{"product_id":"srikrishna-alanahalli-samagra-kathegalu","title":"ಶ್ರೀಕೃಷ್ಣ ಅಲನಹಳ್ಳಿ ಸಮಗ್ರ ಕಥೆಗಳು - Srikrishna Alanahalli Samagra Kathegalu","description":"\u003cp\u003e'ಮಣ್ಣಿನ ಹಾಡು' ಕಾವ್ಯದ ವಿಶಿಷ್ಟತೆಯಿಂದಾಗಿ ಕನ್ನಡದ ಅಪೂರ್ವ ಹೆಸರಾಗುಳಿದ ಶ್ರೀಕೃಷ್ಣ ಆಲನಹಳ್ಳಿ ಕಾವ್ಯದಲ್ಲಿ ಮಾತ್ರವಲ್ಲದೆ ಸಣ್ಣಕತೆ, ಕಾದಂಬರಿ ವಿಸ್ತಾರದಲ್ಲೂ ತಮ್ಮನ್ನು ಒಳಗುಮಾಡಿಕೊಂಡಿದ್ದಾರೆ. ದಟ್ಟ ಅನುಭವ ಮತ್ತು ಸಮರ್ಥ ಅಭಿವ್ಯಕ್ತಿಯ ಫಲವಾಗಿರುವ 'ತಪ್ತ' ಕಥಾಸಂಕಲನ ಮತ್ತು 'ಕೌರ್ಯ' ಕಾದಂಬರಿಗಳು ಈ ಹೆಸರನ್ನು ಮತ್ತಷ್ಟು ಗಟ್ಟಿಯಾಗಿಸಬಲ್ಲ ಸತ್ವವನ್ನೊಳಗೊಂಡಿವೆ.\u003c\/p\u003e\n\u003cp\u003eಮಣ್ಣಿನ ಹಾಡಿನ ಮುನ್ನುಡಿಯಲ್ಲಿ ಕವಿ ಅಡಿಗರು- 'ಇಲ್ಲಿ ಮಿಡಿಯುತ್ತಿರುವುದು ನಿಜವಾದ ಸತ್ವಶಾಲಿಯಾದ ಕವಿಯೊಬ್ಬನ ಜ್ವಲಂತ ಅಂತರಂಗ' ಎಂದು ಹೇಳಿದ ಮಾತು ಕಾವ್ಯದಷ್ಟೇ ಪ್ರಖರತೆಯುಳ್ಳ, ಇವರ ಸಣ್ಣಕತೆ ಕಾದಂಬರಿಗಳಿಗೂ ಅನ್ವಯಿಸುತ್ತದೆ. ಮಣ್ಣಿನ ಹಾಡಿನ ಜೊತೆ ಜೊತೆಯಲ್ಲಿ ರೂಪುಗೊಂಡಿರುವ ಈ ಕೃತಿಗಳು ಕಾವ್ಯದಷ್ಟೆ ಉತ್ಕಟತೆಯನ್ನುಂಟುಮಾಡಬಲ್ಲವಾಗಿವೆ\u003c\/p\u003e\n\u003cp\u003e. 'ದೇವನೂರು ಮಹಾದೇವ\u003c\/p\u003e\n\u003cp\u003e \u003c\/p\u003e\n\u003cp\u003eನೆಲದ ದಟ್ಟ ವಾಸನೆಯಿರುವ ತನ್ನ ಬಾಲ್ಯದ ಸಂವೇದನೆಯನ್ನೂ, ತನ್ನ ಬಾಳನ್ನು ವಿವಿಧ ದಿಕ್ಕುಗಳಲ್ಲಿ ಹೊರಳಿಸುತ್ತಿರುವ ಪ್ರಬುದ್ಧ ಜೀವನದ ವೈಚಾರಿಕತೆಯನ್ನೂ ಒಟ್ಟಿಗೇ ಏಕಕಾಲದಲ್ಲಿ ದುಡಿಸಿಕೊಂಡು ತನ್ನ ನೈಜವಾದ ವ್ಯಕ್ತಿತ್ವಕ್ಕೆ ಅರ್ಥಪೂರ್ಣವಾದ ರೂಪವನ್ನು ಕೊಡುವುದು ಶ್ರೀಕೃಷ್ಣರ ಕಲೆಗಾರಿಕೆಯ ಮುಖ್ಯ ಹೋರಾಟವಾಗಿದೆ ಎಂಬುದು ಈ ಕಥೆಗಳಿಂದ ಸ್ಪಷ್ಟವಾಗುತ್ತದೆ.\u003c\/p\u003e\n\u003cp\u003eಯು. ಆರ್. ಅನಂತಮೂರ್ತಿ\u003c\/p\u003e\n\u003cp\u003e \u003c\/p\u003e\n\u003cp\u003eಶ್ರೀಕೃಷ್ಣನದು ಆತ್ಮಕಥನಾತ್ಮಕ ಶೈಲಿ. ಇಲ್ಲಿನ ಎಲ್ಲ ಕಥೆಗಳ ನಾಯಕನೂ ಆತನೇ. ಕನ್ನಡದಲ್ಲಿ ನವ್ಯ ಸಾಹಿತ್ಯದ ಔನ್ನತ್ಯದ ಕಾಲದಲ್ಲಿ ರೂಪುಗೊಂಡ ಲೇಖಕ. ನವ್ಯದ ಎಲ್ಲ ಪ್ರಮುಖ ಗದ್ಯ ಲೇಖಕರ ಹಾಗೆಯೇ ಶ್ರೀಕೃಷ್ಣ ಕೂಡ ಅತ್ಯಂತ ಸಮರ್ಥವಾಗಿ ಕನ್ನಡ ಭಾಷೆಯನ್ನು ಬಳಸಿರುವಂಥ ಪ್ರತಿಭಾಶಾಲಿ. ಸೂಕ್ಷ್ಮವಾದ ಅನುಭವಗಳನ್ನು ಭಾಷೆಯಲ್ಲಿ ಹಿಡಿದಿಡುವ ಆತನ ಕ್ರಮ ಪ್ರಶಂಸನೀಯ.\u003c\/p\u003e\n\u003cp\u003eಅಗ್ರಹಾರ ಕೃಷ್ಣಮೂರ್ತಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":51870709907739,"sku":null,"price":265.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/srikrishna-alanahalli-samagra-kathegalubeetle-book-shop-9935204.jpg?v=1773243727","url":"https:\/\/beetlebookshop.com\/kn\/products\/srikrishna-alanahalli-samagra-kathegalu","provider":"Beetle Book Shop","version":"1.0","type":"link"}