{"product_id":"science-in-religious-samskaras-kannada-edition","title":"ಧಾರ್ಮಿಕ ಸಂಸ್ಕಾರಗಳಲ್ಲಿ ವಿಜ್ಞಾನ | Science in Religious Samskaras (Kannada)","description":"ನುಡಿ-ನಮನ\u003cbr data-mce-fragment=\"1\"\u003eಪರಮಪೂಜ್ಯ ಡಾ|| ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರರು ವೀರಾಪುರ ಹಿರೇಮಠ, ತಾ|| ಸಾಗರ.\u003cbr data-mce-fragment=\"1\"\u003eಇವರು ನಾಡಿನ ಆಧ್ಯಾತ್ಮಿಕ ಪ್ರಪಂಚಕ್ಕೆ ಅತ್ಯಂತ ಚಿರಪರಿಚಿತ ಪೂಜನೀಯರು. ಪೂಜ್ಯರ ಚಿಂತನೆಗಳು,\u003cbr data-mce-fragment=\"1\"\u003eಕೇವಲ ಒಂದು ಧರ್ಮ-ಜಾತಿಗೆ ಸೀಮಿತಗೊಳ್ಳದೆ, ಎಲ್ಲಾ ಜಾತಿ-ಧರ್ಮದವರಲ್ಲಿರುವ ಮೌಡ್ಯಗಳ ಬಗ್ಗೆ\u003cbr data-mce-fragment=\"1\"\u003eನಿರಂತರ ಜಾಗೃತಿ ಮೂಡಿಸುವ ಬಹುದೊಡ್ಡ ಆಧ್ಯಾತ್ಮಿಕ ಕಳಕಳಿ ಹೊಂದಿರುವ ಶ್ರೀಗಳು.\u003cbr data-mce-fragment=\"1\"\u003eನಾನು ಕಳೆದ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಶ್ರೀ ಮಠದ ಭಕ್ತನಾಗಿ, ಗುರುಗಳ ಅತ್ಯಂತ\u003cbr data-mce-fragment=\"1\"\u003eಹತ್ತಿರದ ಒಡನಾಡಿಯಾಗಿ, ಅವರ ಆಧ್ಯಾತ್ಮಿಕ ಚಿಂತನೆಗಳನ್ನು ಶ್ರೇಷ್ಠ ಉಪನ್ಯಾಸವನ್ನು ಸವಿಯುತ್ತಾ\u003cbr data-mce-fragment=\"1\"\u003eಬಂದವನು. ಶ್ರೀಗಳ ಪರಮಚಿಂತನೆಗಳು ಹಾಗೂ ಭಗವಂತ ಅವರಿಗೆ ಕರುಣಿಸಿರುವ ಶ್ರೇಷ್ಠಜ್ಞಾನ ಸಮಾಜಕ್ಕೆ\u003cbr data-mce-fragment=\"1\"\u003eಮಾರ್ಗದರ್ಶನವಾಗಲೆಂದು ಚಿಂತಿಸಿದ ನನ್ನಂತಹ ಅವರ ಅನೇಕ ಶಿಷ್ಯರುಗಳು, ಇವರಲ್ಲಿ ಮನವಿ ಮಾಡಿ\u003cbr data-mce-fragment=\"1\"\u003eಗುರುಗಳ ಆಧ್ಯಾತ್ಮಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪರಂಪರೆಯ ಎಲ್ಲ ಶ್ರೇಷ್ಠ ಜ್ಞಾನವು ಪುಸ್ತಕ\u003cbr data-mce-fragment=\"1\"\u003eರೂಪದಲ್ಲಿರಬೇಕೆಂದು ಪ್ರಾರ್ಥನೆ ಮಾಡಿದ ಫಲವೇ ಇಂದು ನಮ್ಮೆದುರಿಗೆ ಇರುವ ಅವರ ಅನೇಕ\u003cbr data-mce-fragment=\"1\"\u003eಗ್ರಂಥಗಳು ಮತ್ತು ಲೇಖನಗಳು ಪ್ರಕಟಗೊಂಡು ದೇಶದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಅನನ್ಯ\u003cbr data-mce-fragment=\"1\"\u003eಕೊಡುಗೆಯಾಗಿವೆ ಎನ್ನಬಹುದು.