ಹೆಚ್ಚುವರಿ ಮಾಹಿತಿ
ವಿವರಣೆ
RESTART| ರೀಸ್ಟಾರ್ಟ್
ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ. ಹಾಗೇ ಸುಮ್ಮನೆ ಈ ಜೀವನದಲ್ಲಿ ಎಲ್ಲರೂ ಎದುರಿಸುವ, ಈ ಲೈಫ್ ಅಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ ಘಟನೆಗಳನ್ನೇ ಸಹಜವಾಗಿ ತಿಳಿಸಿದ್ದೇನೆ. ಸೋತವರ ಕತೆ, ಗೆದ್ದವರ ರಹಸ್ಯ, ಅದರಲ್ಲಿಯೂ ಸೋತು ತಮ್ಮನ್ನೇ
RE-START ಮಾಡಿಕೊಂಡು ಗೆಲ್ಲುವ ಸಾಹಸದ ಕತೆಗಳಲ್ಲಿ ಒಂದು ಥ್ರಿಲ್, ಮಾಂತ್ರಿಕತೆ ಇದೆ. ಸಾಮಾನ್ಯವಾಗಿ ಗೆದ್ದವರ ಸಾಹಸ ಕತೆಗಳು, ವಿಜಯಶಾಲಿಯಾದವರ ಸಾಹಸಯಾತ್ರೆ ಎಲ್ಲೆಡೆ ಸೌಂಡ್ ಮಾಡುವುದು ಸಾಮಾನ್ಯ. ಸೋತು ಗೆದ್ದವರ ಕತೆಗಳು ನಮ್ಮನ್ನು ಯಾವತ್ತೂ ರೋಮಾಂಚನಗೊಳಿಸುತ್ತದೆ.
ಅನುಮಾನ, ಅವಮಾನ, ಅಡೆತಡೆ, ಆಲಸ್ಯ, ಮೋಸ, ನೋವು, ತಪ್ಪು, ಹಣೆಬರಹ, ಕಠಿಣ ಸಮಸ್ಯೆಗಳು, ಭಯ ಎಲ್ಲವನ್ನೂ ಬದಿಗಿಟ್ಟು ಛಲದಿಂದ RE-START ಮಾಡಿಕೊಳ್ಳುತ್ತಾ ಗೆಲ್ಲಲು ಹೊರಟವರ ಯಶಸ್ಸಿನ ಸೀಕ್ರೆಟ್ ಇದರಲ್ಲಿವೆ. ಸೋತವರಿಗೆ ಸಾಂತ್ವನ ನೀಡಿ, ಅವಮಾನ ಪಟ್ಟವರಿಗೆ, ಸೋಲು ಕಂಡವರಿಗೆ, ನೋವು ಉಂಡವರಿಗೆ, ಪ್ರೀತಿ ಬಿತ್ತಿ, ಜ್ಞಾನ ಬೆಳೆಸಿ ಶಕ್ತಿ ತುಂಬುವ, ವಿಜಯಶಾಲಿಗಳಾಗಲು ಮುನ್ನುಗ್ಗುವವರಿಗೆ ಗುರಿ ತೋರಿಸುವ ಒಂದು ಪ್ರಯತ್ನವಿದೆ. ಜೀವನದಲ್ಲಿ ಮುನ್ನುಗ್ಗಿ, ಈ ಪುಸ್ತಕವನ್ನು ಒಮ್ಮೆ ಓದಿ ನೋಡಿ. ಸೋಲು ಪ್ರಕೃತಿಯ ನಿಯಮವಾದರೆ, ಇಲ್ಲಿ ಎಲ್ಲವೂ ಸವಾಲು ಎಂದು ಮುನ್ನುಗ್ಗುತ್ತಾ ಆಗಾಗ ನಮ್ಮನ್ನೇ ನಾವು ರೀಸ್ಟಾರ್ಟ್ ಮಾಡಿಕೊಳ್ಳುತ್ತಾ, ಸಾಧನೆ ಮಾಡಲು ಪ್ರಶ್ನಿಸಿಕೊಳ್ಳುತ್ತಾ, ಏಕೆ ಸಾಧ್ಯವಿಲ್ಲವೆಂದು ಕೇಳಿಕೊಳ್ಳುತ್ತಾ, ನಿರಂತರ ಹೋರಾಡುವುದು ನಮ್ಮ ಕರ್ತವ್ಯ.
ಆಗ ಯಶಸ್ಸು ಗ್ಯಾರಂಟಿ!
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.