{"product_id":"the-miracle-of-mindfulness","title":"ದ ಮಿರಾಕಲ್ ಆಫ್ ಮೈಂಡ್‌ಫುಲ್‌ನೆಸ್ | ದ ಮಿರಾಕಲ್ ಆಫ್ ಮೈಂಡ್‌ಫುಲ್‌ನೆಸ್ (ಕನ್ನಡ)","description":"ಥಿಚ್ ನಾತ್ ಹಾನ್ ಅವರ ಮಾತು, ಪ್ರವಚನ, ಉಪದೇಶಗಳನ್ನು ಆಧರಿಸಿದ 'ಮಿರಾಕಲ್ ಆಫ್ ಮೈಂಡ್ ಫುಲ್‌ನೆಸ್' ಕೃತಿಯ ಅನುವಾದವಾಗಿರುವ ಈ ಪುಸ್ತಕವು ಆಧುನಿಕ ಮನುಷ್ಯನ ಕೆಲವು ಆಧ್ಯಾತ್ಮಿಕ ಗೊಂದಲಗಳಿಗೆ ಸರಳ ಉತ್ತರವನ್ನು ನೀಡಬಲ್ಲುದು. 'ಮೈಂಡ್ ಫುಲ್‌ನೆಸ್\" ಎಂಬ ಪದವನ್ನು ರಾಜಮಾನೆ 'ಮನೋಮಗ್ನತೆ' ಎಂದು ಟಂಕಿಸಿದ್ದಾರೆ. ಈ ಶಬ್ದದ ಮೂಲಕವೇ ಕೃತಿಯಲ್ಲಿನ ಅನುವಾದದ ಗುಣಾತ್ಮಕತೆ ತಿಳಿಯುತ್ತದೆ. ಇಲ್ಲಿನ ಭಾಷೆ ಸರಳವಾಗಿದೆ. ಓದುಗರು ಕೃತಿಯಲ್ಲಿ ಕಣ್ಣಾಡಿಸತೊಡಗಿದ್ದೇ ತಲ್ಲೀನರಾಗುವ ಗುಣವನ್ನು ಪಡೆದಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕ್ಷುದ್ರ ವಿಚಾರಗಳಲ್ಲಿ ತಲ್ಲೀನವಾಗಿರುವ ಮನಸ್ಸಿಗೆ ಸಂವೇದನಾಶೀಲತೆ ತುಂಬಿ ಎಚ್ಚರಗೊಳಿಸುವುದು, ಕ್ಷುಲ್ಲಕ ಕೆಲಸವನ್ನು ದೈವಿಕತೆಗೇರಿಸಿ ಅದನ್ನು ಸಾರ್ಥಕಗೊಳಿಸುವ ವಿಧಾನವನ್ನು ಹುಡುಕುವುದು, ಎಲ್ಲ ಇಂದ್ರಿಯಗಳನ್ನು ನಿಧಾನ ಹುರಿಗೊಳಿಸಿ ಕ್ರಿಯೆಯಲ್ಲಿ ತೊಡಗುವಂತೆ ಮಾಡುವುದು ಹಾನ್‌ರ ವಿಧಾನ. ಅಂದರೆ, ಅವರ ಆಧ್ಯಾತ್ಮಿಕ ಚಿಕಿತ್ಸಾ ವಿಧಾನದಲ್ಲಿ ನಡೆ-ನುಡಿ, ಕಾಯ-ಕ್ರಿಯೆ, ಎಚ್ಚರ-ನಿದ್ರೆ ಇತ್ಯಾದಿಗಳು ಬೇರೆ ಬೇರೆಯಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಕೇಶವ ಮಳಗಿ","brand":"BEETLE BOOK SHOP","offers":[{"title":"Default Title","offer_id":48101495570715,"sku":"","price":112.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/the-miracle-of-mindfulness-7275268.png?v=1767534968","url":"https:\/\/beetlebookshop.com\/kn\/products\/the-miracle-of-mindfulness","provider":"Beetle Book Shop","version":"1.0","type":"link"}