{"product_id":"the-alchemist-kannada","title":"ಅಲ್ಕೆಮಿಸ್ಟ್ - ಪಾಲೊ ಕೊಯೆಲೊ (ಕನ್ನಡ) | ದಿ ಅಲ್ಕೆಮಿಸ್ಟ್","description":"\u003cp\u003eತೀರಾ ಸರಳ ಮತ್ತು ಆತ್ಮವನ್ನೇ ನೆಚ್ಚಿಕೊಂಡು ಸಾಗಿದ ಒಬ್ಬ ಆಂಡಾಲ್ಯೂಸಿಯಾದ ಕುರಿಗಾಹಿ ಸ್ಯಾಂಟಿಯಾಗೋ ಎಂಬ ಹೆಸರಿನ ಬುದ್ಧಿವಂತ ಹುಡುಗನ ಕಥೆಯಿದು.\u003c\/p\u003e\n\u003cp\u003eಆಫ್ರಿಕಾದ ಪಿರೆಮಿಡ್ನ ಗುಪ್ತನಿಧಿಯ ಅನ್ವೇಷಣೆಗೆ ತನ್ನ ನಾಡಾದ ಸೈನ್ನಿಂದ ಮರುಭೂಮಿಯ ಮೂಲಕ ಹುಡುಗ ಹೊರಡುತ್ತಾನೆ. ಅವನ ಹಾದಿಯಲ್ಲಿ ಓರ್ವ ಜಿಪ್ಪಿ ಹೆಂಗಸು, ಸ್ವತಃ ರಾಜನೆಂದು ಕರೆಸಿಕೊಳ್ಳುವ ಒಬ್ಬ ವ್ಯಕ್ತಿ, ಮತ್ತು ಒಬ್ಬ ರಸವಾದಿ (ಆಲ್ಕೆಮಿಸ್ಟ್) ಎದುರಾಗುತ್ತಾರೆ. ಇವರೆಲ್ಲ ಸ್ಯಾಂಟಿಯಾಗೋನಿಗೆ 'ಅವನ ಅನ್ವೇಷಣೆಯ ದಿಕ್ಕನ್ನು ತೋರಿಸುತ್ತಾರೆ. ಆ ಗುಪ್ತನಿಧಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹುಡುಗ ತನ್ನ ಹಾದಿಯಲ್ಲಿ ಎದುರಾಗುವ ತಡೆಗಳಿಂದ ಹು ಪಾರಾಗಿ ನಿಧಿಯನ್ನು ತನ್ನದಾಗಿಸಿಕೊಳ್ಳುವನೋ ಎಂಬುದೂ ಯಾರಿಗೂ ಗೊತ್ತಿಲ್ಲ.\u003c\/p\u003e\n\u003cp\u003eಆದರೆ ಪ್ರಪಂಚದ ಅದೊಂದು ವಸ್ತುವಿನ ಅನ್ವೇಷಣೆಯಲ್ಲಿ ಶುರುವಾದ ಯಾತ್ರೆ ಅದು ತನ್ನೊಳಗೇ ಹುದುಗಿಕೊಂಡಿದೆ ಎಂದು ಸಾಬೀತಾಗುತ್ತದೆ. ಹುಡುಗನ ಈ ಚಿತ್ತಾಕರ್ಷಕ, ಪ್ರೇರಣಾತ್ಮಕ ಮತ್ತು ಮಾನವೀಯ ಮರ್ಮಗಳಿಂದ ಕೂಡಿದ ಕಥೆ ನಮ್ಮ ಕನಸುಗಳನ್ನು ರೂಪಾಂತರಿಸುವ ಶಕ್ತಿಯನ್ನು ಮತ್ತು ನಮ್ಮ ಹೃದಯದ ಧ್ವನಿಯನ್ನು ಆಲಿಸುವ ಮಹತ್ವವನ್ನು ತಿಳಿಸುವ ಮೂಲಕ ಒಂದು ಶಾಶ್ವತ ಪ್ರಮಾಣವಾಗಿ ಉಳಿಯುತ್ತದೆ.\u003c\/p\u003e\n\u003cp\u003e“ಪಾವ್ಲೋ ಕೊಯೆಲೋರ ಪುಸ್ತಕಗಳಿಂದ ಪ್ರಭಾವಿತರಾಗಿ ಲಕ್ಷಾನುಗಟ್ಟಲೆ ಜನರು ತಮ್ಮ ಬದುಕನ್ನು ಬದಲಾಯಿಸಿಕೊಂಡ ನಿದರ್ಶನಗಳಿವೆ.\"\u003c\/p\u003e\n\u003cp\u003e- ದಿ ಟೈಮ್ಸ್\u003c\/p\u003e","brand":"BEETLE BOOK SHOP","offers":[{"title":"Default Title","offer_id":50485874884891,"sku":null,"price":269.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/the-alchemist-kannada-6091207.jpg?v=1767529626","url":"https:\/\/beetlebookshop.com\/kn\/products\/the-alchemist-kannada","provider":"Beetle Book Shop","version":"1.0","type":"link"}