{"product_id":"samvidhana-moolaswaroopa-mattu-keshavaananda-bharathi-prakarana","title":"ಸಂವಿಧಾನದ ಮೂಲಸ್ವರೂಪ ಮತ್ತು ಕೇಶವಾನಂದ ಭಾರತಿ ಪ್ರಕರಣ","description":"\u003cp\u003eಹಲವು ಧರ್ಮ, ಜಾತಿ, ಮತಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಭಾರತದ ಚೈತನ್ಯವೇ ಆಗಿರುವ ಸಂವಿಧಾನ, ತನ್ನ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಈ ಹೊತ್ತಿಗೂ ಜಾತ್ಯತೀತ, ಸಮಾನತೆಯ ನಿಲುವುಗಳನ್ನು ಪ್ರಶ್ನಿಸುತ್ತಲೇ ಬರಲಾಗುತ್ತಿದೆ. ಬಹುತ್ತ ಭಾರತದ ತಿರುಳನ್ನು ಅರಿಯದವರು ಸಂವಿಧಾನವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಇದ್ದಾರೆ. ಹಲವು ತೀರ್ಪುಗಳನ್ನು ನೀಡಿದ ನ್ಯಾಯಾಧೀಶರುಗಳು ನಿವೃತ್ತಿಯ ನಂತರ ರಾಜಕೀಯ ಪಕ್ಷಗಳ ಜೊತೆಗೆ ಗುರುತಿಸಿಕೊಂಡಿರುವುದನ್ನು ಗಮನಿಸಬಹುದು. ಭಾರತದ ಜೀವಾಳವೇ ಆದ ಸಂವಿಧಾನದ ಜಾತ್ಯತೀತ ವ್ಯವಸ್ಥೆ ಅಪಾಯದಲ್ಲಿದೆ. ಇವೆಲ್ಲ ನಮ್ಮ ಸಂವಿಧಾನವನ್ನು ವಿಫಲಗೊಳಿಸುವ ನಿರಂತರ ಪ್ರಯತ್ನಗಳೇ ಆಗಿವೆ.\u003c\/p\u003e\n\u003cp\u003eಸಂವಿಧಾನಕ್ಕೆ ಮತ್ತಷ್ಟು ಬಲ ತಂದುಕೊಟ್ಟು, ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ ಸುಪ್ರೀಂ ಕೋರ್ಟಿನ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಐತಿಹಾಸಿಕವಾದುದು.\u003c\/p\u003e\n\u003cp\u003eಒಂದು ಕಡೆ ಸಂಸತ್ತು-ಸರಕಾರ ಮತ್ತೊಂದು ಕಡೆ ಸುಪ್ರೀಂ ಕೋರ್ಟು.ಇವುಗಳ ನಡುವೆ ಸಂವಿಧಾನವನ್ನು ತಿದ್ದುವ, ಪರಾಮರ್ಶಿಸುವ, ಅಧಿಕಾರದ ಪ್ರಾಬಲ್ಯಕ್ಕಾಗಿ ನಡೆದ ಹೋರಾಟದ ಕಥನವಾಗಿ, ಕೇಶವಾನಂದ ಭಾರತೀ ಪ್ರಕರಣದ ತೀರ್ಪು ಹೊರಬಂದಿತು.\u003c\/p\u003e","brand":"BEETLE BOOK SHOP","offers":[{"title":"Default Title","offer_id":50503913111835,"sku":null,"price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/samvidhana-moolaswaroopa-mattu-keshavaananda-bharathi-prakarana-6900517.jpg?v=1767530405","url":"https:\/\/beetlebookshop.com\/kn\/products\/samvidhana-moolaswaroopa-mattu-keshavaananda-bharathi-prakarana","provider":"Beetle Book Shop","version":"1.0","type":"link"}