\u003cbr data-mce-fragment=\"1\"\u003eಪೂಜ್ಯ ವೀರಾಪುರ ಶ್ರೀಗಳು ತಂದೆಯನ್ನೇ ಗುರುವಾಗಿ ಸ್ವೀಕರಿಸಿ ಅವರಿತ್ತ ವಿದ್ಯೆಯ ಬಲದಿಂದಲೇ\u003cbr data-mce-fragment=\"1\"\u003eಜ್ಞಾನವನ್ನು ಪಡೆದವರು. ಭದ್ರಾವತಿಯಲ್ಲಿ ಪ್ರೌಢಶಿಕ್ಷಣ ಮುಗಿಸಿ\u003cbr data-mce-fragment=\"1\"\u003eಚೌಳಹಿರಿಯೂರು ಹಿರೇಮಠದ ಪರಂಪರಾಗತ ವೀರಾಪುರ ಹಿರೇಮಠದಲ್ಲಿ\u003cbr data-mce-fragment=\"1\"\u003eವಂಶಪರಂಪರೆಯಂತೆ ಪಟ್ಟಾಧಿಕಾರಿಗಳಾಗಿ ಆಶ್ರಮ ಧರ್ಮವನ್ನು\u003cbr data-mce-fragment=\"1\"\u003eಪಾಲಿಸುತ್ತಲೆ, ಮೈಸೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣದಲ್ಲಿ\u003cbr data-mce-fragment=\"1\"\u003eಸ್ನಾತಕೋತ್ತರ ಪದವೀಧರರಾಗಿ, ಇವರು ಬರೆದ “ಭಾರತೀಯ ಸಂಸ್ಕಾರ\u003cbr data-mce-fragment=\"1\"\u003eಹಾಗೂ ಸಾಂಸ್ಕೃತಿಕ ಪರಂಪರೆ” ಎಂಬ ಮಹಾಪ್ರಬಂಧವನ್ನು ಪರಿಗಣಿಸಿ\u003cbr data-mce-fragment=\"1\"\u003eಅಮೇರಿಕಾದ ಕಾಸ್ಕೋಪೊಲಿಟನ್ ಯೂನಿವರ್ಸಿಟಿಯವರು ಅವರಿಗೆ ಗೌರವ\u003cbr data-mce-fragment=\"1\"\u003eಡಾಕ್ಟರೇಟ್ ಪದವಿ ನೀಡಿದ್ದಾರೆ. ನಂತರ “ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕಾರಗಳ ಅಗತ್ಯ\u003cbr data-mce-fragment=\"1\"\u003eವೈಜ್ಞಾನಿಕ ಅಧ್ಯಯನ” ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ\u003cbr data-mce-fragment=\"1\"\u003eವಿಶ್ವವಿದ್ಯಾಲಯ, ಡಾಕ್ಟರ್ ಆಫ್ ಲಿಟರೇಚರ್(ಡಿ.ಲಿಟ್.) ಪದವಿ ನೀಡಿ ಗೌರವಿಸಿದೆ. ರಾಯಚೂರಿನ ಕೃಷಿ\u003cbr data-mce-fragment=\"1\"\u003eವಿಶ್ವವಿದ್ಯಾಲಯ ಶ್ರೀಗಳನ್ನು ಆಮಂತ್ರಿಸಿ. ಇವರು ಬರೆದ “ಋಷಿ ಮುನಿಗಳ ಕೃಷಿ” ಎಂಬ ಗ್ರಂಥವನ್ನು\u003cbr data-mce-fragment=\"1\"\u003eಮುದ್ರಿಸಿ ಗೌರವಿಸಿದ್ದಾರೆ, ಇವರು ಬರೆದ ದೇವಿ ಮಹಾತ್ಮಿಯ ಬಗ್ಗೆ ಅವರ ವೈಚಾರಿಕ ವಿಶ್ಲೇಷಣೆ ಎಂಬ\u003cbr data-mce-fragment=\"1\"\u003eಗ್ರಂಥವನ್ನು ಭಕ್ತಸ್ತೋಮ ಮಸ್ಕಿ ನಗರದಲ್ಲಿ ಆನೆಯ ಮೇಲೆ ಅಂಬಾರಿ ಉತ್ಸವ ನಡೆಸಿದ್ದು ಹೆಗ್ಗಳಿಕೆಗೆ\u003cbr data-mce-fragment=\"1\"\u003eಪಾತ್ರವಾಗಿದೆ.