{"product_id":"netraavatiyalli-nettaru","title":"ನೆತ್ರಾವತಿಯಲ್ಲಿ ನೆತ್ತರು","description":"\u003cspan data-mce-fragment=\"1\"\u003eಲೇಖಕ ನವೀನ್ ಸೂರಿಂಜೆ ಅವರ ಕೃತಿ-ನೇತ್ರಾವತಿಯಲ್ಲಿ ನೆತ್ತರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ವಿವಿಧ ಕೋಮುಗಳ ಮಧ್ಯೆ ನಡೆದ ಘರ್ಷಣೆಗಳು, ಅವು ಸಾಮರಸ್ಯದ ಬದುಕಿನ ಮೇಲೆ ಉಂಟು ಮಾಡಿದ ಮರ್ಮಾಘಾತಗಳು, ಅಮಾನವೀಯ ಕೃತ್ಯಗಳು, ಅನಾಗರಿಕರ ವರ್ತನೆಗಳು ಸೌಜನ್ಯ-ಸಭ್ಯತೆ-ಸಂಸ್ಕೃತಿ-ಸಂಸ್ಕಾರಗಳು ಎಂಬ ಪರಿಕಲ್ಪನೆಗಳಿಗೆ ಆರ್ಥವಿಲ್ಲದಂತೆ ಮಾಡಿದ ಘಟನೆಗಳನ್ನು ಲೇಖಕರು ಕೇವಲ ಯಾಂತ್ರಿಕವಾಗಿ ದಾಖಲಿಸಿಲ್ಲ. ಬದಲಾಗಿ, ಇಂತಹ ಕೃತ್ಯಗಳ ಹಿಂದಿನ ಸಂಚುಗಳನ್ನು ಬಯಲಿಗೆಳೆದಿದ್ದಾರೆ. ಪ್ರಜಾಪ್ರಭುತ್ದ ವ್ಯವಸ್ಥೆಯಲ್ಲಿ ಜಾತ್ಯತೀತ ಮನೋಭಾವಕ್ಕೆ ಮಾಡಿದ ಧಕ್ಕೆಯನ್ನು, ಸಂಕುಚಿತ ಮನಸ್ಸಿನ ಕುತಂತ್ರಗಳನ್ನು ಸಹ ದಾಖಲಿಸಿದ್ದಾರೆ. ಸಂಸ್ಕೃತಿಗಳು ನದಿಯ ದಂಡೆಯ ಮೇಲೆ ವಿಕಾಸಗೊಂಡಿವೆ ಎಂದು ಹೇಳಲಾಗುತ್ತದೆ. ಆದರೆ, ನೇತ್ರಾವತಿಯ ನದಿ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಧರ್ಮದ ಹೆಸರಲ್ಲಿ ನೆತ್ತರು ಹರಿದಿರುವ ಕಪ್ಪು- ಅಮಾನವೀಯ ಘಟನೆಗಳ ಸರಮಾಲೆಯಾಗಿ ಇತಿಹಾಸವನ್ನೂ ಈ ಕೃತಿ ದಾಖಲಿಸಿದೆ.\u003c\/span\u003e","brand":"BEETLE BOOK SHOP","offers":[{"title":"Default Title","offer_id":48090579271963,"sku":"","price":166.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/netraavatiyalli-nettaru-7242149.jpg?v=1767534067","url":"https:\/\/beetlebookshop.com\/kn\/products\/netraavatiyalli-nettaru","provider":"Beetle Book Shop","version":"1.0","type":"link"}