{"product_id":"untitled-11sept_06-57","title":"ಧವತಿ ( ಕಾದಂಬರಿ )","description":"\u003cp\u003eಸಾವಿರಾರು ವರ್ಷಗಳಿಂದ ಹರಿದು ಬಂದಯಾವುದೇ ಭಾಷೆಯ ನುಡಿಗಟ್ಟುಗಳಲ್ಲಿ ನಿರಂತರವಾಗಿ ಬಿಚ್ಚಿಕೊಳ್ಳುತ್ತಾ ಹೋಗುವ ಜ್ಞಾನ, ವಿವೇಕಗಳನ್ನು ಕಂಡು ಮನೋವಿಜ್ಞಾನಿ ಸಿಗಂಡ್ ಫ್ರಾಯ್ಡ್ ವಿಸ್ಮಯಗೊಳ್ಳುತ್ತಾನೆ. ಗಂಗಪ್ಪ ತಳವಾರ ಬರೆದ 'ಧಾವತಿ' ಕಾದಂಬರಿಯೊಳಗೆ ಕೋಲಾರ ಸೀಮೆಯ ಸುತ್ತಮುತ್ತಲ ಆಡುಮಾತಿನಲ್ಲಿ ಚಿಮ್ಮುವ ಬಾಳಿನ ಅನುಭವಗಳು, ಚಿತ್ರಗಳು ಹಾಗೂ ನೋಟಗಳನ್ನು ಕಂಡಾಗ ಫ್ರಾಯ್ಡ್ ವಿಸ್ಮಯ ನನ್ನ ಅರಿವಿಗೂ ಬರತೊಡಗಿತು. ತನ್ನ ತಾರುಣ್ಯವನ್ನು ಕೋಲಾರದ ಆದಿಮ ಬೆಟ್ಟದ ಸುತ್ತ ಕಳೆದಿರುವ ಅಸಲಿ ದನಿಯ ಕವಿ ಗಂಗಪ್ಪ ಬರೆದ ಈ ಪುಟ್ಟ ಕಾದಂಬರಿ ಕನ್ನಡ ಕಥಾಲೋಕಕ್ಕೆ ಇನ್ನೂ ಪರಿಚಯವಿರದ ಸ್ತ್ರೀಲೋಕವನ್ನು ಸಿದ್ಧ ಅನುಕಂಪದ ಗಡಿ ಮೀರಿ ಸಹಜವಾಗಿ ಗ್ರಹಿಸಲೆತ್ನಿಸಿದೆ. ಚಿಂದಿಯಾದ ಚಂದ್ರಿಯ ದಾರುಣ ಬದುಕಿನ ಏರುಪೇರು, ಅವಮಾನ, ಅವಳ ಕಣ್ಣು, ದೇಹ, ಆತ್ಮ, ಲಯ, ಮಾತು, ಮನೋಲೋಕಗಳ ಜೊತೆಗೇ ಸಾಗುವ ಕಾದಂಬರಿಕಾರ ಅವಳ ಮೈ ಮನಗಳ ಲಯಗಳಲ್ಲಿ ಬೆರೆತು ಬರೆಯುವ ರೀತಿ ಅನನ್ಯವಾಗಿದೆ.\u003c\/p\u003e\n\u003cp\u003eಕನ್ನಡ ಸಾಹಿತ್ಯ ಕಂಡ ಹಲವು ಚಳುವಳಿಗಳ ಗುರುತನ್ನು ಉಳಿಸಿಕೊಂಡೂ, ಆ ಮಾದರಿಗಳಾಚೆಗೆ ದಾಟಿ ಕತೆ ಹೇಳುವ ಕಾತರ ತೋರುವ 'ಧಾವತಿ' ಕಾದಂಬರಿ ವಿವಿಧ ದ್ರಾವಿಡ ಭಾಷೆಗಳು ಬೆರೆಯುವ ಸೀಮೆಯ ವಿಶಿಷ್ಟ ನುಡಿಗಟ್ಟಿಗಳಿಗೆ ಮಾತ್ರವೇ ದಕ್ಕಬಲ್ಲ ಲೋಕ ಸತ್ಯಗಳತ್ತ ಕೈ ಚಾಚಿದೆ; ಆ ಲೋಕದಿಂದಲೇ ಒಡಮೂಡಿದ ಶಕ್ತ ಕಾದಂಬರಿಕಾರನ ಹುಟ್ಟನ್ನು ಇಲ್ಲಿನ ಪುಟ ಪುಟವೂ ಸಾರುತ್ತದೆ. ತಮ್ಮ ಪಾತ್ರಗಳ ಸಾಮಾಜಿಕ ಭಿತ್ತಿಯ ಒಳಹೊರಗಿನಲ್ಲಿ ಇನ್ನಷ್ಟು ಆಳವಾಗಿ ತೊಡಗಿ, ಭಾಷೆಯ ಜೀವಂತಲಯಗಳ ಜೊತೆಗೆ ಬೆಸುಗೆಯರಿಯದಂತೆ ಬೆರೆವ ಕಲೆ ದಕ್ಕಿದ ದಿನ ಗಂಗಪ್ಪ ಕನ್ನಡದ ಮಹತ್ವದ ಕಾದಂಬರಿಕಾರರಾಗಬಲ್ಲರು.\u003c\/p\u003e\n\u003cp\u003e- ನಟರಾಜ್ ಹುಳಿಯಾರ್\u003c\/p\u003e","brand":"Beetle Book Shop","offers":[{"title":"Default Title","offer_id":46656306217243,"sku":"","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/dhavati-novel-3553766.png?v=1767534968","url":"https:\/\/beetlebookshop.com\/kn\/products\/untitled-11sept_06-57","provider":"Beetle Book Shop","version":"1.0","type":"link"}