{"product_id":"saamipya-collection-of-bengali-stories-by-shirshendu-mukhopadhyaya","title":"ಸಾಮೀಪ್ಯ | ಸಾಮೀಪ್ಯ (ಶೀರ್ಷೇಂದು ಮುಖೋಪಾಧ್ಯಾಯ)","description":"\u003cp\u003eಶಿರ್ಷೇಂದು ಮುಖೋಪಾಧ್ಯಾಯ ಅವರು ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ವಿಶ್ವದ ಗಮನ ಸೆಳೆದವರು. ಅವರ ಕಥೆಗಳಲ್ಲಿ ಸೌಮ್ಯ ಭಾಷೆ ಮತ್ತು ಸಂಯಮದ ನಿರೂಪಣೆ ಪ್ರಮುಖ ಅಂಶಗಳಾಗಿವೆ. ಕಥಾವಸ್ತುವಿನ ಆಯ್ಕೆಯಲ್ಲಿ ಅವರ ಎಚ್ಚರಿಕೆಯ ಹೆಜ್ಜೆ ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವೇ ಪಾತ್ರಗಳ ಮೂಲಕ, ಅಚ್ಚುಕಟ್ಟಾದ ಪರಿಸರದ ವಿವರಣೆಯೊಂದಿಗೆ ಸಾಗುವ ಅವರ ಕಥೆಗಳು ಪ್ರತಿಯೊಂದು ಹಂತದಲ್ಲಿಯೂ ಕುತೂಹಲವನ್ನು\u003cbr data-mce-fragment=\"1\"\u003eಕಾಪಾಡಿಕೊಳ್ಳುತ್ತವೆ ಎಂಬುದು ಗಮನಾರ್ಹ. ಶಿರ್ಷೇಂದು ಅವರು ವಿಭಿನ್ನ ಕಾಲಘಟ್ಟದಲ್ಲಿ ಬರೆದಿರುವ ಕಥೆಗಳನ್ನು ಆಯ್ದು ಒಂದು ಕಡೆಯಲ್ಲಿ ನೀಡುವ ಪ್ರಯತ್ನ ಶ್ಲಾಘನೀಯ. ಇಲ್ಲಿನ ಕಥೆಗಳು ಬಂಗಾಳದ ಪರಿಸರ, ಕುಟುಂಬ ವ್ಯವಸ್ಥೆ, ಚಿಂತನಾ ವಿಧಾನ, ಜೀವನಶೈಲಿ ಇತ್ಯಾದಿಗಳ ಮೇಲೆಯೂ ಬೆಳಕು ಚೆಲ್ಲುತ್ತವೆ. ಕಥೆಗಳ ಆಯ್ಕೆಯಲ್ಲಿಯೂ ಜಾಗರೂಕತೆ ಕಂಡುಬರುತ್ತದೆ. ಓದಿದ ನಂತರ ಬಹುಕಾಲ ನೆನಪಿನಲ್ಲಿ\u003cbr data-mce-fragment=\"1\"\u003eಉಳಿಯುವಂತಹ ಕಥೆಗಳನ್ನು ನೀಡಿದ ಶಿರ್ಷೇಂದು ಅವರು ಅಭಿನಂದನಾರ್ಹರು.\u003cbr data-mce-fragment=\"1\"\u003eಡಾ. ನಾಗ ಎಚ್. ಹುಬ್ಳಿಯವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಅತ್ಯಂತ ಸರಳ ರೂಪದಲ್ಲಿ ಬಂಗಾಳಿಯಿಂದ ನೇರವಾಗಿ ಕನ್ನಡಕ್ಕೆ ಈ ಕಥೆಗಳನ್ನು ತಂದಿದ್ದಾರೆ. ಕನ್ನಡ ಪುಸ್ತಕ ಲೋಕಕ್ಕೆ ಈ ಕೃತಿ ಒಂದು ಉತ್ತಮ ಸೇರ್ಪಡೆ.\u003cbr data-mce-fragment=\"1\"\u003e\u003c\/p\u003e\n\u003cp\u003e-ಪ್ರೊ. ಶಾಂತಿ ಗಂಗೂಲಿ (ರಾಂಚಿ ವಿಶ್ವವಿದ್ಯಾಲಯ)\u003c\/p\u003e","brand":"BEETLE BOOK SHOP","offers":[{"title":"Default Title","offer_id":47557775163675,"sku":"","price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/saamipya-collection-of-bengali-stories-by-shirshendu-mukhopadhyaya-8776346.jpg?v=1767534847","url":"https:\/\/beetlebookshop.com\/kn\/products\/saamipya-collection-of-bengali-stories-by-shirshendu-mukhopadhyaya","provider":"Beetle Book Shop","version":"1.0","type":"link"}