡಿ ವಾಸಿಸುವ ವಿವಿಧ ಪಾತ್ರಗಳ ನಡವಳಿಕೆ ಮಾತ್ರ ವಿಭಿನ್ನ, ಆಳು-ಮಾಲಿಕ ಎಂಬ ತಾರತಮ್ಯ ಕತೆಯುದ್ದಕ್ಕೂ ಸಾಗಿ ಬಂದಿದೆ. ಸಂಘರ್ಷ-ಪ್ರೀತಿ- ಕನಿಕರ-ಬೇಸರ-ಸಂತೋಷ ಎಲ್ಲವೂ ಮೇಳೆಸಿರುವ ಸಂಸಾರದಲ್ಲಿ ಯಾವುದನ್ನೂ ಸರಿಪಡಿಸಲಾಗದ ದೌರ್ಬಲ್ಯವೊಂದು ಇಣುಕುತ್ತಲೇ ಇದೆ. ಬಾಲಕನೊಬ್ಬ ತನ್ನ ಪ್ರೌಢಾವಸ್ಥೆ ತಲುಪುವಲ್ಲಿನವರೆಗಿನ ಹಲವು ನೋಟಗಳು ಲಭ್ಯವಿವೆ.\u003c\/p\u003e\n\u003cp\u003e \u003c\/p\u003e\n\u003cp\u003e \u003c\/p\u003e","brand":"Beetle Book Shop","offers":[{"title":"Default Title","offer_id":46667284873499,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/gavakshi-novel-9768587.png?v=1767537007","url":"https:\/\/beetlebookshop.com\/kn\/products\/untitled-12sept_11-56","provider":"Beetle Book Shop","version":"1.0","type":"link"}