{"product_id":"nooru-novugala-nookache-doora","title":"Nooru Novugala Nookache Doora | ನೂರು ನೋವುಗಳ ನೂಕಾಚೆ ದೂರ","description":"\u003cp class=\"MsoNormal\"\u003e\u003cspan lang=\"KN\"\u003eನೋವು ಹಾಗೂ ದುಃಖದ ಜೊತೆ ವ್ಯವಹರಿಸುವ ರೀತಿ ಒಬ್ಬರಿಗಿಂತ ಒಬ್ಬರದು ವಿಭಿನ್ನ. ಅದರಲ್ಲೂ ಸಾವಿನ ದುಃಖದ ಬಗ್ಗೆ ನಾವೆಲ್ಲ ಬಹಳ ಸೂಕ್ಷ್ಮವಾಗಿ ವ್ಯವಹರಿಸುತ್ತೇವೆ. ಒಮ್ಮೆ ನಮ್ಮವರನ್ನು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡೆವು ಎಂದರೆ ಅದೆಷ್ಟು ಕೋಟಿ ಕೊಟ್ಟರೂ ಅವರು ಮರಳಿ ಸಿಗುವುದಿಲ್ಲ. ಯಾವ ದೇಶಕ್ಕೆ ಹೋಗಿ ಹುಡುಕಿದರೂ ಕಾಣುವುದಿಲ್ಲ. ಯಾರಿಂದಲೂ ಮರಳಿ ಕರೆತರಲು ಸಾಧ್ಯವಿಲ್ಲ. ಇಂಥ ಅಸಹಾಯಕತೆಯ ಪರಮಾವಧಿಯನ್ನು ನಾವೆಲ್ಲರೂ ಒಂದಲ್ಲ ಒಂದು ದಿನ ತಲುಪಿಯೇ ತಲುಪುತ್ತೇವೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಅಂಥ ಪರಮಾವಧಿ ದುಃಖದ ಬೇರೆ ಬೇರೆ ಮುಖಗಳನ್ನು ಪರಿಚಯಿಸುತ್ತದೆ ಈ ಪುಸ್ತಕ. ದುಃಖದಿಂದ ನಾವು ಹೇಗೆಲ್ಲ ಬದಲಾಗುತ್ತೇವೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಮ್ಮ ಸಂಬಂಧಗಳು ಹೇಗೆ ಅರ್ಥವಾಗುತ್ತವೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಾವು ಏನನ್ನು ಕಳೆದುಕೊಳ್ಳುತ್ತೇವೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಮ್ಮ ಭಾವನಾತ್ಮಕ ನಷ್ಟದಲ್ಲಿ ನಮಗೇನಾಗುತ್ತದೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಮ್ಮ ದೇಹದ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದನ್ನೆಲ್ಲ ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eದುಃಖ ಅಥವಾ ಬೇಸರ ಒಂದು ಸಾಮಾನ್ಯ ಸಂಗತಿಯಲ್ಲ. ನಮ್ಮನ್ನು ಅನಾಮತ್ತಾಗಿ ಬದಲಾಯಿಸಿ ಬಿಡುವ ಅಸಾಮಾನ್ಯ ಭಾವನೆ ಅದು. ಇಂಥ ನೋವುಂಡು ಕುಗ್ಗಿ ಹೋದವರ ಕತೆಯೂ ಇದರಲ್ಲಿದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eಜೊತೆಗೆ ಬದುಕನ್ನು ಮತ್ತೆ ಕಟ್ಟಿಕೊಂಡವರ ಬಗ್ಗೆಯೂ ಈ ಪುಸ್ತಕದಲ್ಲಿ ಓದಬಹುದು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"MsoNormal\"\u003e\u003cspan lang=\"KN\"\u003eದುಃಖವನ್ನು ಅದದ್ದಿಂತೆ ಅನುಭವಿಸುವುದು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅದರಿಂದ ಹೊರ ಬರುವುದು ಹಾಗೂ ಘನತೆಯಿಂದ ಬಾಳುವುದು ಈ ಮೂರನ್ನೂ ವಿವರಿಸುತ್ತಾ ಹೋಗುತ್ತದೆ\u003cspan\u003e \u003c\/span\u003e\u003c\/span\u003e\u003cspan lang=\"KN\"\u003e\u003cspan style=\"font-family: Calibri, sans-serif;\"\u003e'\u003c\/span\u003e\u003c\/span\u003e\u003cspan lang=\"KN\"\u003eನೂರು ನೋವುಗಳ ನೂಕಾಚೆ ದೂರ\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಪುಸ್ತಕ.\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":52716995182875,"sku":null,"price":144.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/1_NooruNovugalaNukacheDoora_CoverPage_FINAL.jpg?v=1785727625","url":"https:\/\/beetlebookshop.com\/kn\/products\/nooru-novugala-nookache-doora","provider":"Beetle Book Shop","version":"1.0","type":"link"}