{"product_id":"sakeenala-muttu","title":"ಸಕೀನಳ ಮುತ್ತು","description":"\u003cp\u003eವಿವೇಕರು ಸಮೃದ್ಧ ದೃಶ್ಯವೊಂದರ ಒಂದೊಂದೇ ಪಾರ್ಶ್ವವನ್ನು ತೋರಿಸುತ್ತ, ಆ ಒಂದೊಂದೇ ಪಾರ್ಶ್ವಗಳು ಕ್ರಮೇಣ ಬಹುಸ್ತರದ ಒಂದೇ ಸಂಪೂರ್ಣ ಚಿತ್ರವಾಗುವಂತೆ ಮಾಡಬಲ್ಲ ಕ್ಯೂಬಿಸ್ಟ್ ಕಲಾವಿದನ ಹಾಗೆ. ಅವರು ಕಲ್ಪಕತೆಯ ದೂರ ಸರಹದ್ದುಗಳಲ್ಲಿ ನಿಂತು, ಇದುವರೆಗೂ ನಮ್ಮ ಭಾಷೆಯಿಂದ ನುಣುಚಿಕೊಂಡಂತಿದ್ದ ಅನುಭವವನ್ನು ಸಾಕಾರಗೊಳಿಸುತ್ತಿರುವ ಲೇಖಕರೆನಿಸುತ್ತದೆ. ಇವತ್ತು ಬದುಕುತ್ತಿರುವ ಅನೇಕರ ಬದುಕಿನ ವಿಸ್ತೃತ ದರ್ಶನವಾಗಿರುವ ಈ ಕೃತಿ ಜನರನ್ನು ಅವರಿರುವ ಹಾಗೆಯೇ ತೋರಿಸುತ್ತಿರುವ, ಯಾವುದೇ ವಿರೂಪವಿಲ್ಲದ ಕನ್ನಡಿ. ಈ ಕನ್ನಡಿ ನಾವು ಬಹುಮಟ್ಟಿಗೆ ಅಡಗಿಸಿಡುವ ಅಥವಾ ನಿಗ್ರಹಿಸುವ ನಮ್ಮ ಬದುಕಿನ ದೈನಿಕಗಳನ್ನು ಪಡಿಮೂಡಿಸುವ ಹೊತ್ತಿಗೇ, ನಮ್ಮ ಜೀವನವೆಂದರೆ ನಮ್ಮ ಅತೃಪ್ತಿ, ಬಳಲಿಕೆ, ಇರುಸುಮುರುಸು, ಭಯಭೀತಿ, ಇವೇ ಮುಂತಾದವು ಎಂಬುದನ್ನು ಹಠಾತ್ತಾಗಿ ನಾವೇ ಅರಿತುಕೊಳ್ಳುವಂತೆಯೂ ಮಾಡುತ್ತದೆ.\u003c\/p\u003e\n\u003cp\u003e\u003cstrong\u003e– ಎಸ್ ದಿವಾಕರ್ (ಪ್ರಜಾವಾಣಿ ಪುಸ್ತಕ ವಿಮರ್ಶೆಯಲ್ಲಿ)\u003c\/strong\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51861529100571,"sku":null,"price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sakeenala-muttubeetle-book-shop-5106023.jpg?v=1772961786","url":"https:\/\/beetlebookshop.com\/kn\/products\/sakeenala-muttu","provider":"Beetle Book Shop","version":"1.0","type":"link"}