{"product_id":"sufi-adhyatma-darshana","title":"ಸೂಫಿ ಅಧ್ಯಾತ್ಮ ದರ್ಶನ","description":"\u003cp\u003eಸಾಮಾನ್ಯವಾಗಿ ಜನರು ಸೂಫಿಗಳನ್ನು ಪ್ರಾಪಂಚಿಕವಾದ ಸಂಗತಿಯಿಂದ ವಿರಕ್ತರಾಗಿ ಶಾಂತಚಿತ್ತರಾಗಿ ಏಕಾಂತವಾಸ ಮಾಡುವವರು, ಧ್ಯಾನಾಸಕ್ತರಾಗಿರುವವರು, ವೈಯಕ್ತಿಕವಾಗಿ ಮೋಕ್ಷಸಾಧನೆಯಲ್ಲಿ ನಿರತರಾಗಿರುವವರು ಎಂದು ಅಭಿಪ್ರಾಯ ಪಡುತ್ತಾರೆ. ಆದರೆ, ಇದು ಸರಿಯಾದ ಚಿತ್ರಣವಲ್ಲವೆಂದೂ, ಸಂಕುಚಿತ ದೃಷ್ಟಿಯ ಅಭಿಪ್ರಾಯವೆಂದು ತಿಳಿಯಬೇಕಾಗುತ್ತದೆ. ತಮ್ಮ ಬದುಕಿನಲ್ಲಿ ಸೂಫಿಗಳು ನಿಜಕ್ಕೂ ಸದಾ ಧ್ಯಾನದಲ್ಲಿ ಮಗ್ನರಾಗಿರುವವರಾದರೂ, ಜಗತ್ತನ್ನು ಸಂಪೂರ್ಣವಾಗಿ ತೊರೆದಿರುವವರು ಎನ್ನಲಾಗದು. ತಮ್ಮ ವೈಯಕ್ತಿಕ ಸಾಧನೆಯ ಗುರಿಯನ್ನು ಮಾತ್ರ ಹೊಂದಿರದೆ, ಸಮಸ್ತ ಮಾನವೀಯ ಅಂತಸ್ಸಾಕ್ಷಿಯ ಮತ್ತು ನೈತಿಕತೆಯ ಪ್ರತೀಕವಾಗಿ ಕಂಡುಬರುತ್ತಾರೆ. ವೈಯಕ್ತಿಕ ಮೋಕ್ಷಸಾಧನೆಯಲ್ಲಿ ಮಾತ್ರ ನಿರತರಾಗಿರದೆ ತಮ್ಮ ಪ್ರವಚನಗಳು, ಬೋಧನೆಗಳ ಮೂಲಕ ಮುಂದಿನ ಜನಾಂಗದ ಮಾರ್ಗದರ್ಶಿಗಳಾಗಿ ಮತ್ತು ಸರ್ವ ಮಾನವ ಜನಾಂಗದ ಒಳಿತಿಗಾಗಿ ಸದಾ ಕಾರ್ಯೋನ್ಮುಖರಾಗಿರುವವರು. ತಮ್ಮ ಹಿರಿಯ ಸೂಫಿ ಉಲೇಮಾಗಳು (ಗುರುಗಳು) ಹಾಕಿಕೊಟ್ಟ ಸರ್ವ ಜನಾಂಗದ ಶಾಂತಿ, ಸಹೋದರತ್ವ, ಸೌಹಾರ್ದತೆ, ಪ್ರೇಮದ ಅಧ್ಯಾತ್ಮ ಪಥ ಮುಂತಾದ ಮಾರ್ಗದರ್ಶಿ ತತ್ವಾದರ್ಶಗಳನ್ನು, ತಮ್ಮ ಕಾಲದ ನಿಯಮ, ಆದರ್ಶಗಳಿಗೆ ಅಳವಡಿಸಿಕೊಂಡು ನಡೆಸುವ\u003c\/p\u003e\n\u003cp\u003eಹೊಣೆಗಾರಿಕೆಯನ್ನು ನಿಭಾಯಿಸುವ ಮಹತ್ವದ ಉದ್ದೇಶ ತಮ್ಮ ಮುಂದಿದೆ ಎಂದು ಇವರು ತಿಳಿದಿರುತ್ತಾರೆ. ಬದುಕು ಮತ್ತು ಬದುಕಿನ ಸೃಷ್ಟಿಯೇ ಒಂದು ಅಧ್ಯಾತ್ಮ ರಹಸ್ಯವೆಂದು ಸೂಫಿ ಪಥವನ್ನು ಆರಿಸಿಕೊಂಡ ಸಾಧಕರು ತಿಳಿದಿರುತ್ತಾರೆ.\u003c\/p\u003e\n\u003cp\u003e-ಫಕೀರ್ ಮುಹಮ್ಮದ್ ಕಟ್ಟಾಡಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":46828990595355,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sufi-adhyatma-darshana-2697053.png?v=1767534727","url":"https:\/\/beetlebookshop.com\/kn\/products\/sufi-adhyatma-darshana","provider":"Beetle Book Shop","version":"1.0","type":"link"}