{"product_id":"niranjana-aayda-kategalu","title":"ನಿರಂಜನ ಆಯ್ದ ಕಥೆಗಳು - ಸಮಗ್ರ ಕಥಾ ಸಂಕಲನ | Niranjana Aayda Kategalu","description":"\u003cp\u003eನಿರಂಜನರು ಕಥೆಗಾಗಿ ಆಯ್ದುಕೊಳ್ಳುವ ಆವರಣಗಳಲ್ಲಿ ವೈವಿಧ್ಯತೆಯಿದೆ. ಉತ್ತರ ಕನ್ನಡದ ಕಾರವಾರದಿಂದ ಹಿಡಿದು ಬೆಂಗಳೂರು, ಮುಂಬೈ ಮಹಾನಗರ ಗಳನ್ನೂ ದಾಟಿ, ರಷ್ಯಾದ ಟಾಸ್ಕೆಂಟ್ ನಂತಹ ವಿದೇಶಿ ಆವರಣವನ್ನೂ ಹಾದು, ಅನಿರ್ದಿಷ್ಟವಾದ ಈ ಭೂಮಿಯ ಮೇಲಿನ ಯಾವ ಊರೂ ಆಗಿರಬಹುದಾದವರೆಗೆ ಅವರ ಆವರಣಗಳ ವ್ಯಾಪ್ತಿ ಇದೆ. ಒಂದೇ ಕಥೆಯಲ್ಲಿಯೂ ಸಹಿತ ಆವರಣ ಬದಲಾಗುತ್ತಲೇ ಇರುತ್ತದೆ. ಇದೇ ರೀತಿ ಅವರ ಕಥೆಗಳು ಆವರಿಸಿಕೊಳ್ಳುವ ಕಾಲಾವಧಿ ಸಹಿತ ಕನಿಷ್ಟ ಹಲವು ದಿನಗಳಿಂದ ಹಿಡಿದು ಹಲವು ವರ್ಷಗಳವರೆಗಿನ ವ್ಯಾಪ್ತಿ ಇದೆ. ಇವೆರಡರ ಜೊತೆಗೆ ಎಲ್ಲಾ ಕಥೆಗಳು ಪಾತ್ರಗಳಿಂದ ಕಿಕ್ಕಿರಿದಿರುವುದನ್ನೂ ಕಾಣಬಹುದು. ಹೀಗೆ ಯಾವುದು ಕಾದಂಬರಿಯ ಲಕ್ಷಣವಾಗಿದೆಯೋ, ಆ ಎಲ್ಲಾ ಲಕ್ಷಣಗಳನ್ನು ನಾವು ನಿರಂಜನರ ಕಥೆಗಳಲ್ಲಿ ಕಾಣುತ್ತೇವೆ. ಅಂದರೆ ಅವರ ಕಥೆಗಳ ಆಕಾರವು ಸಣ್ಣ ಕಥೆಯಾಗಿದ್ದು, ಅವುಗಳ ಆಂತರಿಕ ತರ್ಕ ಕಾದಂಬರಿಯಾಗಿದ್ದಾಗಿದೆ. ಸ್ಥಳ ಹಾಗೂ ಕಾಲದ ವಿಸ್ತಾರವನ್ನು ಬಯಸದ ಕಥೆಗಳೆಲ್ಲ ಬಹುತೇಕವಾಗಿ ವಿನ್ಯಾಸವನ್ನು ಹೊಂದಿವೆ. ಮುಖಾಮುಖಿಯ ವಿನ್ಯಾಸವನ್ನು ಹೊಂದಿವೆ,.\u003cbr\u003e\u003cbr\u003e- ಎಂ ಜಿ ಹೆಗಡೆ\u003c\/p\u003e","brand":"BEETLE BOOK SHOP","offers":[{"title":"Default Title","offer_id":51334265536795,"sku":null,"price":126.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/niranjana-aayda-kategalu-5685670.jpg?v=1767528367","url":"https:\/\/beetlebookshop.com\/kn\/products\/niranjana-aayda-kategalu","provider":"Beetle Book Shop","version":"1.0","type":"link"}