{"product_id":"obru-sudhyake-obru-gadlyake-srories-by-b-t-jahnavi","title":"ಒಬ್ರು ಸುಧ್ಯಾಕೆ... ಒಬ್ರು ಗದ್ಲ್ಯಕೆ : ಬಿ. ಟಿ. ಜಹ್ನವಿ ಅವರ ಕಥೆಗಳು","description":"ಬಿ.ಟಿ. ಜಾಹ್ನವಿ ಅವರು ತಮ್ಮ ಕಳೆದುಕೊಂಡವಳು ಮತ್ತು ಇತರ ಕಥೆಗಳು ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದವರು.\u003cbr data-mce-fragment=\"1\"\u003eಈ ಸಂಕಲನದ ವ್ಯಭಿಚಾರ','ವಿಮುಖ'ದಂತಹ ಕತೆಗಳನ್ನು ಓದಿದ ಹಲವರು ಬೆಚ್ಚಿಬಿದ್ದರೆ, ಕೆಲವರು ಅವುಗಳಲ್ಲಿ ಪ್ರಕಟವಾದ ಪ್ರಾಮಾಣಿಕತೆಗೆ ತಲೆಬಾಗಿದ್ದೂ ನಿಜ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಸಂಕಲನದ ಪ್ರತಿಯೊಂದು ಕತೆಯೊಳಗೂ, ಒಂದೊಂದು ಬಗೆಯ ಹುಡುಕಾಟವಿದೆ, ಈ ಹುಡುಕಾಟ ಜೀವಂತಿಕೆಯ ಲಕ್ಷಣವಾದಂತೆ ಬೆಳವಣಿಗೆಯ ಲಕ್ಷಣವೂ ತಮ್ಮ ಹುಡುಕಾಟದ ಫಲವಾಗಿ ಪರಿಹಾರವನ್ನು ಕೆಲವರು ಕತೆಯ ಕೊನೆಯಲ್ಲಿ ಕಂಡುಕೊಂಡರೆ, ಇನ್ನು ಕೆಲವರು ಕಾಣಲಾಗದೆ ಹತಾಶರಾಗುವುದಿದೆ. ಇನ್ನೊಬ್ಬರ ಉತ್ತರದ ಹುಡುಕಾಟಕ್ಕೆ ನಿಮಿತ್ತವಾಗುವವರು ಕೆಲವರಾದರೆ, ಇನ್ನೊಬ್ಬರಿಂದ ಉತ್ತರ ಕಂಡುಕೊಳ್ಳುವವರು ಕೆಲವರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಜಾಹ್ನವಿಯವರ ಕತೆಗಳನ್ನು ಓದುವಾಗ ನಮ್ಮ ಗಮನಸೆಳೆಯುವ ಅಂಶಗಳು ಹಲವು. ಅವರು ಕಥನಕ್ಕೆ ಎತ್ತಿಕೊಳ್ಳುವ ವಿಷಯದಲ್ಲಿ ತೋರುವ ದಿಟ್ಟತನ, ಅದರ ನಿರ್ವಹಣೆಯಲ್ಲಿ ಇರಿಸಿಕೊಳ್ಳುವ ಪ್ರಾಮಾಣಿಕತೆ ಮತ್ತು ಅವುಗಳನ್ನು ಕಥನವಾಗಿಸುವಲ್ಲಿ ಉಳಿಸಿಕೊಳ್ಳುವ ತನ್ಮಯತೆ - ಇವು ಓದುಗರನ್ನು ತಟ್ಟುತ್ತವೆ. ಭಾಷೆಯ ಸಾಂಪ್ರದಾಯಿಕ ನಿಯಮಗಳನ್ನು ನಿಸ್ಸಂಕೋಚವಾಗಿ ಗುಡಿಸಿ ಮೂಲೆಗಟ್ಟಿ, ವಾಕ್ಯವನ್ನು ಮುರಿದು ಕಟ್ಟುವ ಅವರ ಭಾಷಾಪ್ರಯೋಗವೂ ವಿಶಿಷ್ಟ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇವರ ಕತೆಗಳು ಒಂದು ಗುಂಪಿನ ಕಥನಗಳಲ್ಲ; ಹಳವಂಡಗಳಲ್ಲ. ಇವು ಎಲ್ಲ ವಯೋಮಾನ, ವರ್ಗ, ವರ್ಣ, ಲಿಂಗದ ವ್ಯಕ್ತಿಗಳ ಸೋಗಲಾಡಿತನ, ಇಬ್ಬಂದಿ ನಿಲುವು, ಅಂತಃಶಕ್ತಿ, ನಿರ್ವಿಯತ ಮತ್ತು ಹೊಸ ಛಳಕುಗಳನ್ನು ಗುರುತಿಸಿ ತೋರಿಸುವಲ್ಲಿ ಆಸಕ್ತವಾಗಿವೆ. ಅಂತೆಯೇ ನಮ್ಮೊಳಗನ್ನು ತುಂಬುತ್ತವೆ.\u003cbr data-mce-fragment=\"1\"\u003e ಬಿ.ಟಿ. ಜಾಹ್ನವಿಯವರು ಇನ್ನಿಷ್ಟು ಬರೆಯಲಿ ಎಂದು ಆಶಿಸುವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಸಬಿಹಾ ಭೂಮಿಗೌಡ","brand":"BEETLE BOOK SHOP","offers":[{"title":"Default Title","offer_id":47816616280347,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/obru-sudhyake-obru-gadlyake-srories-by-bt-jahnavi-5358225.jpg?v=1767534969","url":"https:\/\/beetlebookshop.com\/kn\/products\/obru-sudhyake-obru-gadlyake-srories-by-b-t-jahnavi","provider":"Beetle Book Shop","version":"1.0","type":"link"}