ಹೆಚ್ಚುವರಿ ಮಾಹಿತಿ
ವಿವರಣೆ
ಇದು ದೃಷ್ಟಾಂತ ಕತೆ ಮಾದರಿಯ ಕೃತಿ. 'ಅಂಬೇಡ್ಕರ್ ಬೌದ್ಧ ಧರ್ಮವನ್ನು ಯಾಕೆ ಸ್ವೀಕರಿಸಿದರು?' ಎಂಬ ಪ್ರಶ್ನೆಗೆ ನಿಮ್ಮ ಪ್ರಕಾರ ಬೌದ್ಧ ಧರ್ಮ ಸ್ವೀಕರಿಸದೆ ಇನ್ನೇನು ಮಾಡಬಹುದಿತ್ತು?' ಎಂಬ ಪ್ರತಿ ಪ್ರಶ್ನೆಯನ್ನು ಹಾಕುವುದರ ಬದಲಿಗೆ ಬರೆದ ಉತ್ತರ ರೂಪಿ ಕೃತಿ. ಮುಖ್ಯ ಕಾಲಘಟ್ಟಗಳನ್ನು ಸಂಗ್ರಹವಾಗಿ, ಸರಳವಾಗಿ, ಸಮುಚಿತವಾಗಿ ನಿರೂಪಿಸಿರುವ ಕೃತಿ.
ಯಾವ ಪ್ರಮಾಣದ ತಾಪಮಾನದಲ್ಲಿ, ಯಾವ ಪ್ರಮಾಣದ ಶಾಖದಲ್ಲಿ ನೆಲದೊಡಲಲ್ಲಿ ಅಂಬೇಡ್ಕರ್ ಎಂಬ ಶುದ್ದ ವಜ್ರ ರೂಪುಗೊಂಡಿತು ಎಂಬುದನ್ನು ರಂಜನೀಯಗೊಳಿಸದೆ ನಮ್ಮೆದುರಿಗಿಟ್ಟಿರುವ ಹೃದ್ಯವಾದ ಬರವಣಿಗೆ ಇದು. 'ಬಾಬಾಗಳಿದ್ದಾರೆ. ಸಾಹೇಬರುಗಳೂ ಇದ್ದಾರೆ, ಆದರೆ ಬಾಬಾಸಾಹೇಬರು ಮಾತ್ರ ಒಬ್ಬರೇ ಒಬ್ಬರು' ಎನ್ನುವುದನ್ನು ಭಂತೆ ಭದಂತ ಆನಂದ ಕೌಸಲ್ಯಾಯನ ಕಾಣಿಸಿದ್ದಾರೆ. ಅವರ ಒಡನಾಡಿಯೂ ಆಗಿದ್ದ ಭಂತೆ ಭದಂತ ಅಪಾರ ಪ್ರೇಮ ಹಾಗೂ ಗೌರವದಿಂದ ಬರೆದಿರುವ ಈ ಕೃತಿ ಬದಲಾಗಲು ಒಪ್ಪದ ಸವರ್ಣೀಯ ಹಿಂದೂಗಳ ನಿರಂತರ ನಿಷ್ಕರುಣೆಗೆ ರೋಸಿ, ಪ್ರಜ್ಞಾ, ಕರುಣಾ, ಮೈತ್ರಿಯ ಬೋಧಿವೃಕ್ಷದ ನೆರಳಿಗೆ ಹೋಗಿ ನಿಂತ, ಆ ಮೂಲಕ ಮಾನವತೆಯ ಮಹಾಯಾನ ಆರಂಭಿಸಿದ ವೃತ್ತಾಂತವನ್ನು ಹೇಳುತ್ತದೆ.
ಸೂಕ್ಷ್ಮ ಮನಸ್ಸಿನ ಸಂವೇದನಾಶೀಲ ಲೇಖಕ ವಿಕ್ರಮ ವಿಸಾಜಿ ಇದನ್ನು ಎಷ್ಟು ಚೆನ್ನಾಗಿ ಅನುವಾದಿಸಿದ್ದಾರೆಂದರೆ ಓದುವಾಗ ಇದು ಅನುವಾದವೆಂಬ ನೆನರ್ಪ ಹುಟ್ಟುವುದಿಲ್ಲ. ಡಾ. ಅಂಬೇಡ್ಕರ್ ಅವರ ಜೀವನ, ಸಾಧನೆಯ ಬಗ್ಗೆ ಕನ್ನಡದಲ್ಲಿ ಸಾವಿರಾರು ಪುಟಗಳಷ್ಟು ಸಾಹಿತ್ಯ ಬಂದಿದೆ. ಹಾಗಿದ್ದೂ ಒಂದು ಚೊಕ್ಕವಾದ ಕೃತಿಯನ್ನು ಅನುವಾದಿಸಿ ಅಂಬೇಡ್ಕರ್ ಅವರಿಗೆ ಗೌರವಾರ್ಪಣೆ ಸಲ್ಲಿಸಿರುವ ವಿಕ್ರಮ ವಿಸಾಜಿಗೆ ಅಭಿನಂದನೆಗಳು.
ಡಾ. ಬಂಜಗೆರೆ ಜಯಪ್ರಕಾಶ
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.