{"product_id":"stapathi-a-journey-with-artisans","title":"ಸ್ಥಪತಿ (ಕಲಾವಿದರೊಂದಿಗೆ ಒಂದು ಪಯಣ) | Stapathi (A Journey with Artisans)","description":"\u003cp\u003e\u003cspan\u003eರೂವಾರಿಗಳ ಜತೆ ಷ. ಶೆಟ್ಟರ್ ಪಯಣ ಉಪಶೀರ್ಷಿಕೆಯ ‘ಸ್ಥಪತಿ’  ಕೃತಿಯನ್ನು ಹಿರಿಯ ಲೇಖಕ ಶಾಂತಿನಾಥ ದಿಬ್ಬದ ಅವರು ಇಂಗ್ಲಿಷ್ ನಿಂದ ಕನ್ನಡೀಕರಿಸಿದ್ದಾರೆ. ಶಿಲ್ಪಿಗಳು ಮತ್ತು ಶಾಸನ ಲೆಕ್ಕಣಿಕರ ಮೇಲೆ ಅವರು ಇಂಗ್ಲಿಷಿನಲ್ಲಿ ಬರೆದ ಪ್ರಬಂಧಗಳನ್ನು ಅನುವಾದಿಸಲಾಗಿದೆ. ಪ್ರಸ್ತುತ ಸ್ಥಪತಿ ಹೊತ್ತಿಗೆಯಲ್ಲಿ ಮೂರು ಭಾಗಗಳಿವೆ . ಮೊದಲನೆಯ ವಿಭಾಗದಲ್ಲಿ ಭಾರತದ ಮುಖ್ಯ ಶಿಲ್ಪಿಗಳನ್ನು ಕುರಿತ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಸುಮಾರು 7-8ನೆಯ ಶತಮಾನದಿಂದ 17-18ನೆಯ ಶತಮಾನದವರೆಗಿನ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಮಾಸ್ತಿ, ವೀರಗಲ್ಲು ಮತ್ತು ನಿಷಿಧಿಗಳಲ್ಲಿರುವ ಶಾಸನಗಳನ್ನು ಅಭ್ಯಾಸಿಸಿ ಲೆಕ್ಕಣಿಕಾರರ ಬಗ್ಗೆ ಬರೆದ ಪ್ರಬಂಧಗಳಿವೆ. ಮೂರನೆಯ ಭಾಗದಲ್ಲಿ , ಹೊಯ್ಸಳ-ವಿಜಯನಗರ ಕಾಲದ ರಾಜಕೀಯ ಚರಿತ್ರೆ, ಶಿಲ್ಪಿಗಳ ಕಾರ್ಯವಿಧಾನ, ಶೈವ, ಜೈನ, ವೈಷ್ಣವ ದೇವಾಲಯ ಮುಂತಾದವನ್ನು ವಿವೇಚಿಸಿ ಅವುಗಳನ್ನು ರಚಿಸಿದ ಸ್ಥಪತಿಗಳ ಬಗ್ಗೆ ಬರೆದ ದೀರ್ಘ ಪ್ರಬಂಧಗಳಿವೆ. ಕೊನೆಯ ಭಾಗದಲ್ಲಿ ಕದಂಬರಿಂದ ಕುಷಾಣರವೆರೆಗೆ ಭಾರತದಲ್ಲಿದ್ದ ಶಿಲ್ಪಗಳ ಬಗೆಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸಿದ್ದಾರೆ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51728597352731,"sku":null,"price":405.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/stapathi-a-journey-with-artisans-beetle-book-shop-1222643.png?v=1770295510","url":"https:\/\/beetlebookshop.com\/kn\/products\/stapathi-a-journey-with-artisans","provider":"Beetle Book Shop","version":"1.0","type":"link"}