{"product_id":"sarala-pampabharata","title":"ಸರಳ ಪಂಪಭಾರತ","description":"\u003cp\u003eಸರಳ ಪಂಪಭಾರತ\u003c\/p\u003e\n\u003cp\u003eಎಲ್. ಬಸವರಾಜು (ಲೇಖಕ)\u003c\/p\u003e\n\u003cp\u003e'ನ ಭೂತೋ ನ ಭವಿಷ್ಯತಿ' ಎಂಬ ರೀತಿಯಲ್ಲಿ, ಪ್ರಾಚೀನ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಂತಿರುವ 'ಪಂಪಭಾರತ ಮತ್ತು 'ಆದಿಪುರಾಣ' ಮಹಾಕಾವ್ಯಗಳನ್ನು ಬರೆದು ಕನ್ನಡವನ್ನು ಶ್ರೀಮಂತಗೊಳಿಸಿದವನು ಪಂಪ. 'ಇವನಾರವನಿವನಾರವ' ನಂದು ಸುಮಾರು ಒಂದು ಸಾವಿರ ವರ್ಷಗಳಷ್ಟು ದೀರ್ಘಕಾಲ ಸೋಟೆ ತಿವಿಸಿಕೊಂಡಿದ್ದು, ವಿದ್ವಜ್ಜನರ ಅನಾದರಕ್ಕೊಳಗಾಗಿದ್ದ ಪಂಪನ ಈ ಕೃತಿಗಳನ್ನು, ಅವು ಉತ್ತಮೋತ್ತಮ ಕಾವ್ಯಗಳಾಗಿದ್ದಾಗ್ಯೂ, ಉದ್ದಾಮ ಪಂಡಿತರು ಮತ್ತು ವಿದ್ವಾಂಸರ ಹೊರತಾಗಿ ಇತರ ಸಾಹಿತ್ಯಪ್ರಿಯರು ಓದಲಾಗುತ್ತಿರಲಿಲ್ಲ. ಓದುವವರಿಲ್ಲದೆ ಲೈಬ್ರೆರಿಗಳ ಕಪಾಟುಗಳಲ್ಲೇ ಭದ್ರವಾಗಿ ಉಳಿದುಬಿಟ್ಟಿದ್ದ ಈ ಪರಿಸ್ಥಿತಿಯನ್ನು ಗಮನಿಸಿದ ಡಾ. ಎಲ್. ಬಸವರಾಜು ಅವರು ಅದಕ್ಕೊಂದು ಪರಿಹಾರ ಮಾರ್ಗವನ್ನು ಶೋಧಿಸಿ, ಹೊಸ ಯುಗದ ಹೊಸ ಪೀಳಿಗೆಯ ಓದುಗರ ಆಪೇಕ್ಷೆ ಹಾಗೂ ನಿರೀಕ್ಷೆಗಳಿಗೆ ಸ್ಪಂದಿಸಿ, ಈ ಮಹಾಕಾವ್ಯಗಳನ್ನು ಸರಳಗೊಳಿಸುವ ಸಹೃದಯ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡುದರ ಫಲಶ್ರುತಿಯೇ 'ಸರಳ ಪಂಪಭಾರತ'.\u003c\/p\u003e\n\u003cp\u003eಪಂಪನ 'ಸಮಸ್ತ ಭಾರತ' - ಪಂಪ ತನ್ನ 'ಭಾರತ'ಕ್ಕೆ ಇಟ್ಟ ಹೆಸರೇ ಇದು - ಸಾವಿರಾರು ವರ್ಷಗಳಷ್ಟು ಹಿಂದಿನ ಹಳಗನ್ನಡದ ಗದ್ಯಪದ್ಯಗಳನ್ನು ಸಂಧಿ ಸಮಾಸ ಬಿಡಿಸಿ, ಅರ್ಥ-ಭಾವ-ಧ್ವನಿಯ ಅನುಸಾರ ಬಗೆಬಗೆಯಾಗಿ ಪದ-ಪಾದ ವಿನ್ಯಾಸದಲ್ಲಿ ಜೋಡಿಸಿಟ್ಟು, ನಮ್ಮ ಧಾರ್ಮಿಕ, ಸಾಂಸ್ಕೃತಿಕ ಮತ್ತು ಚಾರಿತ್ರಿಕ ಇತಿಹಾಸವನ್ನೂ ಹೃದಯವಂತಿಕೆಯನ್ನೂ ಸಾಮರಸ್ಯವನ್ನೂ ಕನ್ನಡ ಸಾಹಿತ್ಯಪ್ರಿಯರು ಗ್ರಹಿಸುವಂತೆ ಡಾ. ಬಸವರಾಜು ಅವರು ರಚಿಸಿರುವ ಕೃತಿ 'ಸರಳ\u003c\/p\u003e\n\u003cp\u003eಪಂಪಭಾರತ'.\u003c\/p\u003e","brand":"BEETLE BOOK SHOP","offers":[{"title":"Default Title","offer_id":45387385667867,"sku":"","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sarala-pampabharata-6127758.png?v=1767535925","url":"https:\/\/beetlebookshop.com\/kn\/products\/sarala-pampabharata","provider":"Beetle Book Shop","version":"1.0","type":"link"}