{"product_id":"nudi-kandaya-articles-written-by-dr-hulikunte-murthy","title":"ನುಡಿ ಕಂದಾಯ (ಡಾ. ಹುಲಿಕುಂಟೆ ಮೂರ್ತಿಯವರು ಬರೆದಿರುವ ಲೇಖನಗಳು)","description":"\u003cp\u003eನುಡಿ ಕಂಡಾಯ'ದ 'ನಡೆ ಬಂಡಾಯವನ್ನು ನೇರವಾಗಿ ನಮ್ಮೆದೆಯ ನೆಲಕ್ಕೆ ಅಕ್ಷರದ ನೇಗಿಲ ಮೂಲಕ ಬರಹವೆಂಬ ಬೀಜಗಳ ಬಿತ್ತುತ್ತಾ ಚಿಂತನೆಯ ಬೆಳೆಯ ಎಳೆಗಳು ಮೂಡುವಂತೆ ಮಾಡುವ ಈ ಪುಸ್ತಕ ನಿಜಕ್ಕೂ ಸಂಗ್ರಹ ಯೋಗ್ಯ. ಸಮಕಾಲೀನ ಸಂಕಟಗಳಿಗೆ ಸ್ಪಂದಿಸುವ ಯುವ ಮನಸ್ಕೊಂದರ ಒಡಲಾಳದ ಬೆರಗು-ಬೇಗುದಿಗಳನ್ನು ಬಿಡಿ ಬರಹಗಳ ಮೂಲಕ ಬಿಚ್ಚಿಟ್ಟ ಹುಲಿಕುಂಟೆ ಮೂರ್ತಿಯವರು ನಾವು ಯೋಚಿಸಿ ಉಪೇಕ್ಷಿಸಿದ್ದನ್ನು ಶ್ರಮ-ಶ್ರದ್ದೆಯಿಂದ ಹೆಣೆದಿಟ್ಟಿದ್ದಾರೆ. ಮೊಬೈಲ್ ಪರದೆಯ ಮೇಲೆ ಬೆರಳ ತುದಿಗಳಿಂದಲೇ ಸಾವಿರಾರು ಸುದ್ದಿಗಳನ್ನು ಸುಮ್ಮನೇ ಸೇರಿಸುತ್ತಾ ಹೋಗುವ ಈ ದರಿದ್ರ- ದಿಕ್ಕೆಟ್ಟ ದಿನಮಾನಗಳಲ್ಲಿ ದಿವಿನಾಗಿ ಕೂತು ದನಿ ಇಲ್ಲದವರ ದುಮ್ಮಾನಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಸನ್ನಿವೇಶಗಳೊಂದಿಗೆ ಮುಖಾಮುಖಿಯಾಗುತ್ತಾ ಮುಖೇಡಿತನವಿಲ್ಲದೆ ಮನದಾಳದ ಸಂದಿಗ್ಧತೆಗಳನ್ನು ಸಾದರಪಡಿಸುವ ಅವರ ಅದು ಅನುಸಂಧಾನ ಈ ಲೇಖನಗಳಲ್ಲಿ ಅವಿರ್ಭವಿಸಿದೆ.\u003c\/p\u003e\n\u003cp\u003eಕಲ್ಲುಬಂಡೆಯ ಕಿಂಡಿಯೊಳಗೆ ಕುಡಿಯೊಡೆದ ಕಿರು ಗಿಡಗಳಂತೆ ಕಾತರ ಹುಟ್ಟಿಸುವ, ಕಾಳಜಿಯುಕ್ಕಿಸುವ ಮತ್ತು ಕರುಳ ಕಿಚ್ಚೆಬ್ಬಿಸುವ ಬರಹಗಳನ್ನು ಕಕ್ಕುಲಾತಿಯಿಂದ ಕಣ್ಣಕೊಟ್ಟ ಈ ಹೊತ್ತಿಗೆಯು ಹುಲಿಕುಂಟೆಯವರ ಹೋರಾಟದ ಮನಸ್ಥಿತಿಯ ಒತ್ತರಿಕೆಯಾಗಿ ಒಡಮೂಡಿದೆ ಹಾಗೂ ಓದುವವರ ಒಡಲನ್ನು ಒದ್ದೆಯಾಗಿಸುತ್ತದೆ ಮತ್ತು ಒದ್ದಾಡಿಸುತ್ತದೆ.\u003c\/p\u003e\n\u003cp\u003eಕೆ.ಎನ್. ವಿಜಯ್ ಕುಮಾರ್\u003c\/p\u003e","brand":"BEETLE BOOK SHOP","offers":[{"title":"Default Title","offer_id":49587376357659,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/nudi-kandaya-articles-written-by-dr-hulikunte-murthy-4397534.jpg?v=1767532025","url":"https:\/\/beetlebookshop.com\/kn\/products\/nudi-kandaya-articles-written-by-dr-hulikunte-murthy","provider":"Beetle Book Shop","version":"1.0","type":"link"}