{"product_id":"purohitashaahi-mattu-gulaamagiri","title":"ಪುರೋಹಿತಶಾಹಿ ಮತ್ತು ಗುಲಾಮಗಿರಿ | Bureaucracy and Slavery","description":"\u003cp\u003eಭಾರತದಲ್ಲಿ ಪುರೋಹಿತ ಪಾಮರರು ಸೃಷ್ಟಿಸಿರುವ ಹಜಾರಿಕಾ ಮಾದರಿಯ ಗುಲಾಮಗಿರಿಯಲ್ಲಿ ಯಾರೊಬ್ಬರನ್ನೂ ಬೆರಳು ಮಾಡಿ ತೋರಿಸದಂತೆ ಎಚ್ಚರವಹಿಸಲಾಗಿದೆ. ದಂತಕತೆ ಎಂದು ನೋಡುವಷ್ಟರಲ್ಲಿ ಐತಿಹ್ಯವಾಗಿಯೂ.. ಇತಿಹಾಸ ಬೊಗಳೆಯಾಗಿಯೂ.. ಪುರಾಣ ಪುಣ್ಯಕತೆಗಳ ಮೂಲಕ ಶೋಷಣೆಯ ಬೀಜಾಂಕುರವಾಗಿರುವುದನ್ನು ನಾಡದೇಸಾಯಿ ಕುಲಕರ್ಣಿಗಳವರೆಗೆ ತಂದು ನಿಲ್ಲಿಸಿರುವುದನ್ನು ಮತ್ತು ಆಯಾಕಾಲಕ್ಕೆ ತಕ್ಕ ದಿರಿಸಿನ ವೇಷ ಹಾಕಿಕೊಳ್ಳುವ ಗೋಸುಂಬೆತನವನ್ನು ಇಲ್ಲಿ ಸವಿಸ್ತಾರವಾಗಿ ಜ್ಯೋತಿಬಾ ದೋಂಡಿಬಾನೊಡನೆ ಸಂವಾದಿಸಿದ್ದಾರೆ.\u003c\/p\u003e\n\u003cp\u003eಜ್ಯೋತಿಬಾ ಭಾರತದ ಆಂತರಿಕ ಸ್ವಾತಂತ್ರ್ಯಕ್ಕಾಗಿ, ಸಾತ್ವಿಕ • ಸ್ವಾತಂತ್ರ್ಯದ ಅರಿವಿಗಾಗಿ ಹೋರಾಡಿದವರು. ಅವರ ಹೋರಾಟಕ್ಕೆ ಎದುರಾಗಿ ಬ್ರಿಟಿಷರಿರಲಿಲ್ಲ ನಮ್ಮದೆ ದೇಶದ ಪುರೋಹಿತವರ್ಗವಿತ್ತು. ಅವರು ಸೃಷ್ಟಿಸಿರುವ ಅಸಂಖ್ಯ ಗಣಗಳ ಪುರಾಣ ಮತ್ತು ಸೊಕ್ಕಿನ ಜೀವನಕ್ರಮವಿತ್ತು. ಅಲಂಕಾರಿಕವಾದ ವೈಭವೋಪೇತ ಜೀವನಪದ್ಧತಿಯನ್ನು ಪ್ರಶ್ನಿಸುವ ಮೊದಲು ತೊಡರಾಗಿದ್ದ ಕೆಲವು ಪುರಾಣ ಕತೆಗಳು ಭಾರತದ ಆಂತರ್ಯವನ್ನು ಆಳುತ್ತಿದ್ದವು. ಪುರಾಣೇತಿಹಾಸ ಹೀಗಿದೆ, ಹೀಗೆ ಬದುಕಬೇಕೆಂಬ ಅಲಿಖಿತ ನಿಯಮಗಳು ಶೂದ್ರ-ಸ್ತ್ರೀ-ದಲಿತರನ್ನು ನಂಬಿಸಿದ್ದವು. ಆ ನಂಬಿಕೆಯ ಆಳದಲ್ಲಿನ ಗುಲಾಮಗಿರಿಯ ಅಂಶಗಳನ್ನು ಮತ್ತು ಆಕಾರ-ಅಳತೆಗಳಿಲ್ಲದ ಬೊಗಳೆ ಕತೆಗಳ ಪೊಳ್ಳು ನೈತಿಕತೆಯನ್ನು ಈ ಪುಸ್ತಕ ವಿಶ್ಲೇಷಿಸುತ್ತದೆ.\u003c\/p\u003e","brand":"Social Justice \u0026 Philosophy | ಸಾಮಾಜಿಕ ನ್ಯಾಯ ಮತ್ತು ಚಿಂತನೆ","offers":[{"title":"Default Title","offer_id":49956454433051,"sku":"","price":108.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/purohitashaahi-mattu-gulaamagiri-4346214.jpg?v=1767533347","url":"https:\/\/beetlebookshop.com\/kn\/products\/purohitashaahi-mattu-gulaamagiri","provider":"Beetle Book Shop","version":"1.0","type":"link"}