ಹೆಚ್ಚುವರಿ ಮಾಹಿತಿ
ವಿವರಣೆ
ಬಾಲ್ಯದಲ್ಲಿ ನಾನು ಕಂಡ ಇಬ್ಬರು ಅಪೂರ್ವ ಪ್ರೇಮಿಗಳು ಮತ್ತೆ ಮತ್ತೆ ಕನಸಿನಲ್ಲಿ ಬಂದು ನಮ್ಮ ಕತೆ ಬರಿ ಅಂತ ಅಂಗಲಾಚುತ್ತಿದ್ದರು. ಅವರನ್ನು ನಿರ್ಲಕ್ಷಿಸಿ ಓಡಾಡುತ್ತಿದ್ದೆ. ಇವನೊಬ್ಬ ಉಪಯೋಗಕ್ಕೆ ಬರದ ಜುಜುಬಿ ಕಾದಂಬರಿಕಾರ ಅಂತ ಅವರಿಬ್ಬರೂ ನನ್ನ ಬಗ್ಗೆ ಅಪಪ್ರಚಾರ ಶುರುಮಾಡಿದರು. ಇದು ಯಾಕೋ ಅತಿರೇಕಕ್ಕೆ ಹೋಗುತ್ತಿದೆ. ಅನ್ನಿಸಿ ಅವರನ್ನು ಕರೆಸಿಕೊಂಡು, ಮಾತಾಡಿ, ನಿಮ್ಮ ಕತೆ ಬರೆಯುತ್ತೇನೆ ಅಂದೆ.
ಬರೆಯುತ್ತಾ ಹೋದ ಹಾಗೇ ನಾನೊಬ್ಬ ಸೆಕೆಂಡ್ ರೇಟ್ ಕಾದಂಬರಿಕಾರ ಅನ್ನಿಸತೊಡಗಿತು. ತಾರುಣ್ಯದ ತೀವ್ರತೆ, ಹುಮ್ಮಸ್ಸು, ತಕರಾರು, ತಲ್ಲಣಗಳನ್ನು ಮಾತಿನಲ್ಲಿ ಹಿಡಿದಿಡುವ ಕಷ್ಟ ಅರಿವಾಗತೊಡಗಿತು. ಅವರಿಬ್ಬರೂ ನನ್ನ ಮೇಲೆ ಸೇಡು ತೀರಿಸಿಕೊಳ್ಳಲಿಕ್ಕೆಂದೇ ವಿಚಿತ್ರವಾದ ವರ್ತಿಸುತ್ತಿದ್ದರು. ಬೇಕಂತಲೇ ದಾರಿ ತಪ್ಪುತ್ತಿದ್ದರು. ನನ್ನ ಬುದ್ಧಿಮಾತುಗಳನ್ನೂ ಅನುಭವದ ಹಿತನುಡಿಗಳನ್ನೂ ಕೇಳದೇ, ತಮಗಿಷ್ಟ ಬಂದ ಹಾಗೆ ಬದುಕುತ್ತಿದ್ದರು.
ಕೊನೆಗೂ ಪಟ್ಟು ಬಿಡದೇ ನಾನು ಅವರನ್ನೊಂದು ದಾರಿಗೆ ತಂದೆ ಅನ್ನುವಷ್ಟರಲ್ಲಿ ಅನಾಹುತವೊಂದು ನಡೆದುಹೋಯಿತು. ಜೀವನದಲ್ಲಿ ಏನು ನಡೆಯಬೇಕು ಅನ್ನುವುದನ್ನು ಜೀವನವೇ ನಿರ್ಧರಿಸುತ್ತದೆ ಅಂತ ಗೊತ್ತಾಯಿತು.
ಈ ಕಾದಂಬರಿ ಓದಿದ ನಿಮಗೂ ನಾನೊಬ್ಬ ಎರಡನೇ -ದರ್ಜೆಯ ಕಾದಂಬರಿಕಾರ ಅನ್ನಿಸಬಹುದು. ಹಾಗೇನಾದರೂ ಅನ್ನಿಸಿದರೆ ನಾನು ಸರಿಯಾಗಿಯೇ ಬರೆದಿದ್ದೇನೆ ಅಂತ ಸಮಾಧಾನವಾಗುತ್ತದೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.