{"product_id":"play-and-learn-english-through-language-games-ಆಡಿ-ಕಲಿಯೋಣ-ಇಂಗ್ಲಿಷ್","title":"PLAY AND LEARN ENGLISH THROUGH LANGUAGE GAMES (ಆಡಿ ಕಲಿಯೋಣ ಇಂಗ್ಲಿಷ್)","description":"\u003cdiv class=\"col-lg-12\"\u003e\n\u003cp align=\"left\"\u003eನೋಡಿ ತಿಳಿ – ಮಾಡಿ ಕಲಿ - ಆಡಿ ನಲಿ ಎಂಬ ಸಂತಸ ಕಲಿಕೆಯ ಸೂತ್ರವನ್ನು ಇಂಗ್ಲಿಷ್ ಭಾಷಾ ಬೋಧನೆ ಮತ್ತು ಕಲಿಕೆಗೆ ಅಳವಡಿಸಲು ಹಲವು ಭಾಷಾ ತಜ್ಞರು ಶ್ರಮಿಸುತ್ತಲೇ ಇದ್ದಾರೆ. ಬೇದ್ರೆ ಪ್ರತಿಷ್ಠಾನದ ಭಾಷಾ ಪ್ರಯೋಗಶಾಲೆಯಲ್ಲಿ, ವಿವಿಧ ಶಿಬಿರಗಳಲ್ಲಿ, ಕಾರ್ಯಾಗಾರಗಳಲ್ಲಿ ನಡೆಸಲಾದ ಇಂಗ್ಲಿಷ್ ಭಾಷಾ ಬೋಧನಾ ಪ್ರಯೋಗಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ಆಧರಿಸಿದ Play and Learn English (ಆಡಿ ಕಲಿಯೋಣ ಇಂಗ್ಲಿಷ್) ಕೃತಿ 9 ಬಾರಿ ಮುದ್ರಣಗೊಂಡ ಜನಪ್ರಿಯ ಕೃತಿಯಾಗಿದ್ದು ಇದರ ಪರಿಷ್ಕೃತ ಹೊಸ ಆವೃತ್ತಿ ಇದೀಗ ನಿಮ್ಮ ಕೈಯಲ್ಲಿದೆ. ಮಕ್ಕಳಿಗಷ್ಟೇ ಅಲ್ಲದೆ ಪೋಷಕರಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ, ಡಿ.ಇಡಿ. \/ ಬಿ.ಇಡಿ.\/ಎಂ.ಇಡಿ. ಪ್ರಶಿಕ್ಷಾರ್ಥಿಗಳಿಗೆ ಈ ಕೃತಿ ಅತ್ಯುಪಯುಕ್ತ ಕೈಪಿಡಿಯಾಗಿದೆ. ಭಾಷಾ ಆಟ (Language Game), ಬಾಯ್ದೆರೆ ಆಟಗಳು (Oral Games), ಹಲಗೆ ಬಳಪದ ಆಟಗಳು (Paper and Pencil Games), ಡ ಠ ಸ (Games ಆಡಿ ನೋಡಿ (Do it Played with PlayThings), 2 Yourself and Play it), ೮ ೬ (Grammar Games). ಸಂರಚನೆಯ ಆಟಗಳು (Composition Games) ಮತ್ತು ಪೂರಕ ಮಾಹಿತಿ (Additional Information) 22 2 2, 95 ಗಳಲ್ಲಿ, ನೂರಾರು ಇಂಗ್ಲಿಷ್ ಭಾಷಾ ಆಟಗಳನ್ನು ಪರಿಚಯಿಸಲಾಗಿದೆ. ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಈಗಾಗಲೇ ಪಠ್ಯಕ್ರಮದಲ್ಲಿ ಸೇರ್ಪಡೆ ಯಾಗಿದೆ. ಸಾಂಪ್ರದಾಯಿಕ ವಿಧಾನಗಳಿಂದ ಇಂಗ್ಲಿಷ್ ಕಲಿಸುವ ಕಾಲ ಹಿಂದಕ್ಕೆ ಸರಿದು ಬಹುಮಾಧ್ಯಮ ತಂತ್ರಜ್ಞಾನ ಮತ್ತು ಮಾತೃಭಾಷೆಯ ಮೂಲಕ ಭಾಷೆಯನ್ನು ಸರಳವಾಗಿ ಕಲಿಸುವ ವೈಜ್ಞಾನಿಕ ವಿಧಾನ ಚಾಲ್ತಿಗೆ ಬಂದಿದೆ. ಇವೆಲ್ಲವನ್ನೂ ಒಂದೆಡೆ ಸಂಕಲಿಸುವ ಪ್ರಯತ್ನ ಈ Play and Learn English (a ). ಕ್ವಿಸ್, ಅಡ್ವಂಚರ್, ಕರೀರ್ ಗೈಡೆನ್ಸ್, ಸ್ಕಿಲ್ ಟ್ರೈನಿಂಗ್, ಇಂಗ್ಲಿಷ್ ಭಾಷಾ ಬೋಧನೆ, ವ್ಯಕ್ತಿತ್ವ ವಿಕಾಸ ಮತ್ತು ಸಾಮಾನ್ಯ ಜ್ಞಾನದ ತರಬೇತಿ ಶಿಬಿರಗಳನ್ನು 1985ರಿಂದ ಸಂಘಟಿಸುತ್ತಿರುವ, ಸ್ಪರ್ಧಾ ಮಾಹಿತಿಯ ಅಂಕಣ ಬರಹಗಳು ಮತ್ತು 95ಕ್ಕೂ ಹೆಚ್ಚು ಕೃತಿಗಳ ಮೂಲಕ ಯುವಜನರಿಗೆ ಉಪಯುಕ್ತ ಮಾರ್ಗದರ್ಶನ ಮಾಡುತ್ತಿರುವ ಬೇದ್ರೆ ಮಂಜುನಾಥ ಅವರ ಹಲವು ವರ್ಷಗಳ ಪರಿಶ್ರಮದ ಸಂಕಲನ ಇದು. ಓದಿ. ಓದಿಸಿ. ಆಡುತ್ತಾ, ಆಡಿಸುತ್ತಾ ಇಂಗ್ಲಿಷ್ ಕಲಿಸಿ. ಯಶಸ್ಸು ನಿಮ್ಮದಾಗಲಿ!\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":51876726079771,"sku":null,"price":351.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/play-and-learn-english-through-language-games-beetle-book-shop-8441294.jpg?v=1773243728","url":"https:\/\/beetlebookshop.com\/kn\/products\/play-and-learn-english-through-language-games-%e0%b2%86%e0%b2%a1%e0%b2%bf-%e0%b2%95%e0%b2%b2%e0%b2%bf%e0%b2%af%e0%b3%8b%e0%b2%a3-%e0%b2%87%e0%b2%82%e0%b2%97%e0%b3%8d%e0%b2%b2%e0%b2%bf%e0%b2%b7%e0%b3%8d","provider":"Beetle Book Shop","version":"1.0","type":"link"}