{"product_id":"tereda-nota","title":"Open view","description":"\u003cp\u003eನಾನು ವೈಯಕ್ತಿಕವಾಗಿ ಬಲ್ಲಂತೆ ಶಿವಣ್ಣ ಬಹಳ ಮೆದು ಸ್ವಭಾವದ, ಸೂಕ್ಷ್ಮ ಮನಸ್ಸಿನ ಸ್ನೇಹಶೀಲ ವ್ಯಕ್ತಿ. ಸಾಹಿತ್ಯಾಭ್ಯಾಸದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವಂತೆಯೇ, ಸಾಮಾಜಿಕ ಬದಲಾವಣೆಯ ಬಗ್ಗೆಯೂ ತುಡಿತಗಳನ್ನು ಹೊಂದಿರುವವರು, ಹಳೆ-ಹೊಸ ತಲೆಮಾರಿನ ಲೇಖಕರ ಕೃತಿಗಳನ್ನು ತೆರೆದ ಮನಸ್ಸಿನಿಂದ ಓದುವ ಶ್ರದ್ಧೆಯನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ 'ತೆರೆದ ನೋಟ' ಕೃತಿಯಲ್ಲಿನ ಲೇಖನಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಸಾಹಿತ್ಯವನ್ನು ಸಮಾಜವನ್ನು ಒಟ್ಟೋಟ್ಟಿಗಿಟ್ಟು ನೋಡಬೇಕೆನ್ನುವ ನಿಲುವುಳ್ಳ ಶಿವಣ್ಣನವರ ಬರವಣಿಗೆ ಮತ್ತಷ್ಟು ಗಹನವಾಗುವ ಕಡೆಗೆ ಮುನ್ನಡೆಯುವ ಛಾತಿ ಹೊಂದಿರುವುದನ್ನು ಈ ಬರಹಗಳು ನಿದರ್ಶಿಸುತ್ತಿವೆ. ಅವು ನನ್ನಲ್ಲಿ ಹುಟ್ಟಿಸಿರುವ ಭರವಸೆಗಳು ಖಂಡಿತ ಸುಳ್ಳಲ್ಲ ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿಸುತ್ತಿದೆ. ಒಟ್ಟಾರೆಯಾಗಿ ಹೇಳಬಹುದಾದ ಮಾತೆಂದರೆ ಶಿವಣ್ಣನವರಿಗೆ ಚಿಂತನೆಯ ಸ್ಪಷ್ಟತೆ, ಅಚ್ಚುಕಟ್ಟಾದ ಬರವಣಿಗೆಯ ಶೈಲಿ, ವಿಷಯ ಮಂಡನೆಯ ಮೇಲೆ ಹಿಡಿತಗಳಿದ್ದು ವೈವಿಧ್ಯಮಯವಾದ ಓದಿನಿಂದ ತಮ್ಮ ದೃಷ್ಟಿಕೋನವನ್ನು ರೂಪಿಸಿಕೊಂಡವರಾಗಿದ್ದಾರೆ.\u003c\/p\u003e\n\u003cp\u003e- ಬಂಜಗೆರೆ ಜಯಪ್ರಕಾಶ\u003c\/p\u003e","brand":"BEETLE BOOK SHOP","offers":[{"title":"Default Title","offer_id":49413476647195,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/tereda-nota-5366720.jpg?v=1767532445","url":"https:\/\/beetlebookshop.com\/kn\/products\/tereda-nota","provider":"Beetle Book Shop","version":"1.0","type":"link"}