{"product_id":"samskrutika-rajakeeya","title":"ಸಾಂಸ್ಕೃತಿಕ ರಾಜಕೀಯ","description":"\u003cp\u003eಈಗ ಪ್ರಜಾಪ್ರಭುತ್ವ ಹಾಗೂ ಸಮಾನತೆಗಳೆರಡೂ ಏಕಕಾಲಕ್ಕೆ ಅವಸಾನ ಹೊಂದಬಹುದಾದ ಕಾಲವು ನಮ್ಮೆದುರಿಗಿದೆ. ಈ ಸಂದರ್ಭಕ್ಕೆ ಅವಶ್ಯಕವಾದ ಚಿಂತನೆಯ ಎಳೆಗಳು ಚದುರಿದಂತೆ ಕನ್ನಡದಲ್ಲಿ, ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ. ಇವು ಸ್ವವಿಮರ್ಶೆಯ ಮಾದರಿಯಲ್ಲಿವೆ. ನಾನು ಸರಕು ಮಾರುಕಟ್ಟೆಯ ಗ್ರಾಹಕನಾಗಿ ಜಾಗತೀಕರಣದ ವಿಮರ್ಶೆಯಲ್ಲಿ ತೊಡಗುವುದೆಂದರೇನು? ಮಿತಿಯಿಲ್ಲದ ಆಸೆ, ಭೋಗ ಇವುಗಳನ್ನು ಬಯಸುತ್ತಲೆ ಅವುಗಳಿಗೆ ಆರ್ಥಿಕ ಹಾಗೂ ರಾಜಕೀಯ ಸಾಂಸ್ಥಿಕ\u003c\/p\u003e\n\u003cp\u003eಸ್ವರೂಪವನ್ನು ಕೊಡುತ್ತಿರುವ ಶಕ್ತಿಗಳನ್ನು ವಿರೋಧಿಸುವುದು ಅಸಂಗತವಲ್ಲವೆ? ಮನಸ್ಸಿನಿಂದ ಜಾತಿ, ಅಸ್ಪೃಶ್ಯತೆ ಇವುಗಳನ್ನು ತೊಡೆದು ಹಾಕಲಾಗದ ಸಮುದಾಯವು ಹಿಂದುತ್ವದ ವಿರೋಧಿಗಳೆಂದು ಇತರರನ್ನು ಕಲ್ಪಿಸಿ ಅವರ ಮೇಲೆ ದಾಳಿ ಮಾಡುವಾಗ ಯಾವ ನೈತಿಕ ಪ್ರತಿರೋಧ ವನ್ನು ತೋರಬಲ್ಲದು? ಬಂಡವಾಳಶಾಹಿಯು ತನ್ನ ಯಾವ ಸ್ವರೂಪದಲ್ಲಿಯೂ ಸಮಾನತೆಯನ್ನು ಬೆಂಬಲಿಸಲಾರದು ಎಂದು ಗೊತ್ತಿರುವಾಗ ಅದರಿಂದ ಪ್ರೇರಿತವಾದ ಪ್ರಗತಿ, ಅಭಿವೃದ್ಧಿಗಳು ನಮಗೆ ಆಪ್ಯಾಯಮಾನವಾಗಿ ಕಂಡರೆ ಪರಿಹಾರವು ಎಲ್ಲಿಂದ ಬರಬೇಕು? ಜಾತೀಯತೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ನಮ್ಮ ಜನಸಾಮಾನ್ಯ ಮತದಾರರು ಚುನಾವಣಾ ರಾಜಕೀಯದ ಮೂಲಕ ಕೋಮುವಾದಿ ಸರ್ವಾಧಿಕಾರಿ ರಾಜಕೀಯಕ್ಕೆ ಪರ್ಯಾಯವನ್ನು ದೊರಕಿಸಿಕೊಡುತ್ತಾರೆ ಎನ್ನುವ ಭ್ರಮೆ ನಮಗೆ ಅನೈತಿಕವಾಗಿ ಯಾಕೆ ಕಾಣುವುದಿಲ್ಲ? ಈ ಥರದ ಆತ್ಮವಿಮರ್ಶೆಯುಳ್ಳ ಚಿಂತನೆಯ ಎಳೆಗಳನ್ನು ಹುಡುಕಿಕೊಂಡು ಮುಂದುವರೆಯಬೇಕಾಗಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":45321358803227,"sku":"","price":259.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/samskrutika-rajakeeya-7865447.png?v=1767536466","url":"https:\/\/beetlebookshop.com\/kn\/products\/samskrutika-rajakeeya","provider":"Beetle Book Shop","version":"1.0","type":"link"}