ಹೆಚ್ಚುವರಿ ಮಾಹಿತಿ
ವಿವರಣೆ
ಲೇಖಕರು: ವಸಂತ ಬನ್ನಾಡಿ / ವಸಂತ ಬನ್ನಾಡಿ
ಬಹುರೂಪಿ ಪ್ರಕಟಿಸಿದ ಪ್ಯಾಲೆಸ್ಟೀನ್ ಕುರಿತ ಕವಿತೆಗಳ ಸಂಗ್ರಹ
ಪ್ಯಾಲೆಸ್ಟೀನ್‌ನಲ್ಲಿ ನಡೆಯುತ್ತಿರುವುದು ಎಲ್ಲರ ಕಣ್ಣ ಮುಂದಿದೆ.
ಜಗತ್ತಿನ ಮನ ಕಲಕುವ ಕ್ರೌರ್ಯವಿದು.
ಕನ್ನಡದ ಮುಖ್ಯ ಬರಹಗಾರರಾದ ವಸಂತ ಬನ್ನಾಡಿ ಅವರು ಪ್ಯಾಲೆಸ್ಟೀನ್‌ನಲ್ಲಿನ ವಿದ್ಯಮಾನಗಳ ಬಗ್ಗೆ ನೊಂದು ಕವಿತೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಅಲ್ಲಿನ ಇಂದಿನ ಪರಿಸ್ಥಿತಿ ಕುರಿತ ಮಹತ್ವದ ಚಿತ್ರಣವನ್ನೂ ಕೊಟ್ಟಿದ್ದಾರೆ.
ಬೆನ್ನುಡಿಯಲ್ಲಿ ಈ ಕೃತಿಯ ಮಹತ್ವದ ಬಗ್ಗೆ ಬರೆದದ್ದು ಇಲ್ಲಿದೆ-
ಕಗ್ಗತ್ತಲ ಕಾಲದಲ್ಲಿ ಹಾಡುವುದು ಉಂಟೆ?
ಹೌದು, ಹಾಡುವುದೂ ಉಂಟು
ಕಗ್ಗತ್ತಲ ಕಾಲವನ್ನು ಕುರಿತು!
ಎನ್ನುತ್ತಾನೆ ಬ್ರೆಕ್ಟ್.
ಬ್ರೆಕ್ಟ್‌ನ ಅಪರೂಪದ ಕವಿತೆಗಳನ್ನು ಅತ್ಯಂತ ಪ್ರೀತಿಯಿಂದ ಕನ್ನಡದ ಓದುಗರಿಗೆ ಹಂಚಿದ ವಸಂತ ಬನ್ನಾಡಿ ಅವರು ಅಂತಹ ಕಗ್ಗತ್ತಲ ಕಾಲದಲ್ಲಿ ಇರುವ ಪ್ಯಾಲೆಸ್ಟೀನ್ ಬಗ್ಗೆ ಬರೆದ ಕವಿತೆಗಳು ಇಲ್ಲಿವೆ.
ಬಿಡಾರದೊಳಗೆ ಮೂತಿ ತೂರಿಸಿದ ಒಂಟೆ ಈಗ ಗುಡಾರವನ್ನೇ ತನ್ನದೆಂದು ಸಾಧಿಸಲು ನಿಂತಿದೆ. ಇದಕ್ಕೆ ಪ್ರತಿಯಾಗಿ ಸಾವಿರಾರು ಜನರ ಮಾರಣ ಹೋಮ. ಸತ್ತ ಮಕ್ಕಳ ಸಂಖ್ಯೆಯೇ ಏಳು ಸಾವಿರ ಮೀರಿದೆ. ಸುಳ್ಳನ್ನು ಸತ್ಯವೆಂದು ಸಾಧಿಸಲು ಹೊರಟಿರುವ, ನಾಯಕರು, ಮಾಧ್ಯಮಗಳ ಮುಂದೆ ಪ್ಯಾಲೆಸ್ಟೀನ್ ಅಸಹಾಯಕವಾಗಿದೆ.
ಪ್ಯಾಲೆಸ್ಟೀನ್‌ನ ನೆಲದಲ್ಲಿ ಕವಿತೆಗಳು ತಬ್ಬಿಬ್ಬಾಗಿವೆ.
ಅಂತಹ ಸಂದರ್ಭದಲ್ಲಿ ವಸಂತ ಬನ್ನಾಡಿ ಅವರ ಈ ಕವಿತೆಗಳ ಗುಚ್ಛ ಶತಮಾನದ ನೋವನ್ನು ಮುಂದಿಡುತ್ತದೆಯಲ್ಲದೆ ನಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸುತ್ತದೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.