{"product_id":"oodoranga-novel","title":"ಊದೊರಂಗ - ಕಾದಂಬರಿ","description":"\u003cp\u003eತುಂಬಾಡಿ ರಾಮಯ್ಯ ಅವರ ‘ಓದೋರಂಗ’ ಕೃತಿಯು ಕಾದಂಬರಿಯಾಗಿದೆ. ಕಾದಂಬರಿಯ ಹರಹನ್ನು ಮೀರಿದ ಕಥೆ, ಕಾವ್ಯ ಸ್ವರೂಪವನ್ನು ಕೃತಿಯು ತನ್ನದಾಗಿಸಿಕೊಂಡಿದೆ. ಮನುಷ್ಯ ಕುಲದ ತವಕ ತಲ್ಲಣಗಳನ್ನು ಹೇಳಲು ಕಥೆ, ಕಾದಂಬರಿ, ಪುರಾಣಗಳ ಸಾಧ್ಯತೆಗಳನೆಲ್ಲ ರಾಮಯ್ಯನವರು ಬಳಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ಕಾಣಿಸುವ ಹಲವು ಕಥನಗಳು ಇಲ್ಲಿದ್ದು, ಅವುಗಳೆಲ್ಲ ಮತ್ತೆ ಮತ್ತೆ ಸಂದಿಸುತ್ತಿರುವುದು ಹಾಗೂ ಒತ್ತಿ ಹೇಳುತ್ತಿರುವುದು ಒಂದೇ ಸಂಗತಿಯನ್ನು. ಒಂದು ಜೀವ ಮತ್ತೊಂದು ಜೀವದೊಂದಿಗೆ ಹೊಂದಿರಬೇಕಾದ ಪ್ರೀತಿ ಗೌರವವನ್ನು ಈ ಕೃತಿಯು ಹೇಳುತ್ತದೆ. ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವ ದೇವನೂರು ಕಾಣ್ಕೆಯ ಮಾನವೀಯತೆಯನ್ನೇ ರಾಮಯ್ಯನವರ ಕಥನಕಗಳು ಪಿಸುಗುಡುತ್ತಿವೆ. ಈ ಕಾದಂಬರಿಯಲ್ಲಿ ಬರುವಂತಹ ರಂಗ ಅನ್ನುವ ಪಾತ್ರವೂ ತನ್ನ ಜಾಣತನವನ್ನು ಪ್ರದರ್ಶಿಸುತ್ತದೆ. ತಾಯಿಕೋಳಿಯ ಬಾಣಂತನವನ್ನು ಇಲ್ಲಿ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕ ತುಂಬಾಡಿ ರಾಮಯ್ಯ.  ರಂಗನ ತಾಯಿ ತನ್ನ ಮಗಳ ಬಾಣಂತನವನ್ನು ಸಂಭ್ರಮಿಸಿದಷ್ಟೇ ಆಸ್ಥೆಯಿಂದ ಕೋಳಿಯ ಬಾಣಂತನ ನಡೆಸುತ್ತಾಳೆ. ಮೊಟ್ಟೆಗಳು ಮರಿಯಾಗುವ ಸಂಭ್ರಮದಲ್ಲಿ ರಂಗನ ಕುಟುಂಬ ಭಾಗಿಯಾಗುವುದರ ಹಿಂದೆ ವ್ಯಾವಹಾರಿಕ ಲೆಕ್ಕಚಾರ ಇಲ್ಲದಿಲ್ಲ. ಆದರೆ , ಆ ಗಣಿತವನ್ನು ಮೀರಿ ಜೀವಜಗತ್ತು ಪರಸ್ಪರ ಸ್ಪಂದಿಸುವ ಬಗೆಯನ್ನು ಓದೋರಂಗ ಆರ್ದ್ರವಾಗಿ ಕಟ್ಟಿಕೊಡುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50040554324251,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/oodoranga-novel-7307632.jpg?v=1767529326","url":"https:\/\/beetlebookshop.com\/kn\/products\/oodoranga-novel","provider":"Beetle Book Shop","version":"1.0","type":"link"}