{"product_id":"puepa-collection-of-kannada-poems-by-shashi-tarikere","title":"ಪ್ಯೂಪಾ | ಪ್ಯೂಪಾ (ಶಶಿ ತರೀಕೆರೆ ಕವನಗಳು)","description":"\u003cp\u003eತನ್ನ ನಿಜವಾದ ಮುಖವನ್ನು ವ್ಯಕ್ತಿ ಎಂದೂ ಕಾಣಲಾರ. ಕಾಣುವ ಅಥವಾ ಕಾಣುತ್ತೇನೆಂದು ಭ್ರಮಿಸುವ ಹೊರಜಗತ್ತಾದರೂ ಎಷ್ಟೊಂದು ನಿಜ ಎನ್ನುವ ಪ್ರಶ್ನೆ ಏಳುತ್ತದೆ. ನೇರವಾಗಿ ನೋಡಿದಾಗ ನಮಗೆ ಎಲ್ಲವೂ ಚಪ್ಪಟೆಯಾಗಿ ತೋರುತ್ತವೆ. ಮೂರನೆಯ ಆಯಾಮ ಗೋಚರಿಸಬೇಕಾದರೆ ಕೋನದಲ್ಲಿ ನೋಡುವುದು ಅಗತ್ಯವಾಗುತ್ತದೆ. ಈ ಕವಿ ಅದನ್ನು ಮಾಡುತ್ತಾರೆ. ಆಗ ನೇರವನ್ನು ಮುರಿಯಬೇಕಾಗುತ್ತದೆ. ಇಲ್ಲೊಂದು ಪ್ರಕ್ಷೇಪವಿದೆ; ಪ್ರಕ್ಷೇಪ ವೆಂದರೆ ಕತೆಗೆ ಕಟ್ಟುಕತೆ ಸೇರಿಸುವುದು, ಇಂಟರ್‌ಪೊಲೇಶನ್, ಕತೆಯೇ ಕಟ್ಟುಕತೆಯಾಗಿರುತ್ತ ಅದಕ್ಕೆ ಸೇರಿಸುವುದನ್ನಷ್ಟೆ ಕಟ್ಟುಕತೆಯೆಂದಾಗ ಕತೆ ಆಥೆಂಟಿಕ್, ಕಟ್ಟುಕತೆ ಕಲ್ಪನೆ ಎಂಬ ಭ್ರಮೆ ಬರುತ್ತದೆ. ಇದು ಮುಖವನ್ನು ಕನ್ನಡಿಯೊಳಗಿನಿಂದ ನೋಡಿದ ಹಾಗೆ! ಅಥವಾ ಹಾಗೆ ಅಂದುಕೊಳ್ಳುವುದು, ಕಲ್ಪಿಸುವುದು. ಈ ಕವಿ ಇಂಥಾದ್ದನ್ನು ಕವಿತೆಗಳಲ್ಲಿ ಮಾಡುತ್ತಾರೆ. ಅವು 'ಕಟ್ಟುಕತೆ'ಗಳ ಒಂದು ಸೇತು ಇದ್ದ ಹಾಗೆ. ಒಂದರಿಂದ ಒಂದಕ್ಕೆ ನಾವು ಜಿಗಿಯಬೇಕು. ಎಲ್ಲೂ ಹೋಗುವುದಿಲ್ಲ ಎಲ್ಲೂ ವಿರಮಿಸುವುದಿಲ್ಲ. ಅರ್ಧಕ್ಕೆ ನಿಂತ ಸೇತುವಿನ ಹಾಗೆ. ಸೆಳವು ನೋಡುವುದಕ್ಕೆ ಮಾಡಿದ್ದು, ಅಥವಾ ನೆರೆಯಲ್ಲಿ ಸೆಳೆದುಕೊಂಡು ಹೋದ್ದು ಈ ನಿರುಪಾಯ' ಎಂಬ ಪದವನ್ನು ನಾನು ಶಶಿಯವರದೇ ಕವಿತೆಯೊಂದರಿಂದ ಎತ್ತಿಕೊಂಡದ್ದು.\u003c\/p\u003e\n\u003cp\u003eಕೆ. ವಿ. ತಿರುಮಲೇಶ್\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":48707490578715,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/puepa-collection-of-kannada-poems-by-shashi-tarikere-9047467.jpg?v=1767533345","url":"https:\/\/beetlebookshop.com\/kn\/products\/puepa-collection-of-kannada-poems-by-shashi-tarikere","provider":"Beetle Book Shop","version":"1.0","type":"link"}