{"product_id":"untitled-10aug_07-07","title":"ಮುಕ್ತಿ","description":"\u003cp\u003eಒಬ್ಬರು ತಮ್ಮ ಜೀವನವನ್ನು ತಾವೇ ನಡೆಸಬೇಕು. ಜೀವನದುದ್ದಕ್ಕೂ ತಮ್ಮ ಅನುಭವಗಳ ಶಿಲುಬೆಯ ಭಾರವನ್ನು ತಾವೇ ಹೊರಬೇಕು. ತನ್ನ ಜೀವನದ ರೀತಿನಿಯಮಗಳನ್ನು, ಮೌಲ್ಯಗಳನ್ನು ತನ್ನ ಇರುವಿಕೆಯೇ ನಿಶ್ಚಯಿಸಬಲ್ಲುದೇ ಹೊರತು, ವರದಿಂದ ಎರವಲು ತಂದ ಮೌಲ್ಯಗಳು ತನಗೆ ಸಾಲವು ಎಂಬ ಪ್ರಶ್ನೆಯುಳ್ಳ, ಬಹುಶಃ ಕನ್ನಡದ ಮೊತ್ತಮೊದಲ ವಿಶಿಷ್ಟ ಕಾದಂಬರಿ 'ಮುಕ್ತಿ'\u003c\/p\u003e\n\u003cp\u003eಕಾದಂಬರಿಯ ಕೇಂದ್ರ ವ್ಯಕ್ತಿ ಗೌರೀಶ, ತನಗೆ ಬಂದ ಪ್ರಚಂಡ ಅನುಭವಗಳಿಂದ, ರೂಪ ಆಕಾರವಿಲ್ಲದೆ ಘಾಸಿಗೊಳಿಸುವ ಭೂತಕಾಲದ ಭೂತದಿಂದ ಬಿಡುಗಡೆ ಪಡೆಯಲು ನಡೆಸಿದ ಹೋರಾಟವೇ ಈ ಕಾದಂಬರಿಯ ವಸ್ತು. ತಾನು ಪಾರಾಗಬಯಸುವ ಈ ನಿರಾಕಾರ ಅನುಭವಗಳಿಗೆ ಭಾಷೆಯಲ್ಲೇ ಒಂದು ಆಕಾರ ಕೊಡಬಯಸಿದಾಗ ಹುಟ್ಟಿದ ಆಕೃತಿ ಬದ್ಧವಾದ ನೆನವರಿಕೆಯೇ ಈ ಕಾದಂಬರಿಯ ಹರಹು. ಬದುಕು ಮತ್ತು ಕಲೆಗಳ ನಡುವಿರುವ ಸಂಬಂಧವನ್ನು ಅರಿಯುವ ದೃಷ್ಟಿ ಈ ಕಾದಂಬರಿಯ ತಂತ್ರವನ್ನು ನಿಶ್ಚಯಿಸಿದೆ.\u003c\/p\u003e\n\u003cp\u003eಬದುಕಿನಿಂದ ಪಲಾಯನ ಹೇಳಬೇಕು ಎಂಬ ನಿಶ್ಚಯದಿಂದ ಆರಂಭವಾದ ಕಥೆ, ಅದೇ ತಾನೇ ಜೀವ ತಳೆಯುತ್ತಿರುವ ಆರೋಗ್ಯವಂತ ಸದೃಢ ಹೊಸ ಸಂಬಂಧದ ಸೂಚನೆಯೊಂದಿಗೆ ಮುಗಿಯುತ್ತದೆ. ಮೇಲುನೋಟಕ್ಕೆ ಅನೈತಿಕವೆನ್ನಿಸಬಹುದಾದ ಸಂಬಂಧದ ನಿಜವಾದ ಅರ್ಥಮೌಲ್ಯಗಳನ್ನು ಅರಿಯುವುದೇ ಇಡೀ ಕಾದಂಬರಿಯ ಕಾಳಜಿಯಾಗಿದೆ.\u003c\/p\u003e\n\u003cp\u003eಅನುಭವವನ್ನು ನೋಡುವ ದೃಷ್ಟಿಯಲ್ಲಿಯಂತೆ ಅದನ್ನು ಭಾಷೆಯಲ್ಲಿ ಸಾಕಾರಗೊಳಿಸುವಲ್ಲಿ ವ್ಯಕ್ತಪಡಿಸಿದ ದಿಟ್ಟತನ, ಪ್ರಾಮಾಣಿಕತೆ, ಉಪಯೋಗಿಸಿದ ತಂತ್ರದಲ್ಲಿನ ನಾವೀನ್ಯ - ಈ ಕಾದಂಬರಿಯ ಮಹತ್ವದ ಗುಣಗಳಾಗಿವೆ.\u003c\/p\u003e\n\u003cp\u003e- ಯಶವಂತ ಚಿತ್ತಾಲ\u003c\/p\u003e","brand":"Beetle Book Shop","offers":[{"title":"Default Title","offer_id":46108461564187,"sku":"","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/mukti-8004131.png?v=1767535386","url":"https:\/\/beetlebookshop.com\/kn\/products\/untitled-10aug_07-07","provider":"Beetle Book Shop","version":"1.0","type":"link"}