ಹೆಚ್ಚುವರಿ ಮಾಹಿತಿ
ವಿವರಣೆ
ಕರ್ನಾಟಕವನ್ನು ಅರಿಯುವುದು ಹೇಗೆ? ಅದಕ್ಕೆ ಒದಗುವ ಸಹಾಯಕ ಸಾಹಿತ್ಯ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭವಲ್ಲ. ಪ್ರತಿಯೊಬ್ಬ ಕನ್ನಡಿಗನೂ ವಿದ್ವಾಂಸನಾಗಿ, ಸಂಶೋಧಕನಾಗಿ ಇರಲು ಸಾಧ್ಯವಿಲ್ಲ. ಹೆಬ್ಬೊತ್ತಿಗೆಗಳನ್ನು ಓದಿ ವಿಷಯಗಳನ್ನು ಸಂಗ್ರಹಿಸುವುದೂ ಸಾಧ್ಯವಿಲ್ಲ. ಪ್ರೌಢಶಾಲೆಯ ಶಿಕ್ಷಣವನ್ನೊ, ಪದವಿಪೂರ್ವ ತರಗತಿಗಲ ಓದನ್ನೊ ಪಡೆದಿರುವ ಕನ್ನಡಿಗನಿಗೆ ತನ್ನನ್ನು ತನ್ನ ಪರಂಪರೆಯನ್ನು ಅರಿತುಕೊಳ್ಳಲು ಇರುವ ಸಾಧನ ಸಂಪತ್ತು ಯಾವಾಗಲೂ ವಿರಳವಾದದ್ದೆ. ಅಂಥ ಸಂಪತ್ತು ಅಧಿಕೃತವೆನ್ನಿಸಿರುವುದು ಇನ್ನೂ ವಿರಳ. ಈ ದಿಸೆಯಲ್ಲಿ ಪ್ರಕಟಗೊಂಡಿರುವ ಒಂದು ಪುಸ್ತಕ ‘ನಮ್ಮ ನಾಡು ಕರ್ನಾಟಕ’. ಕರ್ನಾಟಕದ ಪರಂಪರೆ ಎಷ್ಟು ವಿಸ್ತಾರವಾದದ್ದು, ಶ್ರೀಮಂತವಾದದ್ದು ಎಂದರೆ ಅದನ್ನೆಲ್ಲ ಒಂದು ಕೈಪಿಡಿಯನ್ನಾಗಿ ಭಟ್ಟಿ ಇಳಿಸುವುದು ಸುಲಭವಾದ ಕೆಲಸವಲ್ಲ. ಆ ಕೆಲಸಕ್ಕೆ ಕೈ ಹಾಕುವವರಿಗೆಲ್ಲ ಎದುರಾಗುವ ದೊಡ್ಡ ಸಮಸ್ಯೆಯೆಂದರೆ, ಯಾವುದನ್ನು ಬಿಡುವುದು, ಯಾವುದನ್ನು ಹಿಡಿಯುವುದು ಎಂಬ ಆಯ್ಕೆಯದು. ಪರಂಪರೆಯನ್ನು ಪ್ರತಿನಿಧಿಸುವ ಎಲ್ಲ ಮುಖಗಳನ್ನೂ ಚೆನ್ನಾಗಿ ಅರಿತವರು ಮಾತ್ರವೇ ಈ ಕೆಲಸವನ್ನು ಮಾಡಬಲ್ಲರು. ನಮ್ಮ ನಾಡಿನ ಬಗೆಗೆ ಸೂಕ್ತ ತಿಳುವಳಿಕೆ ಕೊಡಬಲ್ಲ ಒಂದು ಪುಸ್ತಕವನ್ನು ರಚಿಸಿರುವ ಡಾ|| ಎಚ್.ಎಸ್. ಗೋಪಾಲ ರಾಯರು ಈ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಿದ್ದಾರೆ. ‘ನಮ್ಮ ನಾಡು ಕರ್ನಾಟಕ’ ಎಂಬ ವರ ಈ ಪುಸ್ತಕ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ತಕ್ಕಷ್ಟು ಚಿಕ್ಕ ವ್ಯಾಪ್ತಿಯಲ್ಲಿ ತುಂಬ ಸಮರ್ಪಕವಾಗಿ ನಿರೂಪಿಸುತ್ತದೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.