{"product_id":"nelson-mandela-jeevana-charitre","title":"ನೆಲ್ಸನ್ ಮಂಡೇಲಾ ಜೀವನ ಚರಿತ್ರೆ","description":"ಒಂದು ಸಾರ್ಥಕ ಜೀವನದ ಅಮೋಘ ನಿರೂಪಣೆ ಇರುವ 'ನೆಲ್ಸನ್ ಮಂಡೇಲಾ ಜೀವನ ಚರಿತ್ರೆ'ಯು\n\u003cdiv\u003eಜಗತ್ತಿನ ಇಂದಿನ ತುಡಿತಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸುವಂತಹ ಮೇರುಕೃತಿ, ತನ್ನನ್ನು\u003c\/div\u003e\n\u003cdiv\u003eವೈಭವಿಸಿಕೊಳ್ಳುವ ಗೋಜಿಗೆ ಎಂದೂ ಹೋಗದೆ ಅನನ್ಯ ವಿಮೋಚನಾ ಸಮರವನ್ನು ಮುನ್ನಡೆಸುವ\u003c\/div\u003e\n\u003cdiv\u003eನಾಯಕನೊಬ್ಬನ ಮಹದ್ಗುಣಗಳಿಗೆ ಆದರ್ಶಪ್ರಾಯನಾದ ಮಂಡೇಲಾರ ಬಹುಮುಖೀ ಜೀವನದ\u003c\/div\u003e\n\u003cdiv\u003eಸಮಗ್ರ ಚಿತ್ರಣ ಇಲ್ಲಿ ದೊರೆಯುತ್ತದೆ. ಜಗತ್ಪಸಿದ್ಧ ರಿವೋನಿಯಾ ವಿಚಾರಣೆಯು ನಮ್ಮ ಜೀವಿತಕಾಲದ\u003c\/div\u003e\n\u003cdiv\u003eಮೌಲಿಕ ದಸ್ತಾವೇಜು ಮತ್ತು ದಕ್ಷಿಣ ಆಫ್ರಿಕಾದ ವಿಮೋಚನಾ ಹೋರಾಟವು ಎಲ್ಲ ಕಾಲಗಳಿಗೂ ಮತ್ತು\u003c\/div\u003e\n\u003cdiv\u003eಎಲ್ಲೆಡೆಗೂ ಅತ್ಯಂತ ಪ್ರಸ್ತುತವಾದ ಸಂಗತಿ. ಅಧಿಕೃತ ಪುರಾವೆಗಳ ಮೂಲಕ ಸಮರ್ಥವಾಗಿ ಡಾ. ಎಂ.\u003c\/div\u003e\n\u003cdiv\u003eವೆಂಕಟಸ್ವಾಮಿ ಅವರು ಮಂಡೇಲಾ ಮತ್ತವರ ಸಹ-ಹೋರಾಟಗಾರರ ಜೀವನಗಾಥೆಯನ್ನು ಆಪ್ತವಾಗಿ\u003c\/div\u003e\n\u003cdiv\u003eಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಮತ್ತು ವಂದನೆಗಳು ಸಲ್ಲುತ್ತವೆ.\u003c\/div\u003e\n\u003cdiv\u003e- ಡಾ. ಜಿ. ರಾಮಕೃಷ್ಣ\u003c\/div\u003e\n\u003cdiv\u003e\u003c\/div\u003e\n\u003cdiv\u003eಡಾ. ಎಂ. ವೆಂಕಟಸ್ವಾಮಿಯವರು ರಚಿಸಿರುವ 'ನೆಲ್ಸನ್ ಮಂಡೇಲಾ ಜೀವನ ಚರಿತ್ರೆ'ಯು ಲೇಖಕರ\u003c\/div\u003e\n\u003cdiv\u003eಅಪಾರ ಅಧ್ಯಯನದಿಂದ ಮೂಡಿಬಂದಿದೆ. ಮಂಡೇಲಾ ಅವರ ಬಾಲ್ಯದಿಂದ ಆರಂಭಿಸಿ ಭೌತಿಕ\u003c\/div\u003e\n\u003cdiv\u003eಅಂತ್ಯದವರೆಗಿನ ದಟ್ಟ ವಿವರಗಳ ಮಾಹಿತಿಯಿಂದ ತುಂಬಿಕೊಂಡಿರುವ ಈ ಕೃತಿಯ ನಿರೂಪಣೆಯಲ್ಲಿ\u003c\/div\u003e\n\u003cdiv\u003eಅಧಿಕೃತ ವರದಿಗಾರಿಕೆಯ ಲಕ್ಷಣ ಎದ್ದುಕಾಣುತ್ತದೆ. ನೆಲ್ಸನ್ ಮಂಡೇಲಾ ಅವರು ಜಗತ್ತು ಕಂಡ\u003c\/div\u003e\n\u003cdiv\u003eಬಹುದೊಡ್ಡ ಪ್ರಜಾಪ್ರಭುತ್ವವಾದಿ ಹೋರಾಟಗಾರರಲ್ಲಿ ಒಬ್ಬರಾಗಿರುವುದರಿಂದ, ಈ ಕೃತಿ ರಚನೆ ಮತ್ತು\u003c\/div\u003e\n\u003cdiv\u003eಪ್ರಕಟಣೆ, ಅವರಿಗೆ ಅರ್ಪಿಸಿದ ಪ್ರಜಾಸತ್ತಾತ್ಮಕ ಗೌರವವಾಗಿದೆ.\u003c\/div\u003e\n\u003cdiv\u003e– ಡಾ. ಬರಗೂರು ರಾಮಚಂದ್ರಪ್ಪ.