Ruhillada Kavitegalu - Beetle Book Shop

Poems Without Soul | Ruhillada Kavitegalu

Rs. 145.00
Sale price  Rs. 145.00 ಸಾಮಾನ್ಯ ಬೆಲೆ  Rs. 195.00
ಉತ್ಪನ್ನದ ಮಾಹಿತಿಗೆ ತೆರಳಿ
Ruhillada Kavitegalu - Beetle Book Shop

Poems Without Soul | Ruhillada Kavitegalu

Rs. 145.00
Sale price  Rs. 145.00 ಸಾಮಾನ್ಯ ಬೆಲೆ  Rs. 195.00

ಮಾರಾಟಗಾರರು : BEETLE BOOK SHOP

"ಹೇಳಲ್ಪಟ್ಟಿದ್ದು ಹೇಳಲ್ಪಡುವುದಕ್ಕಾಗಿ ಇರುವುದಿಲ್ಲ" ಆಹಾ! ಇದು ಸಮಸ್ಯೆಯಲ್ಲ. ಇರುವಿಕೆಯ ಸಮಸ್ಯೆಯಲ್ಲ. 'ಹೇಳುವ' ಸಮಸ್ಯೆ. ಹೇಳಲೇಬೇಕಾದ ಸಮಸ್ಯೆ. ಇದನ್ನು ಸಮಸ್ಯೆ ಮಾಡಿಕೊಳ್ಳದೆ ಕಾವ್ಯವು ಕೃತಕೃತ್ಯವಾಗಲಾರದು. ವಚನಕಾರರು ಹೇಳುವ "ಅರಿವು ತದ್ಗತವಾಗಿದೆ" ಎಂಬ ನುಡಿಯನ್ನು ನೆನೆಯುತ್ತಾ ಹೇಳುವುದಾದರೆ ತದ್ಗತವಾದ ಅರಿವನ್ನು ತದ್ಗತವಾಗಿಯೇ ತಿಳಿಯಬಹುದಲ್ಲದೆ, ತದ್ಗತವಾಗದೆ ತಿಳಿಯುವುದು ಸಾಧ್ಯವೇ? ಸಾಧ್ಯವಾಗಬಾರದೆನ್ನುವುದೇ ನ್ಯಾಯವಲ್ಲವೆ? "ರೂಹಿಲ್ಲದ" ಎಂಬೀ ಕವನಗಳ ಗೊಂಚಲಿನ ಹಿಂದೆ ಇರುವ ತಾತ್ವಿಕತೆ- 'ಪರಿಣಾಮ' ಪದ್ಯದಲ್ಲಿದೆ. ಆದರೆ “ಹೇಳಲ್ಪಟ್ಟಿದ್ದು ಹೇಳಲ್ಪಡುವುದಕ್ಕಾಗಿ ಇರುವುದಿಲ್ಲ" ಎಂಬ 'ಹೇಳಿಕೆ' ಕೊಟ್ಟ ಸುಖ ನನ್ನನ್ನು ಆವರಿಸಿಬಿಟ್ಟಿದೆ!

ಕೆಲವು ಪದ್ಯಗಳು ಸ್ಪಟಿಕವನ್ನು ಸೀಳಿದಂತಿವೆ.

- ಲಕ್ಷ್ಮೀಶ ತೋಳ್ವಾಡಿ

ಭೌತಶಾಸ್ತ್ರದ ಬಗ್ಗೆ ನನ್ನ ಸಾಮಾನ್ಯಜ್ಞಾನ ಶೂನ್ಯ, ಸ್ಪೇಸ್, ಟೈಂ, ಆಟಮ್, ಮೋಶನ್, ಪ್ಯೂಷನ್, ಬ್ಲಾಕ್ ಹೋಲ್, ಲಾ ಆಫ್ ಗ್ಯಾವಿಟೇಶನ್ ಮುಂತಾದ ಫಿಸಿಕ್ಸ್, ಆಸ್ಫೋಫಿಸಿಕ್ಸ್ ಪಾರಭಾಷಿಕಗಳು ಇಲ್ಲಿನ ಕೆಲವು ಕನ್ನಡ ಸಮಾನಾರ್ಥಕಗಳ ಬಳಕೆಯನ್ನು ನೋಡಿದಾಗ ನಮ್ಮ ಮನಸ್ಸಿಗೆ ಬರುತ್ತವೆ. 'ಅಣು'ವಿನ ಸುತ್ತಮುತ್ತ ಸರಣಿ ಕವಿತೆಗಳನ್ನೇ ಬರೆದಿದ್ದಾರೆ. ಆಗ ಈ ರಚನೆಗಳ ಹಿಂದಿನ ಕವಿಯ ಸೀರಿಯಸ್ನೆಸ್ ಬಗ್ಗೆ ನಮ್ಮ ಗಮನ ಹರಿಯುತ್ತದೆ. ಇಂಥ ಪ್ರಯತ್ನದಿಂದ ಕವಿ ಕವಿತೆಗಳಲ್ಲಿ, ವಿರೋಧಾಭಾಸ, ಕ್ಷಣಭಂಗುರತೆ, ಸರ್ವವ್ಯಾಪಕತೆಗಳನ್ನು ಉಳಿಸಿಕೊಳ್ಳುವ, ಅವುಗಳ ಮೂಲಕ ಸತ್ಯವನ್ನು ಹುಡುಕುವ ಆಶಯವನ್ನು ಪ್ರಕಟಿಸುತ್ತಿರಬಹುದೇ ಅನಿಸುತ್ತದೆ. ಅವುಗಳ ಹಿನ್ನೆಲೆಯಲ್ಲಿ ಸೃಷ್ಟಿಕ್ರಿಯೆ, ನಿಸರ್ಗ ಮತ್ತು ಬದುಕು - ಇವುಗಳನ್ನು ಅರ್ಥೈಸಿಕೊಳ್ಳುವ ಕವಿಯ ಪ್ರಯೋಗ ಹೊಸದು ಎನಿಸುತ್ತದೆ. ತಾತ್ವಿಕ ಗ್ರಂಥಗಳಲ್ಲಿ ಅವು ನಡೆದಿವೆ. ಆದರೆ ಆಧುನಿಕ ಕಾವ್ಯ ವಲಯದಲ್ಲಿ ಈ ಪ್ರಮಾಣದಲ್ಲಿ ಇಲ್ಲವೆನ್ನಬಹುದು.

ಈ ರಚನೆಗಳಲ್ಲಿ ಭಾಷೆ, ಕಾಲ, ವಿನಯ, ಸತ್ಯ ಮುಂತಾದ ಅನೇಕ ಸಂಗತಿಗಳನ್ನು ಕುರಿತು ಕಾವ್ಯಭಾವಗಳನ್ನು ಪ್ರಕಟಿಸಿದ್ದಾರೆ. ಒಟ್ಟಾರೆ ಇವು ಮಹತ್ವಾಕಾಂಕ್ಷೆಯ ರಚನೆಗಳು.

-ಅಗ್ರಹಾರ ಕೃಷ್ಣಮೂರ್ತಿ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು