ಹೆಚ್ಚುವರಿ ಮಾಹಿತಿ
ವಿವರಣೆ
ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಮಾಸ್ ಕಮ್ಯುನಿಕೇಷನ್ ಮತ್ತು ಜರ್ನಲಿಸಂ ಸ್ನಾತಕೋತ್ತರ ಪದವೀಧರ ಸಂತೋಷ್ ಅನಂತಪುರ, ದೈನಂದಿನ ಯಾಂತ್ರಿಕ ಲೋಕದಿಂದ ಹೊರನುಸುಳಿ, ಓದುಗರ ಭಾವಲೋಕದ ಕದ ತಟ್ಟಬಲ್ಲ, ಬುದ್ದಿಯ ಮೇಲಿನ ಹೃದಯದ ಸವಾರಿ ಬಲು ದುಬಾರಿ ಎಂದು ನಂಬಿರುವ ಕತೆಗಾರ. ಇವರ 'ಜಿಡ್ಡು ಕೃಷ್ಣಮೂರ್ತಿ', 'ಕಾಗೆ ಮತ್ತು ಕಡ್ಲೆಬೇಳೆ ಪಾಯಸ', 'ಸವಾರಿ ಗಿರಿ..ಗಿರಿ..', ಕೃತಿಗಳು ವಿವಿಡ್ ಲಿಪಿ, ಮೈಲಾಂಗ್, ಋತುಮಾನಗಳಲ್ಲಿ ಇ-ಬುಕ್ ಆಗಿಯೂ ಮತ್ತು 'ಸ್ಟೋರಿ ಟೆಲ್' ಆಪ್ ನಲ್ಲಿ ಆಡಿಯೋ ಬುಕ್ ಆಗಿಯೂ ಓದಲು, ಕೇಳಲು ಸಿಗುತ್ತವೆ. ಅಷ್ಟೇ ಅಲ್ಲ 'ಕಾಗೆ ಮತ್ತು ಕಡ್ಲೆಬೇಳೆ ಪಾಯಸ' ಕಥಾ ಸಂಕಲನವು ಮಲಯಾಳಂಗೂ ತರ್ಜುಮೆಗೊಂಡು ಓದುಗರ ಕೈ ಸೇರಿದೆ.
ಮಾತ್ರವಲ್ಲ ಇತ್ತೀಚೆಗೆ 'ಆಳ ನೀಳ' ಪ್ರಬಂಧ ಸಂಕಲನವೂ ಲೋಕಾರ್ಪಣೆಗೊಂಡಿದೆ.
ಈ ಸಂಕಲನದಲ್ಲಿ ಸೇರಿಕೊಂಡಿರುವ ಹತ್ತೂ ಕತೆಗಳಿಗೆ ಒಬ್ಬೊಬ್ಬ ಓದುಗರ ಅನಿಸಿಕೆಗಳನ್ನು ದಾಖಲಿಸಿಕೊಂಡಿರುವುದು ವಿಶೇಷ.
'ಕೂಪ' ಕತೆಯ ಬಗ್ಗೆ ಬರೆಯುತ್ತಾ, 'ಸಪ್ತಭಾಷೆಗಳ ಸಂಗಮಸ್ಥಳ ಕಾಸರಗೋಡಿನ ಒಂದು ಪ್ರದೇಶದ ಜನರು ಸಾಮಾನ್ಯವಾಗಿ ಬಳಸುವ ಕನ್ನಡ, ತುಳು, ಕೊಂಕಣಿ, ಮಲೆಯಾಳಂ, ಬ್ಯಾರಿ ಹಾಗೂ ಹಿಂದಿ, ಇಂಗ್ಲಿಷ್ ಭಾಷೆಗಳು ಪರಸ್ಪರ ಬೆಸೆದುಕೊಂಡು ಒಂದು ಪ್ರತ್ಯೇಕ ಭಾಷೆಯಾಗಿ ಅಸ್ಮಿತೆ ಪಡೆಯುತ್ತಾ ದಟ್ಟ ವಿವರಗಳಲ್ಲಿ ಚಿತ್ರಣಗೊಳ್ಳುವ ಈ ಕತೆಗಳ ಅನನ್ಯ. 'ಪ್ರಾಯಶಃ ಕಾಸರಗೋಡು ಪ್ರದೇಶದ ಭಾಷೆ ಹಾಗೂ ಸಾಂಸ್ಕೃತಿಕ ವಿವರಗಳನ್ನು ಇಷ್ಟು ಸಶಕ್ತವಾಗಿ ಅಭಿವ್ಯಕ್ತಿಸಿದ ಕಥೆಗಳು ಇದುವರೆಗೆ ಕನ್ನಡದಲ್ಲಿ ಬಂದಿಲ್ಲವೆಂದೇ ಹೇಳಬೇಕು' ಎನ್ನುವ ಡಾ. ಪಾರ್ವತಿ ಜಿ. ಐತಾಳರ ಮಾತುಗಳು ನನ್ನವೂ ಕೂಡ. ಬರಹಗಳ ಬಹುಪಾಲನ್ನು 'ಆಪ್' ಗಳಲ್ಲೇ ಓದುವ ಈ ದಿನಗಳಲ್ಲೂ, 'ಆಪ್ ಕೇ ಸಾಥ್ ನಹೀ, ಅಷ್ಟೇ ಕೇ ಸಾಥ್' ಬರೆಯಬಲ್ಲ ಈ ಕಥೆಗಳನ್ನು ಓದುಗರು ಪ್ರೀತಿಯಿಂದ ತಮ್ಮದಾಗಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು.
ಬೊಳುವಾರು
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.