{"product_id":"olive-mara-mattu-wheel-chair","title":"ಆಲಿವ್ ಮರ ಮತ್ತು ಚಕ್ರ ಕುರ್ಚಿ","description":"\u003cp data-mce-fragment=\"1\"\u003eಲೇಖಕರು: ವಸಂತ ಬನ್ನಾಡಿ \/ \u003cstrong data-mce-fragment=\"1\"\u003e\u003cb data-mce-fragment=\"1\"\u003eವಸಂತ ಬನ್ನಾಡಿ\u003c\/b\u003e\u003c\/strong\u003e\u003c\/p\u003e\n\u003cp data-mce-fragment=\"1\"\u003eಬಹುರೂಪಿ ಪ್ರಕಟಿಸಿದ ಪ್ಯಾಲೆಸ್ಟೀನ್ ಕುರಿತ ಕವಿತೆಗಳ ಸಂಗ್ರಹ\u003c\/p\u003e\n\u003cp data-mce-fragment=\"1\"\u003eಪ್ಯಾಲೆಸ್ಟೀನ್‌ನಲ್ಲಿ ನಡೆಯುತ್ತಿರುವುದು ಎಲ್ಲರ ಕಣ್ಣ ಮುಂದಿದೆ. \u003cbr\u003eಜಗತ್ತಿನ ಮನ ಕಲಕುವ ಕ್ರೌರ್ಯವಿದು. \u003cbr\u003eಕನ್ನಡದ ಮುಖ್ಯ ಬರಹಗಾರರಾದ ವಸಂತ ಬನ್ನಾಡಿ ಅವರು ಪ್ಯಾಲೆಸ್ಟೀನ್‌ನಲ್ಲಿನ ವಿದ್ಯಮಾನಗಳ ಬಗ್ಗೆ ನೊಂದು ಕವಿತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಅಲ್ಲಿನ ಇಂದಿನ ಪರಿಸ್ಥಿತಿ ಕುರಿತ ಮಹತ್ವದ ಚಿತ್ರಣವನ್ನೂ ಕೊಟ್ಟಿದ್ದಾರೆ.\u003c\/p\u003e\n\u003cp data-mce-fragment=\"1\"\u003eಬೆನ್ನುಡಿಯಲ್ಲಿ ಈ ಕೃತಿಯ ಮಹತ್ವದ ಬಗ್ಗೆ ಬರೆದದ್ದು ಇಲ್ಲಿದೆ-\u003cbr\u003e\u003cbr\u003eಕಗ್ಗತ್ತಲ ಕಾಲದಲ್ಲಿ ಹಾಡುವುದು ಉಂಟೆ?\u003cbr\u003eಹೌದು, ಹಾಡುವುದೂ ಉಂಟು\u003cbr\u003eಕಗ್ಗತ್ತಲ ಕಾಲವನ್ನು ಕುರಿತು!\u003cbr\u003eಎನ್ನುತ್ತಾನೆ ಬ್ರೆಕ್ಟ್.\u003cbr\u003e\u003cbr\u003eಬ್ರೆಕ್ಟ್‌ನ ಅಪರೂಪದ ಕವಿತೆಗಳನ್ನು ಅತ್ಯಂತ ಪ್ರೀತಿಯಿಂದ ಕನ್ನಡದ ಓದುಗರಿಗೆ ಹಂಚಿದ ವಸಂತ ಬನ್ನಾಡಿ ಅವರು ಅಂತಹ ಕಗ್ಗತ್ತಲ ಕಾಲದಲ್ಲಿ ಇರುವ ಪ್ಯಾಲೆಸ್ಟೀನ್ ಬಗ್ಗೆ ಬರೆದ ಕವಿತೆಗಳು ಇಲ್ಲಿವೆ.\u003cbr\u003e\u003cbr\u003eಬಿಡಾರದೊಳಗೆ ಮೂತಿ ತೂರಿಸಿದ ಒಂಟೆ ಈಗ ಗುಡಾರವನ್ನೇ ತನ್ನದೆಂದು ಸಾಧಿಸಲು ನಿಂತಿದೆ. ಇದಕ್ಕೆ ಪ್ರತಿಯಾಗಿ ಸಾವಿರಾರು ಜನರ ಮಾರಣ ಹೋಮ. ಸತ್ತ ಮಕ್ಕಳ ಸಂಖ್ಯೆಯೇ ಏಳು ಸಾವಿರ ಮೀರಿದೆ. ಸುಳ್ಳನ್ನು ಸತ್ಯವೆಂದು ಸಾಧಿಸಲು ಹೊರಟಿರುವ, ನಾಯಕರು, ಮಾಧ್ಯಮಗಳ ಮುಂದೆ ಪ್ಯಾಲೆಸ್ಟೀನ್ ಅಸಹಾಯಕವಾಗಿದೆ.\u003cbr\u003e\u003cbr\u003eಪ್ಯಾಲೆಸ್ಟೀನ್‌ನ ನೆಲದಲ್ಲಿ ಕವಿತೆಗಳು ತಬ್ಬಿಬ್ಬಾಗಿವೆ.\u003cbr\u003e\u003cbr\u003eಅಂತಹ ಸಂದರ್ಭದಲ್ಲಿ ವಸಂತ ಬನ್ನಾಡಿ ಅವರ ಈ ಕವಿತೆಗಳ ಗುಚ್ಛ ಶತಮಾನದ ನೋವನ್ನು ಮುಂದಿಡುತ್ತದೆಯಲ್ಲದೆ ನಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":47612820586779,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/olive-mara-mattu-wheel-chair-1759543.jpg?v=1767534245","url":"https:\/\/beetlebookshop.com\/kn\/products\/olive-mara-mattu-wheel-chair","provider":"Beetle Book Shop","version":"1.0","type":"link"}