ಹೆಚ್ಚುವರಿ ಮಾಹಿತಿ
ವಿವರಣೆ
ಸ.ನಾ.ಮೂರ್ತಿ, ಬಾಲ್ಯಸ್ನೇಹಿತ, ನನ್ನ ಆತ್ಮೀಯ ಮಿತ್ರ, ಕಾಲೇಜು ವ್ಯಾಸಂಗದಲ್ಲಿ ಒಡನಾಡಿಗಳು, ಒಂದೇ ಕೋಣೆಯಲ್ಲಿ ವಾಸವಿದ್ದು ಆತ್ಮೀಯತೆ ಹಂಚಿಕೊಂಡವರು. ಅವರ ತಂದೆ ಷಾಪೂರು ಸುಬ್ರಹ್ಮಣ್ಯಶಾಸ್ತ್ರಿಗಳು ಪಾಂಡಿತ್ಯಪೂರ್ಣ ಪುರೋಹಿತರು, ಗ್ರಾಮೀಣ ಜನರ ಹಿತ ಬಯಸಿದವರು. ನಾನು ಹೊನ್ನುಡಿ ಸಂಪಾದಕನಾಗಿದ್ದಾಗ ಮೂರ್ತಿ ಪತ್ರಿಕೆಯ ಅಂಕಣಕಾರರಾಗಿದ್ದರು. ಆಗ ಅವರು ಉಪನ್ಯಾಸಕರು. ಜೀವನದ ಸತ್ಯಗಳನ್ನು ತೆರೆದಿಡುವ ವಿಚಾರಪೂರ್ಣ ಬರೆಹಗಳನ್ನು 1980ರಲ್ಲಿಯೇ, ಅವರು ವಕೀಲರಾಗುವ ಮುನ್ನವೇ ಬರೆಯುವ ಅಭ್ಯಾಸ ಮಾಡಿಕೊಂಡಿದ್ದರು. ಆಗಲೇ ಅವರು ತಮ್ಮ ಸಾಹಿತ್ಯವನ್ನುಸೇರಿಸಿ ಪುಸ್ತಕ ಪ್ರಕಟಣೆ ಆರಂಭಿಸಿದ್ದರೆ, ಇಂದು ನೂರು ಪುಸ್ತಕಗಳಿಗೂ ಹೆಚ್ಚು ಪ್ರಕಟಗೊಳ್ಳುತ್ತಿದ್ದವೇನೋ? ವಕೀಲಿ ವೃತ್ತಿಯ ಕಾರಣ ಕಾಲಾವಕಾಶದ ಕೊರತೆಯಿಂದ ಬರೆಯುವ ಅಭ್ಯಾಸಕ್ಕೆ ವಿರಾಮ ನೀಡಿರಬಹುದು. ಆದರೂ ಅವರನ್ನು ಕಾಡುತ್ತಲೇ ಇದ್ದ ಪ್ರವೃತ್ತಿ ಇದೀಗ ಚೇತೋಹಾರಿಯಾಗಿದೆ. ಈಗಾಗಲೇ ಒಂದು ಕೃತಿ ಹೊರ ಬಂದಿದೆ. ಎರಡನೆಯದು ಇದೀಗ ನಿಮ್ಮ ಕೈಲಿದೆ. ಮನಸು ನಿಯಂತ್ರಣವಿಲ್ಲದ ಹುಚ್ಚುಕುದುರೆ. ನಮ್ಮನ್ನು ಹಾದಿ ತಪ್ಪಿಸಲು ಮನಸ್ಸು ಯಾವಾಗಲೂ ಹೊಂಚು ಹಾಕುತ್ತಿರುತ್ತದೆ. ಹುಚ್ಚು ಕುದುರೆಯನ್ನು ನಿಯಂತ್ರಿಸುವ ಲಗಾಮು ಬೇಕಲ್ಲವೆ? ಅದು ನಮ್ಮ ಬಳಿಯೇ ಇರಬಹದು. ಅದನ್ನು ತೋರುವವರು ಯಾರು? ಅದನ್ನು ಅನ್ವೇಷಿಸಿ ಎಲ್ಲಿ ಹೋಗುವುದು. ಅಂತಹ ಪರಿಣಾಮಕಾರೀ, ಶಕ್ತಿಯುತ ಲಗಾಮೇ ಸ.ನಾ. ಮೂರ್ತಿ ಅವರ ಬರೆಹಗಳು. ಮನಸ್ಸು ಮುದುಡಿದಾಗ ಮುದಗೊಳಿಸುವ ಜಾದು ಚಿಪ್ಪಿನೊಳಗೆ ಮುತ್ತುಗಳಂತೆ ಹುದುಗಿವೆ. ಈ ಮುತ್ತುಗಳನ್ನು ಮನನ ಮಾಡಿ ಮಾಲೆ ಮಾಡಿಕೊಂಡು ಮನದ ಗುಡಿಯಲ್ಲಿ ಧರಿಸಿದರೆ ಅವರ ಅಂತರಂಗದ ಮಾತುಗಳು ಸನ್ಮಾರ್ಗಕ್ಕೆ ಕೊಂಡೊಯ್ಯಬಲ್ಲದು.
ಅ.ನಾ.ಪ್ರಹ್ಲಾದರಾವ್ ಸಾಹಿತಿ, ಪದಬಂಧಕಾರರು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಬೆಂಗಳೂರು
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.