{"product_id":"sampige-bhagavata","title":"ಸಂಪಿಗೆ ಭಾಗವತ","description":"\u003cdiv class=\"row\"\u003e\n\u003cdiv class=\"col-lg-12\"\u003e\n\u003ch3 class=\"buy-product-style\"\u003eಸಂಪಿಗೆ ಭಾಗವತ|Sampige Bhagavata\u003c\/h3\u003e\n\u003c\/div\u003e\n\u003c\/div\u003e\n\u003cp data-mce-fragment=\"1\"\u003eಪುರಾಣಗಳು ಲೌಕಿಕ – ಅಲೌಕಿಕ, ಪ್ರತ್ಯಕ್ಷ – ಪರೋಕ್ಷಗಳ ನಡುವೆ ಸಾಧಿತವಾಗಿರುವ ಪ್ರಜ್ಞಾವಾಹಿನಿಯ ಪ್ರತಿಮೆಗಳು, ಸಂಕೇತಗಳು, ಧ್ವನಿಗಳು; ಅವು ಪ್ರಕೃತಿಯ ನಿತ್ಯದ ಕನಸುಗಳು ಕೂಡ. ಪುರಾಣಗಳು ನಮಗೆ ಹತ್ತಿರವಾಗುವುದು ಅವುಗಳ ‘ಅರ್ಥ’ ದ ಹುಡುಕಾಟದಲ್ಲಿ ಅಲ್ಲ,ನಮ್ಮ ಅನುಭವಭಾವಕೋಶದ ವಿಸ್ತಾರದಲ್ಲಿ ಮೂಡುವ ಆ ಪ್ರತಿಮೆಗಳ ಮರುಹುಟ್ಟಿನಲ್ಲಿ.\u003c\/p\u003e\n\u003cp data-mce-fragment=\"1\"\u003eಭಾಗವತದೊಂದಿಗೆ ಲಕ್ಷ್ಮೀಶ ತೋಲ್ಪಾಡಿಯವರು ನಡೆಸಿರುವ ಸಹೃದಯ ಸಾಹಚರ್ಯ ಈ ಕೃತಿಯ ಪಂಕ್ತಿ ಪಂಕ್ತಿಯಲ್ಲೂ ಹರಳುಗಟ್ಟಿದೆ; ಶ್ರವಣ-ಮನನ-ನಿದಿಧ್ಯಾಸನಗಳ ಬೆಂಬಲವಿಲ್ಲದೆ ಇಂಥದೊಂದು ಸಾವಯವಶಿಲ್ಪ ಸಿದ್ಧವಾಗದಷ್ಟೆ. ‘ಭವನಿಮಜ್ಜನಚಾತುರ್ಯ’ ಮತ್ತು ‘ಲಘಿಮಾ ಕೌಶಲ’ ಗಳ ಸಂಲಗ್ನ ದಲ್ಲಿ ರಸಸಮಾವಿಷ್ಠವನ್ನೇ ಇಲ್ಲಿ ಕಂಡರಿಸಿ,ಪುರಾಣಪರಂಪರೆಯ ವ್ಯಾಖ್ಯಾನರಥಕ್ಕೆ ಹೊಸದಾದ ಜೀವಕಳೆಯನ್ನು ತುಂಬಿದ್ದಾರೆ.ಹೀಗೆಂದು ‘ಈ ಸನ್ನಿವೇಶದ ಭಾವ ಇದೇ, ಈ ಮಾತಿಗೆ ಇದೇ ಅರ್ಥ’ ಎನ್ನುವಂಥ ಪ್ರಭುಸಂಮಿತೆಯ ಆವೇಶ ಈ ಕೃತಿಯಲ್ಲಿ ಮೈದೊರಿಲ್ಲವೆಂಬುದು ಗಮನಾರ್ಹ ವಿವರವೇ ಸರಿ.ಮತ್ತಷ್ಟು ಪದರಗಳಲ್ಲಿ ಹುದುಗಿರುವ ರಸನಿಧಿಯನ್ನು ಅನ್ವೇಷಿಸಲು ಇಲ್ಲಿಯ ಸೊಲ್ಲುಗಳು ಆಲಂಬನ -ಉದ್ದೀಪನ ವಿಭಾವಗಳಾಗಿ ಒದಗಿ,ಎಲ್ಲೆಲ್ಲೂ ಹರಡಿಕೊಂಡಿರುವ ‘ಪುರಾಣ’ ಪ್ರಪಂಚದ ರಸಸಾಮ್ರಾಜ್ಯದ ವಿಸ್ತರಣಕ್ಕೆ ಅವಶ್ಯಕವಾದ ಬೀಜ ಮೊಳಕೆಯೊಡೆಯಲು ನಮ್ಮ ಭಾವ -ಬುದ್ಧಿಗಳಿಗೆ ಬಲವನ್ನು ತುಂಬಿ, ಅಂತರಂಗವನ್ನು ಫಲವತ್ತುಗೊಳಿಸುತ್ತವೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":47747743285531,"sku":"","price":256.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sampige-bhagavata-7221930.jpg?v=1767535224","url":"https:\/\/beetlebookshop.com\/kn\/products\/sampige-bhagavata","provider":"Beetle Book Shop","version":"1.0","type":"link"}