{"product_id":"premabhikshu-short-novel-based-on-the-life-of-gauthama-buddha","title":"ಪ್ರೇಮಭಿಕ್ಷು - ಗೌತಮ ಬುದ್ಧನ ಜೀವನವನ್ನು ಆಧರಿಸಿದ ಒಂದು ಸಣ್ಣ ಕಾದಂಬರಿ","description":"\u003cp dir=\"ltr\"\u003e“ಪುಣ್ಯಾಕ್ಷ ಅದು ಮುಗಿದ ಕತೆ. ಕರ್ಮಚಕ್ರಕ್ಕೆ ಸಿಕ್ಕಿ ನೀನು ಸುತ್ತುತ್ತಲೇ ಇದ್ದೀಯ ಎಂದೆ. ಈ ದಿನದ ರೀತಿ ಬೇರೆ. ನೀನು ಅದನ್ನು ಮುಗಿಸಿದ್ದೀಯೆ.' “ಕರುಣಾಳು ಗುರುದೇವ. ನೀವು ಕರುಣಾಳು. ಜನ ಒಂದು ಕಣ್ಣನ್ನಾದರೂ ಏಕೆ ಉಳಿಸಿದ್ದಾರೋ ಎನ್ನುತ್ತಿದ್ದೆ. ಈಗ    ಅರಿವಾಯಿತು,  ನಿಮ್ಮ ಮುಖವನ್ನು ನೋಡುತ್ತಿರುವ ಸೌಭಾಗ್ಯಕ್ಕಾಗಿ, ತಂದೆ ನಿಮ್ಮ ಮುಖವನ್ನು ನೋಡುತ್ತ ನೋಡುತ್ತ ಸಾಯುತ್ತೇನೆ.” 'ನೀನೀಗ ಸಾಯುವುದಿಲ್ಲ. ಸತ್ತರೇನಾದಂತಾಯಿತು? ನೀನು ಖಂಡಿತ ಉತ್ತಮಗೊಳ್ಳುತ್ತಿಯಾ. ನೀನು ಮಾಡಬೇಕಾದ ಕೆಲಸ ಬಹಳ  ಇದೆ ಮಗು.' ಬುದ್ಧದೇವ ದಿಗಂತದ ಕಡೆ ನೋಡುತ್ತಾ ಹೇಳಿದ: “ಪುಣ್ಯಾಕ್ಷ, ನಿನ್ನ ಕತೆ ಪ್ರೇಮದ ಶಾಸನವಾಗುತ್ತದೆ. ನೀನು ಪ್ರೇಮ ಶಾಂತಿಯ ಸಂದೇಶವನ್ನು ಹೊತ್ತು ನಾಡಿನ ಮೂಲೆ ಮೂಲೆಗಳಿಗೆ ಹೋಗುತ್ತೀಯ..! ಜನ ನಿನಗೆ ಭಿಕ್ಷೆ ನೀಡುತ್ತಾರೆ. ನೀನು ಅವರಿಗೆ ಪ್ರೇಮಭಿಕ್ಷೆಯನ್ನು ಕೊಡುತ್ತೀಯೆ. ವರ್ಷ ಉರುಳಲಿ, ಶತಮಾನಗಳು ಉರುಳಲಿ. ಒಂದೊಂದು ಹೃದಯವೂ ಬೆಳಕಿನ , ಆಕರವಾಗುವವರೆಗೆ ಶಾಂತಿದೂತರು ಹೀಗೆ ಹೋಗುತ್ತಲೇ ಇರುತ್ತಾರೆ. ಇಂದಲ್ಲ ನಾಳೆ, ನನ್ನ ಹೃದಯದಲ್ಲಿ ನಿರ್ವಾಣದ ಕಡಲು ಉಕ್ಕಿ ಹರಿದಂತೆ, ಒಂದೊಂದು ಜೀವದ ಹೃದಯದಲ್ಲೂ ಉಕ್ಕಿ ಹರಿಯುತ್ತದೆ.' ಇಂತಹ ಕಾದಂಬರಿಯ ಕೆಲವು ಸಾಲುಗಳು ಪ್ರಭುಶಂಕರರ ಸಾಹಿತ್ಯ ಕೃಷಿಯ ಮಹತ್ವವನ್ನು ಸಾರುವಂತದ್ದು. \u003c\/p\u003e\n\u003cp dir=\"ltr\"\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":49492717273371,"sku":"","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/premabhikshu-short-novel-based-on-the-life-of-gauthama-buddha-8080437.jpg?v=1767533045","url":"https:\/\/beetlebookshop.com\/kn\/products\/premabhikshu-short-novel-based-on-the-life-of-gauthama-buddha","provider":"Beetle Book Shop","version":"1.0","type":"link"}