{"product_id":"sanaatana","title":"ಸನಾತನ","description":"\u003cdiv class=\"col-lg-12\"\u003e\n\u003cp align=\"left\"\u003e\"ಸನಾತನ\" ಕಾದಂಬರಿಯಲ್ಲಿನ ಘಟನೆಗಳು ಯಾವುದೋ ಕಾಲದ್ದಲ್ಲ. ಇಂದಿಗೂ ಭಾರತದಲ್ಲಿ ಜೀವಂತವಾಗಿರುವಂಥವು, ಇದು ನಿರಾಕರಿಸಿದ ಅಂದಿನ ಚರಿತ್ರೆಯ ಉತ್ಪನನವಾಗಿದೆ. ನೂರಾರು ಜನರನ್ನು ನೂರಾರು ಮೈಲುಗಳವರೆಗೆ ಮತ್ತು ನೂರಾರು ವರ್ಷಗಳ ಕಾಲ ವ್ಯಾಪಿಸಿಕೊಂಡಿರುವ ಈ ಕಾದಂಬರಿಯನ್ನು ಓದಲು ಎಂಟೆದೆ ಬೇಕು. ಇದು ಕಲ್ಪನೆ ಹಾಗೂ ಚರಿತ್ರೆಯ ರಸಾಯನದಿಂದ ರೂಪಗೊಂಡ ಸತ್ಯದ ಒಂದು ಹೊಸ ಪ್ರಯೋಗವಾಗಿದೆ. ಶರಣಕುಮಾರ ಲಿಂಬಾಳೆಯವರ ಸನಾತನ ಕಾದಂಬರಿಯು ವ್ಯಾಪಕವಾದ ಸಾಮಾಜಿಕ ಅರಿವನ್ನು ತಂದು ಕೊಡುತ್ತದೆ. ಹೀಗಾಗಿ ಜಾತಿಯ ಸಂಕುಚಿತ ಪರಿಧಿಯೊಳಗೆ ಬದುಕುವ ಪ್ರತಿಯೊಬ್ಬರಿಗೂ ಇದು ಹರಿತವಾದ ಶಸ್ತ್ರದಂತೆ ಅನಿಸಬಹುದು. ಇದು ಶಸ್ತ್ರದ ಪೂಜೆಯಲ್ಲ, ಮನುಷ್ಯನ ಪ್ರಾರ್ಥನೆ.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":49415923106075,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sanaatana-9016110.jpg?v=1767534426","url":"https:\/\/beetlebookshop.com\/kn\/products\/sanaatana","provider":"Beetle Book Shop","version":"1.0","type":"link"}