{"product_id":"ram-gopal-varma-nannishta","title":"ರಾಮ್ ಗೋಪಾಲ್ ವರ್ಮಾ ನನ್ನಿಷ್ಟ (ಸಿನಿಮಾಯಾನ) | Ram Gopal Vopal Varma Nannishta","description":"\u003cp\u003eಒಬ್ಬ ಮನುಷ್ಯನನ್ನು ಅವನ ಸುತ್ತಲಿನ ಪರಿಸರ ಸೃಷ್ಟಿಸುತ್ತದೆಯೆಂದು ಕಾರ್ಲ್ ಮಾರ್ಕ್ಸ್ ಹೇಳಿದಂತೆ, ಅಯನ್ ಬ್ಯಾಂಡ್, ಫ್ರೆಡರಿಕ್ ನೀಷೆ, ಆರ್ಥರ್ ಶೋಪೆನ್ ಹೋವರ್, ವಿಜಯವಾಡದ ಗೆಳೆಯ ಸತ್ಯೇಂದ್ರ, ಜೇಮ್ಸ್ ಹ್ಯಾಡ್ಲಿ ಚೇಸ್, ಫ್ರೆಡರಿಕ್ ಫೋರ್ಸೆತ್, ಮುಪ್ಪಾಳ ರಂಗನಾಯಕಮ್ಮ, ಮ್ಯಾಡ್ ಪತ್ರಿಕೆಗಳು, ಸೆಕ್ಸ್ ಪುಸ್ತಕಗಳು, ಚಂದಮಾಮ ಮತ್ತು ಬಾಲಮಿತ್ರ, ಸ್ಟಿಲ್‌ಬರ್ಗ್, ಕೆ. ಬಾಲಚಂದರ್ ಹಾಗೂ ನನ್ನ ಬದುಕಲ್ಲಿ ಎದುರಾದ ಪ್ರತಿ ವ್ಯಕ್ತಿಯ ಅನುಭವಗಳಿಂದ ನಾನು ಆರಿಸಿ ನನ್ನವುಗಳನ್ನಾಗಿ ಮಾಡಿಕೊಂಡದ್ದು ನನ್ನೊಳಗಿನ ಒಂದು ಭಾಗ.\u003c\/p\u003e\n\u003cp\u003eಮತ್ತೊಂದು ಭಾಗ- ನಾನು ಒಳ್ಳೆಯ ವಿದ್ಯಾರ್ಥಿ ಆಗದಿದ್ದುದು, ನನ್ನನ್ನು ಇಷ್ಟ ಬಂದಂತೆ ಬದುಕಲು ಬಿಟ್ಟಿದ್ದ ಅಪ್ಪ, ಐದು ವರ್ಷ ವಿಜಯವಾಡದ ಬೀದಿಗಳಲ್ಲಿ ಪೋಲಿ ಅಲೆದದ್ದು, ನನ್ನನ್ನು ಸಿನೆಮಾ ಉನ್ಮಾದಿಯನ್ನಾಗಿ ಮಾಡಿದ ಪ್ರಸಾದ್ ಮಾಮ, ಸಿನೆಮಾ ವಿಶ್ಲೇಷಣೆಯ ರುಚಿ ತೋರಿಸಿದ ಮುರಳಿ ಮಾಮನಂಥವರು ನನ್ನ ಬದುಕಲ್ಲಿ ಬಂದದ್ದು ಇವೆಲ್ಲವುಗಳಿಂದ'ನಾನು' ನಾನಾದೆ. ನಾನು 'ನನ್ನಂತೆ' ಉಳಿದೆ; 'ನನ್ನಿಷ್ಟ' ಬಂದಂತೆ ಬದುಕಿದೆ; ಬದುಕುತ್ತಿದ್ದೇನೆ; ಬದುಕಲಿದ್ದೇನೆ.\u003c\/p\u003e\n\u003cp\u003eರಾಮ್ ಗೋಪಾಲ್ ವರ್ಮ\u003c\/p\u003e\n\u003cp\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":48516036854043,"sku":"","price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/ram-gopal-varma-nannishta-cinemayana-7770321.jpg?v=1767537726","url":"https:\/\/beetlebookshop.com\/kn\/products\/ram-gopal-varma-nannishta","provider":"Beetle Book Shop","version":"1.0","type":"link"}