{"product_id":"paadagatti-a-collection-of-short-stories","title":"ಪಾದಗಟ್ಟಿ - ಕಥಾ ಸಂಕಲನ | ಪಾದಗಟ್ಟಿ","description":"\u003cp\u003eಚರಿತ್ರೆಯ ನೆನಪುಗಳು ಬೇರೆ ಬೇರೆ ವ್ಯಕ್ತಿಗಳ ಮೇಲೆ ಮಾಡುವ ಪರಿಣಾಮಗಳು ವೈವಿಧ್ಯಮಯವಾಗಿರುತ್ತವೆ. ಚರಿತ್ರೆಯ ಅಗತ್ಯ ಕೂಡಾ ಹೀಗೆಯೇ. ಭೂತವನ್ನು ಕೆದಕಿ ನೋಡುವುದು ಕೆಲವರಿಗೆ ಕೇವಲ ಒಂದು ಹವ್ಯಾಸ; ಹೊಸ ಕಲಿಕೆಯ ಉತ್ಸಾಹ; ಕುತೂಹಲವನ್ನು ತಣಿಸಿಕೊಳ್ಳುವ ಒಂದು ಸಂದರ್ಭ. ಮತ್ತೆ ಕೆಲವರಿಗೆ ತಾವು ಇಂದು ನಂಬುವ, ಎಂದೋ ಇದ್ದಿರಬಹುದಾದ ಮೌಲ್ಯಗಳನ್ನು ಆರಾಧಿಸುವ ಅವಕಾಶ. ಇನ್ನೂ ಕೆಲವರಿಗೆ ಚರಿತ್ರೆ ಎಂಬುದು ಎಂದೂ ವಾಸಿಯಾಗಲಾರದ ಒಂದು ಹುಣ್ಣು. ಅದರ ನೆನಪೇ ಅವರಿಗೆ ಅಪ್ರಿಯ. ಹೀಗೆ ವ್ಯಕ್ತಿಗಳ ನೆನಪನ್ನೂ, ಸಮುದಾಯ ಸಂಸ್ಕೃತಿಗಳ ನೆನಪುಗಳನ್ನೂ ಬೇರೆ ಬೇರೆ ರೀತಿಗಳಲ್ಲಿ ಉದ್ದೀಪಿಸುವ ಚರಿತ್ರೆಯ ಸ್ವರೂಪವನ್ನು ಕೊಂಚ ಬಗೆದು ನೋಡುವುದು ಆನಂದ ಕುಂಚನೂರ ಅವರ 'ಆಸಂಗಿ ಅಗಸಿ ಬಾಗಿಲು' ಕತೆಯ ಮುಖ್ಯ ಆಶಯ ಎನ್ನಬಹುದು. ಈಚೆಗೆ ಬರೆಯುತ್ತಿರುವ ಆನಂದ ಕುಂಚನೂರ ಅವರು ತಮ್ಮ ಆರಂಭಿಕ ಪ್ರಯತ್ನಗಳಲ್ಲಿಯೇ ತೋರುತ್ತಿರುವ ಮಹತ್ವಾಕಾಂಕ್ಷೆ ಮೆಚ್ಚುವಂಥದು. ಅಷ್ಟೇ ಅಲ್ಲ, 'ರಚನೆ'ಗಾಗಿ ಅವರು ನಡೆಸುತ್ತಿರುವ ಸೃಜನಶೀಲ ಹುಡುಕಾಟವೂ ತಮ್ಮ ಅನುಭವ ಮತ್ತು ಅಭಿವ್ಯಕ್ತಿಗೆ ಹತ್ತಿರವಾಗಿರುವ ಸ್ಥಳೀಯ ಭಾಷೆಯನ್ನು ಒಂದು ಹದದಲ್ಲಿ ಬಳಸಿರುವ ಕ್ರಮವೂ ಗಮನ ಸೆಳೆಯುವಂತಿವೆ.\u003c\/p\u003e\n\u003cp\u003eಟಿ.ಪಿ. ಅಶೋಕ\u003c\/p\u003e\n\u003cp\u003e('ಆಸಂಗಿ ಆಗಸಿ ಬಾಗಿಲು' ಕತೆಗಾಗಿ ಬರೆದ ವಿಮರ್ಶೆಯಿಂದ)\u003c\/p\u003e","brand":"BEETLE BOOK SHOP","offers":[{"title":"Default Title","offer_id":51718099403035,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/paadagatti-a-collection-of-short-storiesbeetle-book-shop-5342876.jpg?v=1769949066","url":"https:\/\/beetlebookshop.com\/kn\/products\/paadagatti-a-collection-of-short-stories","provider":"Beetle Book Shop","version":"1.0","type":"link"}