ಹೆಚ್ಚುವರಿ ಮಾಹಿತಿ
ವಿವರಣೆ
ಸಾಧಕರಲ್ಲಿ ಎರಡು ವಿಧ. ತಮ್ಮ ಸಾಧನೆಗೂ ಹಾಗೂ ತಾವು ಬದುಕಿದ ಪರಿಗೂ ಅಪಾರ ವ್ಯತ್ಯಾಸ ಇರುವವರು ಒಬ್ಬರಾದರೆ, ತಾವು ಸಾಧನೆಗೈದ ರೀತಿಯಲ್ಲಿಯೇ ಬದುಕಿಬಾಳಿದವರು ಇನ್ನೊಬ್ಬರು. ನಮ್ಮ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಎರಡನೆಯ ಗುಂಪಿನಲ್ಲಿರುವ ಅಗ್ರಮಾನ್ಯರಲ್ಲಿ ಒಬ್ಬರು.
ಈ ಕೃತಿ ಸರ್ ಎಂ.ವಿ. ಅವರ ಕುರಿತಾಗಿ. ಆದರೆ ಇಲ್ಲಿ ಅವರ ಬದುಕಿನ ವಿವರಗಳು ಇಲ್ಲ. ಅವರ ವೈಯಕ್ತಿಕವಾದ ವಿಚಾರಗಳಿಲ್ಲ. ಸೂಕ್ಷ್ಮವಾಗಿ ಹೇಳುವುದಾದರೆ, ಈ ಕೃತಿ ಅವರ ಬಯೋಡೇಟ ಅಲ್ಲವೇ ಅಲ್ಲ. ಈ ಎಲ್ಲ ಸಂಗತಿಗಳೂ ಗೂಗಲ್ನಲ್ಲಿ ಲಭ್ಯ. ಹಾಗದ್ದಿರೆ, ಈ ಕೃತಿಯಲ್ಲಿ ಇರುವುದಾದರೂ ಏನು?
ಸರ್ ಎಂ.ವಿ. ಅವರ ಬದುಕಿನಲ್ಲಿ ಅವರಿಗೆ ಎದುರಾದ ಅನೇಕ ಸವಾಲುಗಳ, ಸನ್ನಿವೇಶಗಳ ಉಲ್ಲೇಖವಿದೆ. ಅವುಗಳನ್ನು ಅವರು ಎದುರಿಸಿದ ರೀತಿ, ಬಲು ಕ್ಲಿಷ್ಟವಾದ ಯೋಜನೆಗಳನ್ನು ಸರಾಗವಾಗಿ ನಿಭಾಯಿಸಿದ ಪರಿ, ಇವೆಲ್ಲಕ್ಕೂ ಮೂಲವಾಗಿ ಅವರು ತಮ್ಮ ಜೀವನದಲ್ಲಿ ರೂಢಿಸಿಕೊಂಡದ್ದಿ ಮನಸ್ಥಿತಿ ಹಾಗೂ ಕಾರ್ಯವೈಖರಿ ಈ ಕೃತಿಯ ಜೀವಾಳ. ಸರ್ ಎಂ.ವಿ. ಅವರ ಕುರಿತು ಇಂತಹ ಸಂಗತಿಗಳನ್ನು ಓದಿದಾಗ ಕೇವಲ ಮನಸ್ಸಿಗೆ ಹಾಯ್ ಎನ್ನಿಸುವುದು ಮಾತ್ರವಲ್ಲ, ಇಲ್ಲಿನ ಪ್ರತಿಯೊಂದು ಲೇಖನದಿಂದಲೂ ನಮ್ಮೆಲ್ಲರ ಬದುಕಿಗೆ ಒಂದು ಪಾಠ ದೊರೆತೀತು. ನಮ್ಮ ಬದುಕಿನ ಮಾರ್ಗದಲ್ಲಿ ಬೆಳಕು ಕಂಡೀತು. ಹಾಗಾಗಿ, ಇಲ್ಲಿನ ಪ್ರತಿಯೊಂದು ಲೇಖನದಲ್ಲಿಯೂ ಸರ್ ಎಂ.ವಿ. ಅವರು ನಮ್ಮ ಯಶಸ್ಸಿಗೆ ನೀಡಿರುವ ಕಲಿಕೆ ಇದೆ. ಇದನ್ನು ಓದುವುದರಿಂದ ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ನಾವೆಲ್ಲ ಚೆಂದದಲ್ಲಿ ಬದುಕುತ್ತ ನಮ್ಮ ನಮ್ಮ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವುದರಲ್ಲಿ ಸಂಶಯವಿಲ್ಲ.
ಇಂತಹ ಅತ್ಯಮೂಲ್ಯವಾದ ಕಲಿಕೆಗೆ ನಮಗಿರುವ ಕೆಲವೇ ಕೆಲವು ಮಹಿಮರಲ್ಲಿ- ಸರ್ ಎಂ.ವಿ. ಅವರು ಉತ್ತುಂಗದಲ್ಲಿ.
ಏಕೆಂದರೆ ಎಂದೆಂದಿಗೂ ಅವರ ಸಾಧನೆ, ಯುವಜನತೆಗೆ ಬೋಧನೆ.ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.