{"product_id":"nudi-padi-a-collection-of-humorous-moral-essays-written-by-gangavathi-pranesh","title":"ನುಡಿ ಪಡಿ - ಗಂಗಾವತಿ ಪ್ರಾಣೇಶ್ ಅವರು ಬರೆದಿರುವ ಹಾಸ್ಯಮಯ ನೈತಿಕ ಪ್ರಬಂಧಗಳ ಸಂಗ್ರಹ","description":"\u003cspan data-mce-fragment=\"1\"\u003eಗಂಗಾವತಿ ಬೀಚಿ ಎಂದೇ ಖ್ಯಾತರಾದ ಗೆಳೆಯ ಪ್ರಾಣೇಶ್‌ `ನುಡಿ ಪಡಿ'ಯಲ್ಲಿ ಸತ್ಯಕ್ಕೇ ಹೆಚ್ಚು ಒತ್ತು ನೀಡಿರುವುದು ಕಟ್ಟೆಯ ಕಲ್ಲು ಕಟ್ಟೆಗೆ ಸೇರಿದಂತಾಗಿದೆ.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e“ಮಾತೆಂಬುದು ಜ್ಯೋತಿರ್ಲಿಂಗ” ಎಂದರು ಜಗಜ್ಯೋತಿ ಬಸವಣ್ಣನವರು. ಮಾತು ಜ್ಯೋತಿರ್ಲಿಂಗವಾಗಬೇಕಾದರೆ ಆಲೋಚನೆಗಳ ಹಣತೆಯಲ್ಲಿ ಅಧ್ಯಯನದ ತೈಲವನ್ನೆರೆದು ಸುಜ್ಞಾನದ ಬತ್ತಿಯನ್ನಿರಿಸಿ ಸುಬೋಧೆಯ ಕಿಡಿಯನ್ನು ತಾಗಿಸಿದರೆ ಮಾತ್ರ ಸಾಧ್ಯ.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಪ್ರಾಣೇಶರ ಈ ಪುಸ್ತಕದಲ್ಲಿ ಹಲವಾರು ಪ್ರಖರ ವಿಷಯಗಳನ್ನು ಕುರಿತಾದ ಲೇಖನಗಳಿವೆ. ಇಂದಿನ ಜನಜೀವನದ `ಅತಿ'ಗಳನ್ನು ಹಿಂದಿನ ಕಾಲಘಟ್ಟದ `ಹಿತ'ಕ್ಕೆ ಹೋಲಿಸುವ ಪರಿಯು ಹಿಂದಿನ ಪೀಳಿಗೆಗೆ ಮುದವನ್ನೂ, ಇಂದಿನ ಪೀಳಿಗೆಗೆ ಎಚ್ಚರಿಕೆಯನ್ನೂ, ಮುಂದಿನ ಪೀಳಿಗೆಗೆ ಗತವೈಭವದ ಮೆಲುಕನ್ನೂ ನೀಡುವಲ್ಲಿ ಈ ಲೇಖನಗಳು ಸಲವಾಗಿವೆ.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e“ನುಡಿ ಪಡಿ” ಪುಸ್ತಕದ ಹೆಸರೇ ಸೂಚಿಸುವಂತೆ ಇದು ನುಡಿಗಳ ಸೋಪಾನ. ಮಧ್ವರ ಬೋಧನೆಗಳಿಂದ ಹಿಡಿದು ಹೊರದೇಶದ ಆಚಾರ-ವಿಚಾರಗಳವರೆಗೆ ಹಬ್ಬಿರುವ ಈ ಸೋಪಾನದ ಮೆಟ್ಟಿಲುಗಳಲ್ಲಿ ಅನೇಕ ಬೋಧಪ್ರದ ವಿಷಯಗಳಿವೆ. ಹಳೆಯ ಚಿತ್ರಗೀತೆಗಳ ಸುಮಧುರ ಜಾಡಿನಲ್ಲಿ ದೊರಕುವ ಆನಂದದ ಪಲುಕುಗಳಿವೆ. ಪ್ರಾಣೇಶನೆಂಬ ಮಾಗಿದ ಮರವು ಬಿಟ್ಟಿರುವ ಈ “ನುಡಿ ಪಡಿ” ಎಂಬ ಲವು ರುಚಿಕರವಾಗಿದೆ, ಮೆಲ್ಲಲು ಯೋಗ್ಯವಾಗಿದೆ, ಚರ್ವಿತಚರ್ವಣಕ್ಕೆ ಗ್ರಾಸವಾಗಲು ಶಕ್ತವಾಗಿದೆ.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e-ಎನ್‌. ರಾಮನಾಥ್‌\u003c\/span\u003e","brand":"BEETLE BOOK SHOP","offers":[{"title":"Default Title","offer_id":46893777748251,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nudi-padi-a-collection-of-humorous-moral-essays-written-by-gangavathi-pranesh-7955442.jpg?v=1767534667","url":"https:\/\/beetlebookshop.com\/kn\/products\/nudi-padi-a-collection-of-humorous-moral-essays-written-by-gangavathi-pranesh","provider":"Beetle Book Shop","version":"1.0","type":"link"}