ಹೆಚ್ಚುವರಿ ಮಾಹಿತಿ
ವಿವರಣೆ
ಈ ಮುನ್ನುಡಿಗೆ ಈ ಹೆಸರು ಯಾಕೆ? ಬಾಯಿರಿಯವರ ಮೊದಲ ಸಂಕಲನದ ಮೊದಲ ಕಥೆಯಲ್ಲಿಯೇ ಬರುವ ಈ ಪ್ರತಿಮೆ ಕಸ್ತೂರಿ ಬಾಯಿರಿಯವರ ವ್ಯಕ್ತಿತ್ವಕ್ಕೂ ಹೊಂದಿಕೊಳ್ಳುತ್ತದೆ ಎಂದು ನನ್ನ ಒಳಮನಸ್ಸು ಒಂದು ಕ್ಷಣದಲ್ಲಿ ಹೇಳಿತು. ಹೌದಲ್ಲಾ, ಸರಿ ಎನ್ನಿಸಿತು. ಮೈಕೇಲ್ ಏಂಜೆಲೋ ರೂಪಿಸಿದ, ವಯಸ್ಕನಾದ ಯೇಸುವನ್ನು ತೊಡೆಯ ಮೇಲೆ ಮಲಗಿಸಿಕೊಂಡ, ಮಾತೆ ಮೇರಿಯ ನೆನಪೂ ಬಂತು. ಈ ಕಥೆಗಾರ್ತಿಯೂ ಎಲ್ಲ ಮನುಷ್ಯರನ್ನು ತನ್ನ ಮಕ್ಕಳಂತೆಯೇ ಪ್ರೀತಿಸಿದರು. ಅವರ ಕಥೆಗಳೂ ಈ 'ಅಮೃತವಾಹಿನಿಯ' ಕವಲುಗಳೇ. ಕೊನೆ ಕೊನೆಯ ವರ್ಷಗಳಲ್ಲಿ ಫೋನ್ ಮಾಡಿದಾಗಲೆಲ್ಲಾ ಅವರು ಮತ್ತೆ ಮತ್ತೆ ತನ್ನ ಮನೆಗೆ ಬರುತ್ತಿದ್ದ 'ಬಾಲಕೃಷ್ಣ'ನಂತಹ ಹುಡುಗನ ಮೇಲೆ ಪ್ರೀತಿಯ ಮಳೆ ಸುರಿಸುತ್ತಿದ್ದರು. ನನ್ನ ಗೆಳೆಯರಾದ ರಹಮತ್ ಮತ್ತು ಅವರ ಮಡದಿಗೆ ಆರತಿ ಮಾಡಿದಾಗಲೂ ಅಷ್ಟೇ. 'ನರರ ನಡುವಿನಡ್ಡಗೋಡೆಗಳನು' ಪ್ರೀತಿಯಿಂದ ಬದಿಗೆ ಸರಿಸಿದ ಇವರ ಹೃದಯ ನಮ್ಮ ಸಮಾಜದ ಹಲವು ಸಮಸ್ಯೆಗಳಿಗೆ ಹಿಂಸೆಯಿಲ್ಲದ ಸಂಜೀವಿನಿ. ನೊಂದು ಮಾಗಿದ ಜೀವಕ್ಕೆ ಕಲೆಯೂ ಔಷಧವೇ. ಕಥೆಗಾರಿಕೆಯೂ ಔಷಧವೇ. ಆದರೆ, ಮರೆತು ಹೋದ ನರಕವನ್ನು ಮತ್ತೆ ಮತ್ತೆ ಮರುಸೃಷ್ಟಿ ಮಾಡುವ ಬರವಣಿಗೆಯೆಂಬ ಗರಗಸವು ಇವರನ್ನು ಕೊನೆಯವರೆಗೂ ಕೊಯ್ದಿತು. 'ಆತ್ಮಮರುಕ'ದಿಂದ ಲೋಕಕಾರುಣ್ಯದ ಕಡೆಗೆ ಅವರು ಮಾಡಿರುವ ಪಯಣ ಕುತೂಹಲಕಾರಿ. ಈ ಕಥೆಗಳ ಓದು ನಮ್ಮ ಕಾಲದ ಸಾಹಿತಿ-ಓದುಗ-ವಿಮರ್ಶಕರನ್ನು ಮಾತ್ರವಲ್ಲದೆ, ಸಾಹಿತ್ಯವೆಂಬ 'ಸಾಂಸ್ಕೃತಿಕ ಸಂಸ್ಥೆ'ಯನ್ನೇ ಕಾಡುತ್ತಿರುವ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವುದೆಂದು ನನಗೆ ತೋರುತ್ತದೆ.
ಎಚ್.ಎಸ್.ರಾಘವೇಂದ್ರರಾವ್
(ಮುನ್ನುಡಿಯಿಂದ ಆಯ್ದುಕೊಂಡಿದ್ದು..)
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.