\u003cbr data-mce-fragment=\"1\"\u003e:\u003cbr data-mce-fragment=\"1\"\u003eಈಗಾಗಲೇ ಇವರಿಂದ ಅನೇಕ ಲೇಖನಗಳು ಮತ್ತು ಕೃತಿಗಳು ರಚನೆಯಾಗಿ ಜನಮನಕ್ಕೆ\u003cbr data-mce-fragment=\"1\"\u003eತಲುಪಿರುವುದು ಹೆಮ್ಮೆಯ ವಿಚಾರ ಹಾಗೂ ಕನ್ನಡ ಸಾಹಿತ್ಯದ ಬಗೆಗೆ ಅವರಿಗಿರುವ ಪ್ರಬುದ್ಧತೆ\u003cbr data-mce-fragment=\"1\"\u003eಭಾಷಾಶಾಸ್ತ್ರದಲ್ಲಿನ ಪರಿಣತೆ, ಶಿಲ್ಪಶಾಸ್ತ್ರ ಮತ್ತು ವಾಸ್ತುಶಾಸ್ತ್ರಗಳ ಮೇಲಿನ ಅವರ ಆಳವಾದ ಅಧ್ಯಯನ\u003cbr data-mce-fragment=\"1\"\u003eಇದೆಲ್ಲಕ್ಕಿಂತ ಹೆಚ್ಚು ಶಬ್ದ-ಶಬ್ದಗಳ ನಡುವಿನ ಪದಗಳಿಗೆ ವಿನೂತನ ವ್ಯಾಖ್ಯಾನ ಹಾಗೂ ಆಧ್ಯಾತ್ಮಿಕ ಪರಿಕಲ್ಪನೆ\u003cbr data-mce-fragment=\"1\"\u003eತುಂಬಾ ಶ್ಲಾಘನೀಯವಾದುದು. ಇಂತಹ ಶ್ರೀಗಳಿಗೆ ಈ ನಾಡಿನ ಕನ್ನಡದ ಮನಸ್ಸುಗಳ ಪರವಾಗಿ\u003cbr data-mce-fragment=\"1\"\u003eನಮನಗಳನ್ನು ಸಲ್ಲಿಸುತ್ತಾ ಇವರಿಂದ ಇನ್ನು ಹೆಚ್ಚಿನ ಸಂಶೋಧನೆ ನಡೆಯಲೆಂದು ಆಶಿಸುವ\u003cbr data-mce-fragment=\"1\"\u003eಡಾ|| ಆರ್ ಎಮ್ ಕುಬೇರಪ್ಪ .A, Ph.D (USA)\u003cbr data-mce-fragment=\"1\"\u003eರಾಣೀಬೆನ್ನೂರು.","brand":"BEETLE BOOK SHOP","offers":[{"title":"Default Title","offer_id":44572220031259,"sku":"","price":360.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/products\/science-in-religious-samskaras-kannada-edition-8145223.jpg?v=1767537966","url":"https:\/\/beetlebookshop.com\/kn\/products\/science-in-religious-samskaras-kannada-edition","provider":"Beetle Book Shop","version":"1.0","type":"link"}