{"product_id":"the-pinaki-phantom","title":"ದಿ ಪಿನಾಕಿ ಫ್ಯಾಂಟಮ್","description":"ಅರಣ್ಯ ಎಂದರೆ ಕೇವಲ ಮನರಂಜನೆಗಾಗಿ ಹೋಗುವ ಸ್ಥಳವಲ್ಲ. ರೇಂಜರ್, ಫಾರೆಸ್ಟರ್, ಬೀಟ್ ಆಫೀಸರ್, ವಾಚರ್ಸ್, ಎಲ್ಲರೂ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡಬೇಕು. ಬೇಸಿಗೆಯಲ್ಲಿ ಅರಣ್ಯ ಸಿಬ್ಬಂದಿ ಮನೆಯಲ್ಲಿ ಸಾವಾಗಲಿ, ನಲಿವಾಗಲಿ ಸರಿಯಾದ ಸಮಯಕ್ಕೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇಂತಹ ತ್ಯಾಗ, ಒತ್ತಡದ ಮತ್ತು ಸವಾಲಿನ ಸಂದರ್ಭಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ನಾನು ಇಲ್ಲಿ ಬರೆದಿರುವ ಎಲ್ಲಾ ನರಹಂತಕ ಹುಲಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ಹತ್ತಿರದಿಂದ ನೋಡಿದ್ದೇನೆ. ಈ ಸಮಯದಲ್ಲಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಪಡುವ ಕಷ್ಟ, ಮಾನಸಿಕ ಮತ್ತು ದೈಹಿಕ ಹಿಂಸೆ, ಊಟ-ನೀರಿಲ್ಲದೆ ಪಡುವ ಯಾತನೆಯನ್ನು ಕಣ್ಣಾರೆ ಕಂಡಿದ್ದೇನೆ. ಪತ್ರಕರ್ತನಾಗಿ, ವನ್ಯಜೀವಿ ಪ್ರೇಮಿಯಾಗಿ, ಕಾಡಿನ ಪ್ರೇಮಿಯಾಗಿ, ಹಲವು ನೋವು-ನಲಿವುಗಳ ಸಮ್ಮಿಲನವೇ ಈ ಪುಸ್ತಕ.","brand":"BEETLE BOOK SHOP","offers":[{"title":"Default Title","offer_id":47607083925787,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/the-pinaki-phantom-1361490.jpg?v=1767535685","url":"https:\/\/beetlebookshop.com\/kn\/products\/the-pinaki-phantom","provider":"Beetle Book Shop","version":"1.0","type":"link"}