{"product_id":"paarijaata-kasturi-bayari-samagra-kathegalu","title":"ಪಾರಿಜಾತ | ಪಾರಿಜಾತ (ಕಸ್ತೂರಿ ಬಾಯರಿ ಸಮಗ್ರ)","description":"\u003cp dir=\"ltr\"\u003e\u003cspan\u003eಈ ಮುನ್ನುಡಿಗೆ ಈ ಹೆಸರು ಯಾಕೆ? ಬಾಯಿರಿಯವರ ಮೊದಲ ಸಂಕಲನದ ಮೊದಲ ಕಥೆಯಲ್ಲಿಯೇ ಬರುವ ಈ ಪ್ರತಿಮೆ ಕಸ್ತೂರಿ ಬಾಯಿರಿಯವರ ವ್ಯಕ್ತಿತ್ವಕ್ಕೂ ಹೊಂದಿಕೊಳ್ಳುತ್ತದೆ ಎಂದು ನನ್ನ ಒಳಮನಸ್ಸು ಒಂದು ಕ್ಷಣದಲ್ಲಿ ಹೇಳಿತು. ಹೌದಲ್ಲಾ, ಸರಿ ಎನ್ನಿಸಿತು. ಮೈಕೇಲ್ ಏಂಜೆಲೋ ರೂಪಿಸಿದ, ವಯಸ್ಕನಾದ ಯೇಸುವನ್ನು ತೊಡೆಯ ಮೇಲೆ ಮಲಗಿಸಿಕೊಂಡ, ಮಾತೆ ಮೇರಿಯ ನೆನಪೂ ಬಂತು. ಈ ಕಥೆಗಾರ್ತಿಯೂ ಎಲ್ಲ ಮನುಷ್ಯರನ್ನು ತನ್ನ ಮಕ್ಕಳಂತೆಯೇ ಪ್ರೀತಿಸಿದರು. ಅವರ ಕಥೆಗಳೂ ಈ 'ಅಮೃತವಾಹಿನಿಯ' ಕವಲುಗಳೇ. ಕೊನೆ ಕೊನೆಯ ವರ್ಷಗಳಲ್ಲಿ ಫೋನ್ ಮಾಡಿದಾಗಲೆಲ್ಲಾ ಅವರು ಮತ್ತೆ ಮತ್ತೆ ತನ್ನ ಮನೆಗೆ ಬರುತ್ತಿದ್ದ 'ಬಾಲಕೃಷ್ಣ'ನಂತಹ ಹುಡುಗನ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದರು. ನನ್ನ ಗೆಳೆಯರಾದ ರಹಮತ್ ಮತ್ತು ಅವರ ಮಡದಿಗೆ ಆರತಿ ಮಾಡಿದಾಗಲೂ ಅಷ್ಟೇ. 'ನರರ ನಡುವಿನಡ್ಡಗೋಡೆಗಳನು' ಪ್ರೀತಿಯಿಂದ ಬದಿಗೆ ಸರಿಸಿದ ಇವರ ಹೃದಯ ನಮ್ಮ ಸಮಾಜದ ಹಲವು ಸಮಸ್ಯೆಗಳಿಗೆ ಹಿಂಸೆಯಿಲ್ಲದ ಸಂಜೀವಿನಿ. ನೊಂದು ಮಾಗಿದ ಜೀವಕ್ಕೆ ಕಲೆಯೂ ಔಷಧವೇ. ಕಥೆಗಾರಿಕೆಯೂ ಔಷಧವೇ. ಆದರೆ, ಮರೆತು ಹೋದ ನರಕವನ್ನು ಮತ್ತೆ ಮತ್ತೆ ಮರುಸೃಷ್ಟಿ ಮಾಡುವ ಬರವಣಿಗೆಯೆಂಬ ಗರಗಸವು ಇವರನ್ನು ಕೊನೆಯವರೆಗೂ ಕೊಯ್ದಿತು. 'ಆತ್ಮಮರುಕ'ದಿಂದ ಲೋಕಕಾರುಣ್ಯದ ಕಡೆಗೆ ಅವರು ಮಾಡಿರುವ ಪಯಣ ಕುತೂಹಲಕಾರಿ. ಈ ಕಥೆಗಳ ಓದು ನಮ್ಮ ಕಾಲದ ಸಾಹಿತಿ-ಓದುಗ-ವಿಮರ್ಶಕರನ್ನು ಮಾತ್ರವಲ್ಲದೆ, ಸಾಹಿತ್ಯವೆಂಬ 'ಸಾಂಸ್ಕೃತಿಕ ಸಂಸ್ಥೆ'ಯನ್ನೇ ಕಾಡುತ್ತಿರುವ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವುದೆಂದು ನನಗೆ ತೋರುತ್ತದೆ.\u003c\/span\u003e\u003c\/p\u003e\n\u003cp dir=\"ltr\"\u003e\u003cspan\u003eಎಚ್.ಎಸ್.ರಾಘವೇಂದ್ರರಾವ್\u003c\/span\u003e\u003c\/p\u003e\n\u003cp dir=\"ltr\"\u003e\u003cspan\u003e(ಮುನ್ನುಡಿಯಿಂದ ಆಯ್ದುಕೊಂಡಿದ್ದು..)\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":50326577348891,"sku":"","price":630.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/paarijaata-kasturi-bayari-samagra-kathegalu-8214865.png?v=1767528787","url":"https:\/\/beetlebookshop.com\/kn\/products\/paarijaata-kasturi-bayari-samagra-kathegalu","provider":"Beetle Book Shop","version":"1.0","type":"link"}