\u003c\/div\u003e\n\u003cdiv\u003e\u003c\/div\u003e\n\u003cdiv\u003eಅನ್ಯದೇಶಗಳನ್ನು ಅತಿಕ್ರಮಿಸಿಕೊಂಡ ಯೂರೋಪಿನ ವಸಾಹತುಶಾಹಿಗಳು ಅಲ್ಲಿನ ಸಂಪತ್ತನ್ನು ಲೂಟಿ\u003c\/div\u003e\n\u003cdiv\u003eಮಾಡುವುದಷ್ಟೇ ಅಲ್ಲದೆ ತಮ್ಮ ಆಡಳಿತದುದ್ದಕ್ಕೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎಗ್ಗಿಲ್ಲದೆ\u003c\/div\u003e\n\u003cdiv\u003eಮಾಡುತ್ತಾ ಬಂದರು. ದಕ್ಷಿಣ ಆಫ್ರಿಕಾದ ಬುಡಕಟ್ಟು ಜನರಿಗೆ ಬಂಟುಸ್ತಾನ್‌ಗಳೆಂಬ ಕೊಳೆಗೇರಿಗಳನ್ನು\u003c\/div\u003e\n\u003cdiv\u003eನಿರ್ಮಿಸಿ ತಮ್ಮ ಸೇವೆಗಾಗಿಯೇ ಇರಿಸಿಕೊಂಡಿದ್ದರು. ಅಪಾರ್ಥೀಡ್‌ನಂಥ ಘೋರ ಅಪಮಾನಕ್ಕೆ\u003c\/div\u003e\n\u003cdiv\u003eಈಡುಮಾಡಿದರು. ಅಂಥ ಸನ್ನಿವೇಶದಲ್ಲಿ ಸ್ವಾತಂತ್ರ್ಯದ ಸೂರ್ಯೋದಯದಂತೆ ನೆಲ್ಸನ್ ಮಂಡೇಲಾ\u003c\/div\u003e\n\u003cdiv\u003eಉದಯಿಸಿದರು. ವಿಜ್ಞಾನ ಬರವಣಿಗೆಗೆ ಹೆಸರಾದ ಮಿತ್ರ ಎಂ. ವೆಂಕಟಸ್ವಾಮಿ, ಮಂಡೇಲಾ ಜೀವನ\u003c\/div\u003e\n\u003cdiv\u003eಕಥನವನ್ನು ಸಾದ್ಯಂತವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.\u003c\/div\u003e\n\u003cdiv\u003e– ಡಾ. ಮೂಡ್ನಾಕೂಡು ಚಿನ್ನಸ್ವಾಮಿ\u003c\/div\u003e\n\u003cdiv\u003e\u003c\/div\u003e\n\u003cdiv\u003e1980ರ ದಶಕದಲ್ಲಿ ದಕ್ಷಿಣ ಆಫ್ರಿಕಾದ ಕರಿಯರ ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ಸಂದರ್ಭದಲ್ಲಿ\u003c\/div\u003e\n\u003cdiv\u003eಕನ್ನಡಿಗರಿಗೆ ಆ ಹೋರಾಟಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಸಿಗುತ್ತಿರಲಿಲ್ಲ. 1990ರಲ್ಲಿ ಕನ್ನಡದಲ್ಲಿ\u003c\/div\u003e\n\u003cdiv\u003eಮಂಡೇಲಾ ಜೀವನ ಚರಿತ್ರೆ ಪ್ರಕಟವಾದಾಗ, ಭಾರತೀಯ ಭಾಷೆಗಳಲ್ಲಿ ಬಂದ ಮೊದಲ ಪುಸ್ತಕವಾಯಿತು.\u003c\/div\u003e\n\u003cdiv\u003eಈಗ 33 ವರ್ಷಗಳ ನಂತರ ಮಂಡೇಲಾರ ವಿಸ್ತ್ರತ ಜೀವನ ಚರಿತ್ರೆ ಪ್ರಕಟವಾಗುತ್ತಿರುವುದು ಹೆಮ್ಮೆಯ\u003c\/div\u003e\n\u003cdiv\u003eವಿಚಾರ. ಡಾ. ಎಂ. ವೆಂಕಟಸ್ವಾಮಿಯವರ ಶ್ರಮ ಸಾರ್ಥಕವಾಗಿದೆ.\u003c\/div\u003e\n\u003cdiv\u003e– ರಂಜಾನ್ ದರ್ಗಾ\u003c\/div\u003e","brand":"BEETLE BOOK SHOP","offers":[{"title":"Default Title","offer_id":44519510769947,"sku":"","price":315.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/nelson-mandela-jeevana-charitre-2933976.png?v=1767536166","url":"https:\/\/beetlebookshop.com\/kn\/products\/nelson-mandela-jeevana-charitre","provider":"Beetle Book Shop","version":"1.0","type":"link"}