{"product_id":"neevu-kaanire-mattu-mallige","title":"ನೀವು ಕಾಣಿರೆ ಮಟ್ಟು ಮಲ್ಲಿಗೆ","description":"\u003cp\u003eಅಕ್ಕಮಹಾದೇವಿ ಒಂದು ವಿಸ್ಮಯ ಬೆಡಗು. ಕಳೆದ ಎಂಟು ಶತಮಾನಗಳಿಂದ ಕನ್ನಡ ಭಾಷೆಯಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಅರ್ಥಗಳ ಜೀವಂತ ಮರ, ಅಕ್ಕನ ಬದುಕನ್ನು ಕುರಿತ ಹಲವು ಜನಪ್ರಿಯ ಕಥನಗಳು ನಾಡ ತುಂಬ ಪ್ರಚಲಿತವಾಗಿವೆ. ಹೆಚ್ಚಿನ ನಿರೂಪಣೆಗಳು ಅಕ್ಕ ಕಾರಣಜನ್ಮಳು ಎಂಬ ಪೌರಾಣಿಕತೆಯನ್ನು ನೆಚ್ಚಿಕೊಂಡಿವೆ. ಶರಣರ ಬದುಕನ್ನು ಪುರಾಣಗೊಳಿಸುವುದು ಅವರು ನಡೆಸಿದ ಹೋರಾಟ ಮತ್ತು ಬಾಳ ಘನತೆಯನ್ನು ಕಿರಿದಾಗಿಸುತ್ತದೆ. ಆದ ಕಾರಣ ಅಕ್ಕನ ಬದುಕನ್ನು ಮನುಷ್ಯ ಸಾಮರ್ಥ್ಯದ ವಿಸ್ತರಣೆಯಾಗಿ ಅಲಿಯಬೇಕಾದ ಜರೂರು ಈಗ ನಮ್ಮ ಮುಂದೆ ಇದೆ. ಸ್ತ್ರೀವಾದ ಇಂದು ಚರ್ಚೆ ಮಾಡಲು ಪ್ರಯತ್ನಿಸುತ್ತಿರುವ ಎಷ್ಟೋ ಹೆಣ್ಣು ಕೇಂದ್ರಿತ ದಿಟ ಪ್ರಶ್ನೆಗಳನ್ನು ಅಕ್ಕ ತನ್ನ ವಚನಗಳಲ್ಲಿ ಅಭಿವ್ಯಕ್ತಿಸಿರುವುದನ್ನು ನಾವು ಮನಗಾಣಬೇಕಿದೆ. ಕವಿ ಕಲ್ಪನೆಯ ನಿರೂಪಣೆಗಳಲ್ಲಿ ಕವಿಯ ಆತ್ಮಚರಿತೆಯ ಅಂಶಗಳು ಹುದುಗಿರುತ್ತವೆ ಎಂಬ ನಿಲುವಿನಿಂದ ಈ ನಾಟಕವನ್ನು ರೂಪಿಸಲಾಗಿದೆ. ಅಕ್ಕನ ವಚನಗಳು ಪಿಸು ನುಡಿಯುವ ಆಕೆಯ ಬದುಕಿನ ನಾಟಕೀಯ ತಿರುವುಗಳನ್ನು ದೃಶ್ಯವಾಗಿಸುವ ಪ್ರಯತ್ನ ಈ ನಾಟಕವಾಗಿದೆ. ಇದು ನೀರನ್ನು ಕೈಯಿಂದ ಹಿಡಿಯುವ ಪ್ರಯತ್ನವೆಂಬ ಸಂಗತಿಯೂ ನನ್ನ ನೆನಪಿನಲ್ಲದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":48157067378971,"sku":"","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/neevu-kaanire-mattu-mallige-3763386.jpg?v=1767534426","url":"https:\/\/beetlebookshop.com\/kn\/products\/neevu-kaanire-mattu-mallige","provider":"Beetle Book Shop","version":"1.0","type":"link"}