{"product_id":"pampanodu","title":"ಪಂಪನೊಡನೆ","description":"\u003cp\u003eಲೇಖಕರು : ಡಾ ಜಯಪ್ರಕಾಶ್ ಶೆಟ್ಟಿ ಎಚ್ \u003c\/p\u003e\n\u003cp\u003eಜಯಪ್ರಕಾಶ್ ಅವರ ಪಂಪನೋದು ಎನ್ನುವ ಈ ಕೃತಿ ಕನ್ನಡಕ್ಕೆ ಅಪರೂಪದ ಕೊಡುಗೆ. ಇಪ್ಪತ್ತನೇ ಶತಮಾನದ ಮತ್ತು ಮುಂದಿನ ಶತಮಾನಗಳ ಯಾವ ಯಾವ ಅರಿವ, ಅಭೀಪ್ಸೆ ಮತ್ತು ಸಂಕಟಗಳನ್ನು ಪಂಪನ ಕಾವ್ಯಗಳು ಹೊತ್ತು ತಿರುಗುತ್ತಿವೆಯೋ ಎಂಬಂತೆ ಈ ಕೃತಿಯಲ್ಲಿ ಪಂಪನ ಓದು ತನ್ನ ವೈವಿಧ್ಯತೆಯಲ್ಲಿ ಮೈತಳೆದಿದೆ. ಈ ಅರ್ಥದಲ್ಲಿ ಪಂಪನ ಕಾವ್ಯ ಕಾಲಜ್ಞಾನ ಆಧುನಿಕ ಕನ್ನಡದ ಚಿಂತನೆಯಲ್ಲಿ ಒಂದು ಕೃಷಿಯನ್ನು ಹೀಗೆ ಸಂಪೂರ್ಣವಾಗಿ ಓದಿನ ಕಡೆಯಿಂದ ನೋಡಿ, ಓದಿನ ವೈವಿಧ್ಯತೆಯ ಸ್ವರೂಪವನ್ನು, ಮಿತಿಯನ್ನು, ಗುಣಾತ್ಮಕತೆಯನ್ನು\u003c\/p\u003e\n\u003cp\u003eಹೀಗೆ ಹಲವು ದೃಷ್ಟಿಗಳಿಂದ ಗಮನಿಸಿದ ಇನ್ನೊಂದು ಕೃತಿಯನ್ನು ನಾನು ಗಮನಿಸಿಲ್ಲ. ಪಶ್ಚಿಮದ ಚಿಂತನೆಯ ಮಾದರಿಗಳು ಪಂಪನ ಓದಿನಲ್ಲಿ ಪ್ರಧಾನವಾಗಿ ಪ್ರಭಾವಿಸಿದ ಬಗೆಯಿಂದ ಪಂಪ ನಮ್ಮ ಕೈಗೆ ದಕ್ಕದೇ ಹೋಗಿದ್ದಾನೆ ಎಂದು ಚಿಂತಿಸುವ ಹಾಗೆ ಈ ಕೃತಿ ಮಾಡುತ್ತದೆ. ಹಾಗಾದರೆ ಸುವರ್ಣ ಮಾಧ್ಯಮ ಯಾವುದು? ಈ ಕೃತಿಯ ವಸ್ತು, ಭಾಷೆಯ ಮೂಲಕ ರೂಪುಗೊಂಡ ಆಕೃತಿಯನ್ನು ವಿಭಿನ್ನ ವಿಧಾನದಲ್ಲಿ ಪರಿಶೀಲಿಸುವುದೇ? ಈ ಪ್ರಶ್ನೆಯು ಈ ಕೃತಿಯ ಒಳಗೆ ಇದೆ ಅಥವಾ ನಮ್ಮ ಕಾಲದ ಅರಕೆಗಳನ್ನು ಪೂರೈಸುವ ಭಾಗವಾಗಿಯೇ ಓದು ಪ್ರಧಾನವಾಗಿ ಮುಂದುವರಿಯುವುದೇ..? ಈ ಸಂದೇಹವೂ ಈ ಪುಸ್ತಕದ ಒಡಲಲ್ಲಿ ಉಳಿದಿದೆ. ಹೀಗಾಗಿ ಕನ್ನಡಕ್ಕೆ ಇನ್ನೊಂದು ವಿಶಿಷ್ಟವಾದ ಕೃತಿಯಾಗಿ ರೂಪ ತಳೆದಿದೆ.\u003c\/p\u003e\n\u003cp\u003e- ಬಸವರಾಜ ಕಲ್ಕುಡಿ\u003c\/p\u003e","brand":"BEETLE BOOK SHOP","offers":[{"title":"Default Title","offer_id":47419889778971,"sku":"","price":252.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/pampanodu-7681766.png?v=1767536285","url":"https:\/\/beetlebookshop.com\/kn\/products\/pampanodu","provider":"Beetle Book Shop","version":"1.0","type":"link"}